ಕಣ್ಣಿನ ಸಮಸ್ಯೆ, ದೃಷ್ಟಿದೋಷ ಸೇರಿದಂತೆ ವೈದ್ಯರಿಗೆ ಸವಾಲಾದ ಕೇಸ್ ಗಳನ್ನು ಸಂಪೂರ್ಣ ಉಚಿತವಾಗಿ ಸರಿಪಡಿಸುತ್ತಾರೆ ಈ ನಾಟಿ ವೈದ್ಯ.

Health & fitness
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಜೀವನಕ್ಕೆ ಬೇಕಾಗುವಂತಹ ವಸ್ತುಗಳಿಗೆ ತಾವು ದುಡಿದದ್ದನ್ನು ಖರ್ಚು ಮಾಡುವುದಕ್ಕಿಂತ ಹೆಚ್ಚಾಗಿ ವೈದ್ಯರಿಗಾಗಿ ಜನರು ಖರ್ಚು ಮಾಡುವ ಪರಿಸ್ಥಿತಿ ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ. ಆದರೆ ಇಂದು ನಾವು ಮಾತನಾಡಲು ಹೊರಟಿರುವುದು ಇದೇ ವಿಚಾರಕ್ಕೆ ಸಂಬಂಧಿಸಿದ ಇದಕ್ಕೆ ತದ್ವಿರುದ್ಧವಾಗಿರುವಂತಹ ಒಂದು ಸ್ಟೋರಿ. ಹಾಗಿದ್ದರೆ ಬನ್ನಿ ಈ ವಿಚಾರದ ಕುರಿತಂತೆ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ.

ಹೌದು ನಾವು ಮಾತನಾಡುತ್ತಿರುವುದು ಕಲಬುರ್ಗಿ ಜಿಲ್ಲೆಯ ಕಮಲಾಪುರ ಎಂಬ ತಾಲೂಕಿನಲ್ಲಿರುವ ಹನುಮಂತನ ದೇವಸ್ಥಾನದ ಬಳಿ ಇರುವ ಗುರುವಪ್ಪ ನೊರೋಣ ಎಂಬ ನಾಟಿ ವೈದ್ಯರ. ಸಾಮಾನ್ಯವಾಗಿ ದೃಷ್ಟಿ ಸಮಸ್ಯೆ ಇದ್ದಾಗ ಹೈ-ಫೈ ವೈದ್ಯರಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಜನರನ್ನು ನಾವು ನೋಡಿರುತ್ತೇವೆ. ಆದರೆ ಕೇವಲ ಆಯುರ್ವೇದಿಕ್ ಗಿಡಮೂಲಿಕೆಗಳ ಸಹಾಯದಿಂದಾಗಿ ಗುರುವಪ್ಪ ಅಂದರ ಬಾಳಿಗೆ ಬೆಳಕನ್ನು ತರುವಂತಹ ಮಹತ್ಕಾರ್ಯವನ್ನು ಮಾಡುತ್ತಿದ್ದಾರೆ.

ಇವರು ನೀಡುವಂತಹ ನಾಟಿ ಮದ್ದು ಅಂಧರಿಗೆ ಹಾಗೂ ಅಂಧತ್ವಕ್ಕೆ ರಾಮಬಾಣವಾಗಿದೆ. ಸಂಪೂರ್ಣ ಅಂಧತ್ವ ದೃಷ್ಟಿ ದೋಷ ಕಣ್ಣಿನಲ್ಲಿ ಇನ್ನಿತರ ಸಮಸ್ಯೆಗಳು ಇರುವುದು ಈ ಎಲ್ಲ ಸಮಸ್ಯೆಗಳಿಗೂ ಕೂಡ ಗುರುವಪ್ಪ ಅವರು ನೀಡುವಂತಹ ನಾಟಿ ಮದ್ದು ಸಂಪೂರ್ಣ ಶಮನಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ದೃಷ್ಟಿ ದೋಷಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಗೂ ಕೂಡ ಇಲ್ಲಿ ಪರಿಹಾರ ದೊರಕುತ್ತದೆ. ಸರ್ಟಿಫೈಡ್ ವೈದ್ಯರು ಕೂಡ ಸರಿ ಮಾಡಲಾಗದಂತಹ ದೃಷ್ಟಿ ದೋಷವನ್ನು ಇಲ್ಲಿ ಗುರುವಪ್ಪನವರು ತಮ್ಮ ನಾಟಿ ಮದ್ದಿನಿಂದ ಸರಿ ಮಾಡುತ್ತಿದ್ದಾರೆ.

ಅದರಲ್ಲಿಯೂ ವಿಶೇಷವಾಗಿ ಗುರುವಪ್ಪನವರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಉಚಿತವಾಗಿಯೇ ಈ ಸೇವೆಯನ್ನು ಹಲವಾರು ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದಾರೆ. ಗುರುವಪ್ಪ ನವರಿಗೆ ಈ ವಿದ್ಯೆ ಅವರ ತಂದೆ ಶಿವಪ್ಪನವರಿಂದ ಒಲಿದು ಬಂದಿದ್ದು. ಅವರು ಕೂಡ ಹೀಗೆ ನಾಟಿ ಮದ್ದಿನಿಂದ ಜನರ ದೃಷ್ಟಿ ದೋಷವನ್ನು ನಿವಾರಿಸುವ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದರು.

ಒಟ್ಟಾರೆಯಾಗಿ ಕಳೆದ 22 ವರ್ಷಗಳಿಂದಲೂ ಈ ಸೇವೆಯನ್ನು ಉಚಿತವಾಗಿ ಜನರಿಗೆ ಮಾಡಿಕೊಂಡು ಬರುತ್ತಿರುವ ಗುರುವಪ್ಪನವರ ಈ ಕಾರ್ಯ ಇನ್ನು ಹೆಚ್ಚಿನ ಜನರ ಗಮನಕ್ಕೆ ಬಂದು ತಕ್ಕುದಾದ ಗೌರವಗಳು ಸಿಗಲಿ ಎಂಬುದಾಗಿ ಹಾರೈಸೋಣ.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *