ದೇಶದಲ್ಲಿ ರಾಜ್ಯದಲ್ಲಿ ನಮ್ಮ ನಿಮ್ಮ ಊರುಗಳಲ್ಲಿ ಕೊರೋನಾ ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಬಹುತೇಕ ಎಲ್ಲರೂ ಮನೆಯಲ್ಲಿ ಕೂರುವ ಪರಿಸ್ಥಿತಿ ಬಂದೊದಗಿದೆ ಆದರೂ ಕೊರೋನಾ ಕಡಿಮೆ ಆಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ನಾವು ಕೆಲವೊಂದು ನಿಯಮಗಳನ್ನು ಪಾಲಿಸಿದಲ್ಲಿ ಕೊರೋನಾ ಕಡಿಮೆ ಮಾಡಬಹುದು ಅದರ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ .

ಒಂದು ಕಾಲದಲ್ಲಿ ಐವತ್ತು ನೂರು ಕೊರೋನಾ ಸೋಂಕಿತರ ವರದಿಯಾಗುತ್ತಿದ್ದವು ಆದರೆ ಈಗ ಪ್ರತೀ ಜಿಲ್ಲೆಯಲ್ಲಿ ಐದು ಆರು ಸಾವಿರಕ್ಕಿಂತಲೂ ಹೆಚ್ಚು ವರದಿಯಾಗುತ್ತಿದೆ. ಒಂದು ಸಾವಿರ ವರದಿ ಇದ್ದ ಬೆಂಗಳೂರಿನಲ್ಲಿ ಈಗ ಇಪ್ಪತ್ತು ಸಾವಿರಕ್ಕಿಂತಲೂ ಹೆಚ್ಚು ವರದಿ ದಾಖಲಾಗುತ್ತಿದೆ. ಈಗಾಗಲೇ ಲಕ್ಷಾಂತರ ಜನರಿಗೆ ಸೋಂಕು ತಗುಲಿದ್ದು ಪರಿಸ್ಥಿತಿ ಗಂಭೀರವಾಗಿದೆ. ಇಂತಹ ಸಂದರ್ಭದಲ್ಲಿ ಸೋಂಕಿತರ ಸಂಖ್ಯೆ ಕಡಿಮೆ ಮಾಡುವುದು ನಮ್ಮ ಕೈಯಲ್ಲಿದೆ. ಪಾಸಿಟಿವ್ ಬಂದವರು ತುಂಬಾ ಮುಂಜಾಗ್ರತೆ ವಹಿಸಬೇಕು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದರ ಜೊತೆಗೆ ತಮ್ಮಿಂದ ಬೇರೆಯವರಿಗೆ ಸೋಂಕು ತಗುಲದಂತೆ ನೋಡಿಕೊಳ್ಳಬೇಕು. ಪರೀಕ್ಷೆ ಮಾಡಿಸದೆ ಇರುವವರು ಸಹ ಶೀತ ಜ್ವರ ಕೆಮ್ಮು ಸೀನು ಮೈ ಕೈ ನೋವು ಅಂತಹ ಲಕ್ಷಣಗಳು ಕಾಣಿಸಿಕೊಂಡಲ್ಲಿ ಮುಂಜಾಗ್ರತೆ ವಹಿಸಬೇಕು.

ಲಾಕ್ ಡೌನ್ ಇದ್ದ ಕಾರಣ ಒಬ್ಬರಿಗೆ ಸೋಂಕು ತಗುಲಿದಾಗ ಮನೆಯವರಿಗೂ ಸೋಂಕು ತಗಲುತ್ತದೆ ಹೀಗಾಗಿ ಕೊರೋನಾ ದೃಡ ಪಟ್ಟವರು ಹಾಗೂ ಕೊರೋನಾ ಲಕ್ಷಣ ಇದ್ದರೂ ಪರೀಕ್ಷೆ ಮಾಡಿಸದೆ ಇರುವವರು ಜಾಗ್ರತೆ ವಹಿಸಿದರೆ ಕೊರೋನಾ ಸೋಂಕಿತರ ಸಂಖ್ಯೆಯನ್ನು ಕಡಿಮೆ ಮಾಡವುದರ ಜೊತೆಗೆ ಈಗಿನ ಪರಿಸ್ಥಿತಿಯನ್ನ ಸುಧಾರಿಸಬಹುದು ಆಸ್ಪತ್ರೆಗಳ ಮೇಲಿನ ಹೊರೆಯನ್ನು ಕಡಿಮೆ ಮಾಡಬಹುದು. ಆಕ್ಸಿಜನ್ ಸಮಸ್ಯೆ ತಕ್ಕಮಟ್ಟಿಗೆ ಸುಧಾರಿಸಬಹುದು ಇಲ್ಲದಿದ್ದರೆ ದೇಶದಲ್ಲಿ ಪ್ರತಿ ಮನೆಗಳೇ ಆಸ್ಪತ್ರೆಗಳಂತಾಗಬಹುದು. ನಮ್ಮವರನ್ನು ದೇಶದ ಜನರನ್ನು ರಕ್ಷಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ.

ಕೊರೋನಾ ಪರೀಕ್ಷೆ ಮಾಡಿಸಿದ ಬಹುತೇಕ ಜನರಿಗೆ ಪಾಸಿಟಿವ್ ವರದಿ ಬರುತ್ತಿದ್ದು ಇದರರ್ಥ ಎಲ್ಲದು ಸುಳ್ಳು ಅಂತಲ್ಲ ಇದು ಸಮುದಾಯದಲ್ಲಿ ಆ ಮಟ್ಟಿಗೆ ಹರಡಿದೆ ಎಂದರ್ಥ. ಕರ್ನಾಟಕದಲ್ಲಿ ಕೆಲವು ದಿನಗಳಿಂದ ಒಂದುವರೆ ಲಕ್ಷ ಪರೀಕ್ಷೆ ಗಳನ್ನ ನಡೆಸಲಾಗುತ್ತಿದೆ ಇದರಲ್ಲಿ ಸುಮಾರು ಐವತ್ತು ಸಾವಿರದ ಹತ್ತಿರ ದೃಢವಾಗುತ್ತದೆ ಪರೀಕ್ಷೆ ನಡೆಸುತ್ತಿರುವುದು ಕೇವಲ ಕೊರೋನಾ ಲಕ್ಷಣ ಇರುವವರಿಗೆ ಹಾಗೂ ಅವರ ಪಾಸಿಟಿವ್ ಬಂದವರ ಸಂಪರ್ಕದಲ್ಲಿ ಇರುವವರೆಗೆ ಮಾತ್ರ ಇಂಥವರಲ್ಲಿ ಮೂರು ಜನರಲ್ಲಿ ಒಬ್ಬರಿಗೆ ಪಾಸಿಟಿವ್ ಬರುತ್ತಿದೆ. ಪಾಸಿಟಿವ್ ಬಂದವರಿಗೆ ಸಣ್ಣ ಹಾಗೂ ಮಧ್ಯಮ ಲಕ್ಷಣ ಇರುವವರಿಗೆ ಮನೆಯಲ್ಲೇ ಪ್ರತ್ಯೇಕವಾಗಿ ಇರಬೇಕು ಲಕ್ಷಣಗಳು ಗಂಭೀರವಾಗಿದ್ದರೆ ಹಾಗೂ ಉಸಿರಾಡಲು ತೊಂದರೆ ಯಾಗುತ್ತಿದ್ದರೆ ಆಸ್ಪತ್ರೆಗೆ ದಾಖಲಾಗಬೇಕು.

ಕೊರೋನಾ ಸೋಂಕಿತರು ಮನೆಯಲ್ಲಿದ್ದರೆ ಮನೆಯವರು ವಹಿಸಬೇಕಾದ ಕೆಲವೊಂದು ಕ್ರಮಗಳು ಏನೆಂದರೆ ಹೋಂ ಐಸೋಲೇಶನಲ್ಲಿ ಇರುವ ರೋಗಿ ಪ್ರತ್ಯೇಕ ಕೋಣೆಯಲ್ಲಿ ಇರಬೇಕು ಅದರಲ್ಲಿ ಸ್ನಾನ ಗೃಹ ಹಾಗೂ ಶೌಚಾಲಯ ಪ್ರತ್ಯೇಕ ಇದ್ದರೆ ಉತ್ತಮ ಮನೆ ಚಿಕ್ಕದಾಗಿದ್ದು ಪ್ರತ್ಯೇಕ ಕೋಣೆಯ ವ್ಯವಸ್ಥೆ ಇಲ್ಲದಿದ್ದರೆ ಕೋಣೆಯ ಮದ್ಯದಲ್ಲಿ ಪರದೆ ಹಾಕಿಕೊಳ್ಳಬೇಕು ಹಾಗೂ ಬೇರೆಯವರು ಇವರ ಸಂಪರ್ಕಕ್ಕೆ ಬರದಂತೆ ನೋಡಿಕೊಳ್ಳಬೇಕು. ಮನೆಯವರು ರೋಗಿಯ ಜೊತೆ ಮಾತನಾಡುವಾಗ ಮಾಸ್ಕ್ ಹಾಕಿಕೊಳ್ಳಬೇಕು ಉಪಯೋಗಿಸಿದ ಮಾಸ್ಕನ್ನು ಕಸದಬುಟ್ಟಿಗೆ ಎಸೆಯಬೇಕು ಹಳ್ಳಿಗಳಲ್ಲಿ ಬಚ್ಚ ಲು ಒಲೆಗೆ ಹಾಕಿದರೆ ಉತ್ತಮ. ಮನೆಯಲ್ಲಿ ಸೋಂಕಿತರಿಗೆ ಆರೈಕೆ ಮಾಡುವವರು ತುಂಬಾ ವಯಸ್ಸಾಗದೇ ಇರುವವರು ಹಾಗೂ ಬೇರೆ ಕಾಯಿಲೆಯಿಂದ ಬಳಲದೆ ಇರುವವರನ್ನು ನಿಯೋಜಿಸಬೇಕು ಹಾಗೂ ಅವರು ಸ್ಯಾನಿಟೈಸರ್ ಆಗಾಗ ಬಳಸಬೇಕು ಜೊತೆಗೆ ಆಹಾರ ಹಾಗೂ ಔಷದ ನೀಡುವವರು ಕೈ ತೊಳೆದುಕೊಳ್ಳಬೇಕು.

ಸೋಂಕಿತ ವ್ಯಕ್ತಿಗೆ ಪ್ರತ್ಯೇಕ ಪಾತ್ರೆಗಳನ್ನು ಇರಿಸಿ ಹಾಗೂ ಅದನ್ನು ಉಪಯೋಗಿಸಿದ ನಂತರ ಗ್ಲೌಸ್ ಧರಿಸಿ ಬಿಸಿನೀರಿನಲ್ಲಿ ತೊಳೆಯಬೇಕು. ಸೋಂಕಿತ ವ್ಯಕ್ತಿ ಬಳಸಿದ ಯಾವುದೇ ವಸ್ತುವನ್ನು ಮನೆಯ ಇತರರು ಬಳಸದಂತೆ ನೋಡಿಕೊಳ್ಳಬೇಕು ಸೋಂಕಿತರ ಆರೈಕೆಯಲ್ಲಿ ನಿರತರಾದವರಿಗೆ ಕೊರೋನಾ ಲಕ್ಷಣಗಳು ಕಂಡು ಬಂದಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸೋಂಕಿತ ವ್ಯಕ್ತಿಯು ಬಳಸಿದ ಬಟ್ಟೆಗಳನ್ನು ಪ್ರತ್ಯೇಕ ತೊಳೆದು ಬಿಸಿಲಿನಲ್ಲಿ ಒಣಗಿಸಿ ಸ್ನಾನ ಮಾಡಬೇಕು ರೋಗಿಯ ಆಹಾರದಲ್ಲಿ ಹಣ್ಣು ತರಕಾರಿ ಹಾಗೂ ಬೇಳೆಕಾಳುಗಳು ಹೆಚ್ಚಾಗಿ ಉಪಯೋಗಿಸಬೇಕು ಹಾಗೂ ಬಿಸಿನೀರು ಹೆಚ್ಚಾಗಿ ಕುಡಿಯುವುದು ಉತ್ತಮ. ಮಾತ್ರೆಗಳನ್ನು ಸರಿಯಾಗಿ ರೋಗಿಗೆ ನೀಡಬೇಕು ರೋಗಿಯಲ್ಲಿ ಹೆಚ್ಚಿನ ಗಂಭೀರ ಲಕ್ಷಣಗಳು ಕಂಡು ಬಂದಲ್ಲಿ ಜಿಲ್ಲಾ ಕೋವಿಡ್ ಸಹಾಯವಾಣಿ ಒಂದು ನಾಲ್ಕು ನಾಲ್ಕು ಒಂದು ಸೊನ್ನೆ ಅಥವಾ ಒಂದು ಸೊನ್ನೆ ನಾಲ್ಕು ಅಥವಾ ಒಂದು ಸೊನ್ನೆ ಏಳು ಐದಕ್ಕೆ ಕರೆ ಮಾಡಿ ಆಸ್ಪತ್ರೆಗೆ ದಾಖಲಾಗಬೇಕು. ಸೋಂಕಿತರು ಮತ್ತು ಅವರ ಮನೆಯವರು ಇಂತಿಷ್ಟು ದಿನದವರೆಗೆ ಮನೆಯಿಂದ ಹೊರಗೆ ಹೋಗದೆ ಏನೇ ಸಹಾಯಬೇಕಾದರು ನೆರೆಹೊರೆಯವರನ್ನು ಹಾಗೂ ಸಂಬಂಧಿಕರ ನೆರವನ್ನು ಪಡೆಯಬೇಕು ಅವರಿಗೆ ಬೇಕಾದ ವಸ್ತುಗಳು ತರಕಾರಿಗಳನ್ನು ತಂದು ಕೊಡುವಾಗ ಮಾಸ್ಕ್ ಧರಿಸಬೇಕು.

ಸದ್ಯದ ಪರಿಸ್ಥಿತಿಗೆ ಸರ್ಕಾರವನ್ನು ದೂಷಿಸುವುದು ಸರಿಯಲ್ಲ ಸರ್ಕಾರದ ಜೊತೆಗೆ ಜನರ ಪಾತ್ರವೂ ಇದೆ ನಿಯಮಗಳನ್ನು ಪಾಲಿಸಿ ಎಂದಾಗ ಜನರು ಅದನ್ನು ಮಾಡಲಿಲ್ಲ ಅದರ ಪರಿಣಾಮ ಇಂದು ಹಲವಾರು ಪ್ರಕರಣಗಳು ದಾಖಲಾಗಿವೆ. ಒಂದು ತಿಂಗಳು ಸರಿಯಾಗಿ ದೇಶದ ಪ್ರತಿಯೊಬ್ಬ ನಾಗರಿಕ ಸರ್ಕಾರದ ನಿಯಮಗಳನ್ನು ಪಾಲಿಸಿದಲ್ಲಿ ಕೊರೋನಾ ಕಡಿಮೆ ಮಾಡಬಹುದು ಸರ್ಕಾರದಿಂದ ಸರಿಯಾದ ಸಮಯಕ್ಕೆ ಕೊರೋನಾ ರಿಪೋರ್ಟ್ ಹಳ್ಳಿ ಕಡೆಗಳಲ್ಲಿ ತಡವಾಗಿ ಬರುತ್ತಿದ್ದರಿಂದ ಸೋಂಕಿತರ ಪ್ರಮಾಣ ಹೆಚ್ಚಳವಾಗುತ್ತದೆ. ಲಸಿಕಾ ಅಭಿಯಾನ ವಿಫಲವಾಗಿದ್ದರಿಂದ ಸೋಂಕಿತರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗುತ್ತಿದೆ ಹಾಗೂ ನಮ್ಮ ದೇಶ ಎರಡು ಲಸಿಕೆಯ ಮೇಲೆ ಅವಲಂಬಿತವಾಗಿದ್ದು ವಿಶಾಲ ಜನಸಂಖ್ಯೆಗೆ ಪೂರೈಸಲು ಸಾಧ್ಯವಾಗುತ್ತಿಲ್ಲ ಇಂತಹ ಕಷ್ಟ ಸಂದರ್ಭದಲ್ಲಿ ಜನರು ಸರ್ಕಾರದ ಜೊತೆ ಸೇರಿ ನಿಯಮಗಳನ್ನು ಸರಿಯಾಗಿ ಪಾಲಿಸಿ ಕೊರೋನಾ ಮುಕ್ತ ದೇಶವನ್ನಾಗಿಸೋಣ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!