ಬಿಕ್ಕಳಿಕೆ ನಮಗೆಲ್ಲರಿಗೂ ಆಗಾಗ ಎದುರಾಗುತ್ತಲೇ ಇರುತ್ತದೆ. ಇದಕ್ಕೆ ಕಾರಣಗಳು ಕೆಲವಾರಿ ದ್ದರೂ ಯಾವ ಸಮಯದಲ್ಲಿ ಬಿಕ್ಕಳಿಕೆ ಎದುರಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಊಟದ ಅಥವಾ ಕೆಲವು ಪಾನೀಯಗಳ ಸೇವನೆಯ ಬಳಿಕ ಹೆಚ್ಚಾಗಿ ಕಾಣಿಸಿಕೊಳ್ಳಲು ನಮ್ಮ ಗಂಟಲಿನ ಮೂಲಕ ಹಾದು ಹೋಗುವ ವಾಯು ಕಾರಣ. ಉಳಿದಂತೆ ಬೇರೆ ಸಮಯದಲ್ಲಿಯೂ ಎದುರಾಗಬಹುದು. ಆದರೆ ನಾಲ್ಕು ಜನರ ನಡುವೆ ಇದ್ದಾಗ ಅಥವಾ ಮೌನ ವಹಿಸಬೇಕಾದ ಸ್ಥಳದಲ್ಲಿದ್ದಾಗ ಬಿಕ್ಕಳಿಕೆ ಬಂದರೆ ಇದನ್ನು ತಡೆಯಲೂ ಆಗದೇ ಬಿಕ್ಕಳಿಸಿದವರನ್ನು ಅಕ್ಕ ಪಕ್ಕದವರು ದುರುಗುಟ್ಟಿಕೊಂಡು ನೋಡಿದಾಗ ಆಗುವ ಮುಜುಗರ ಮಾತ್ರ ವಿವರಿಸಲು ಸಾಧ್ಯವಿಲ್ಲದಂತಹದ್ದು. ಸಾಮಾನ್ಯವಾಗಿ ಎದುರಾಗುವ ಬಿಕ್ಕಳಿಕೆಯನ್ನು ನಿವಾರಿಸಲು ಕೆಲವು ಮನೆಮದ್ದುಗಳೇ ಸಾಕಾಗುತ್ತದೆ. ಈ ಲೇಖನದ ಮೂಲಕ ಪ್ರಮುಖವಾದ ಬಿಕ್ಕಳಿಕೆ ತಡೆಯುವ ವಿಧಾನಗಳನ್ನು ಅರಿಯೋಣ.
ಬಿಕ್ಕಳಿಕೆ ಎದುರಾದ ಬಳಿಕ ನೀವು ಮಾಡಬಹುದಾದ ಅತ್ಯಂತ ಸೂಕ್ತ ಮತ್ತು ತಕ್ಷಣವೇ ಫಲ ನೀಡುವ ವಿಧಾನವೆಂದರೆ ತಣ್ಣೀರು ಕುಡಿಯುವುದು ತಣ್ಣೀರು ಎಂದರೆ ಫ್ರಿಜ್ಜಿನ ನೀರಲ್ಲ, ಬದಲಿಗೆ ಮಡಕೆಯಲ್ಟಿಟ್ಟಾಗ ಆಗುವಷ್ಟು ಮಾತ್ರ ತಣ್ಣೀರಿದ್ದರೆ ಸಾಕು. ಬಿಕ್ಕಳಿಕೆ ಎದುರಾದಾಗ ಆದಷ್ಟೂ ದೊಡ್ಡ ಗುಟುಕುಗಳಲ್ಲಿ ತಣ್ಣೀರನ್ನು ನಿಧಾನವಾಗಿ ಕುಡಿಯಬೇಕು. ಹೀಗೆ ಕುಡಿಯುವಾಗ ನೀರಿನ ತಾಪಮಾನ ಗಂಟಲಿನ ಮೂಲಕ ವಪೆಗೂ ದಾಟಿಕೊಂಡು ವಪೆಯ ಸ್ನಾಯುಗಳನ್ನು ಶಾಂತಗೊಳಿಸುತ್ತದೆ. ಈ ಮೂಲಕ ಬಿಕ್ಕಳಿಕೆ ನಿಧಾನವಾಗಿ ನಿಲ್ಲುತ್ತದೆ. ತಣ್ಣೀರು ಕುಡಿಯುವುದು ಕಷ್ಟ ಎನಿಸಿದರೆ ತಣ್ಣೀರನ್ನು ಕೊಂಚ ಕಾಲ ಮುಕ್ಕಳಿಸುತ್ತಾ ಇದ್ದರೂ ಆಗಬಹುದು. ಇನ್ನೊಂದು ಪರ್ಯಾನ ವಿಧಾನವೆಂದರೆ ಮಂಜುಗಡ್ಡೆಯ ತುಂಡನ್ನು ಬಾಯಿಗೆ ಹಾಕಿ ಇದರಿಂದ ಕರಗಿದ ನೀರನ್ನು ಕುಡಿಯುತ್ತಾ ಹೋಗುವುದು. ಈ ಮೂಲಕವೂ ಬಿಕ್ಕಳಿಕೆಯನ್ನು ನಿಲ್ಲಿಸಬಹುದು.
ಇನ್ನು ಕೆಲವರಿಗೆ ಎಷ್ಟೇ ನೀರು ಕುಡಿದರೂ ಬಿಕ್ಕಳಿಕೆ ನಿಲ್ಲುವುದಿಲ್ಲ. ಬಿಕ್ಕಳಿಕೆಯನ್ನು ತಡೆಯಲು ಜೇನುತುಪ್ಪದ ಬಳಕೆ ಉತ್ತಮ. ಒಂದು ಚಮಚ ಜೇನುತುಪ್ಪವನ್ನು ತೆಗೆದುಕೊಂಡು ಅದನ್ನು ಉಗುರು ಬೆಚ್ಚನೆಯ ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಬಿಕ್ಕಳಿಕೆ ನಿಲ್ಲುತ್ತದೆ. ಕೆಲವೊಮ್ಮೆ ಜೀರ್ಣ ಕ್ರಿಯೆಯ ಸಮಸ್ಯೆ ಎದುರಾದಾಗ ಕೂಡಾ ಬಿಕ್ಕಳಿಕೆ ಬರುವುದು ಈ ರೀತಿ ಬಿಕ್ಕಳಿಕೆ ಎದುರಾದಾಗ ಒಂದು ಚಮಚ ಸಬ್ಬಸಿಗೆ ಬೀಜವನ್ನು ಬಾಯಿಗೆ ಹಾಕಿಕೊಂಡು ಅದನ್ನು ಅಗೆದು ನುಂಗಬೇಕು ಇದರಿಂದ ತಕ್ಷಣ ಬಿಕ್ಕಳಿಕೆ ನಿಲ್ಲುತ್ತದೆ. ಇನ್ನು ಸಕ್ಕರೆ ಅಥವಾ ಬೆಲ್ಲ ತಿನ್ನುವುದರಿಂದ ಕೂಡಾ ಬಿಕ್ಕಳಿಕೆ ನಿಲ್ಲುತ್ತದೆ. ಸ್ವಲ್ಪ ನೆಲ್ಲಿಕಾಯಿ ಪುಡಿ ಹಾಗೂ ಎರಡು ಚಮಚ ಜೇನುತುಪ್ಪ ಎರಡನ್ನೂ ಸೇರಿಸಿ ಪ್ರತೀ ದಿನ ತೆಗೆದುಕೊಳ್ಳುವುದರಿಂದ ಇದು ಬಿಕ್ಕಳಿಕೆಗೆ ಉತ್ತಮ ಫಲಿತಾಂಶ ನೀಡುವುದು. ನುಗ್ಗೆ ಸೊಪ್ಪಿನ ರಸವನ್ನು ತೆಗೆದುಕೊಂಡು , ಕೆಲವು ಸಮಯಗಳ ಕಾಲ ಉಸಿರನ್ನು ಬಿಗಿದು ಹಿಡಿಯುವ ಮೂಲಕ ಕೂಡಾ ಬಿಕ್ಕಳಿಕೆಯನ್ನು ತಡೆಗಟ್ಟಬಹುದು.
ಉಸಿರು ಕಟ್ಟಿ ನಾವು ಸಾಮಾನ್ಯವಾಗಿ ಅರ್ಧ ನಿಮಿಷದಷ್ಟು ಮಾತ್ರ ಇರಬಲ್ಲೆವು. ಹಠಕಟ್ಟಿದರೆ ಕೆಲವು ನಿಮಿಷಗಳ ವರೆಗೆ ಮಾತ್ರವೇ ಸಾಧ್ಯವಾಗಬಹುದು. ಏಕೆಂದರೆ ಉಸಿರು ಕಟ್ಟಿದಾಗ ಆಮ್ಲಜನಕ ದೊರಕದೇ ರಕ್ತದಲ್ಲಿ ಇಂಗಾಲದ ಡೈ ಆಕ್ಸೈಡ್ ಸಾಂದ್ರತೆ ಹೆಚ್ಚುತ್ತಾ ಹೋಗುತ್ತದೆ. ರಕ್ತದಲ್ಲಿ ಇಂಗಾಲದ ಡೈ ಆಕ್ಸೈಡ್ ಹೆಚ್ಚಾದರೆ ಇದು ಮೆದುಳು ತಲುಪಿದಾಕ್ಷಣ ಮೆದುಳಿನ ಕಾರ್ಯವ್ಯವಸ್ಥೆಯ ಮೇಲೆ ಪ್ರಭಾವ ಬೀರುತ್ತದೆ. ಉಸಿರು ಕಟ್ಟಿದಾಗ ತಲೆ ತಿರುಗುವುದಕ್ಕೆ ಇದೇ ಕಾರಣ. ಈ ವಿಧಾನವನ್ನು ಬಿಕ್ಕಳಿಕೆಯನ್ನು ನಿಲ್ಲಿಸಲೂ ಪ್ರಯೋಗಿಸಬಹುದು. ಬಿಕ್ಕಳಿಕೆ ಎದುರಾದಾಗ ದೀರ್ಘ ಉಸಿರೊಂದನ್ನು ಎಳೆದುಕೊಂಡು ಆದಷ್ಟೂ ಹೊತ್ತು ಉಸಿರು ಕಟ್ಟಿಕೊಳ್ಳಿ. ಈ ಸಮಯದಲ್ಲಿ ಕಿವಿಗಳನ್ನು ಎರಡೂ ಕೈ ಬೆರಳುಗಳಿಂದ ಮುಚ್ಚಿಕೊಳ್ಳಿ. ಇದರಿಂದ ಒತ್ತಡ ಕೊಂಚ ಹೆಚ್ಚಾಗುತ್ತದೆ. ಪರಿಣಾಮವಾಗಿ ಬಿಕ್ಕಳಿಕೆ ನಿಲ್ಲುತ್ತದೆ.
ಜ್ಯೋತಿಷ್ಯ: ಶ್ರೀ ಮಂತ್ರಾಲಯ ಗುರು ಬೃಂದಾವನ ಜ್ಯೋತಿಷ್ಯ ಮಂದಿರ, ಗುರೂಜಿ ಶ್ರೀ ಪರುಶುರಾಮ ಎಲ್ ಜ್ಯೋಷಿ
ವ್ಯಾಪಾರ ಸಮಸ್ಯೆ ಮದುವೆ ಸಮಸ್ಯೆ ಸಂತಾನ ಸಮಸ್ಯೆ ಹಣಕಾಸಿನ ಸಮಸ್ಯೆ ಗಂಡ-ಹೆಂಡತಿ ಸಮಸ್ಯೆ ಅತ್ತೆ ಸೊಸೆ ಕಿರಿಕಿರಿ ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ಶ್ರೀ ಮಂತ್ರಾಲಯ ಗುರು ರಾಯರ ಅನುಗ್ರಹದಿಂದ ಮತ್ತು ದುರ್ಗಾ ಹೋಮ ಸುದರ್ಶನ ಹೋಮ ಮಹಾಗಣಪತಿ ಯಾಗ ಶ್ರೀ ಕರ ಮಂತ್ರ ಹೋಮ ಸುಗ್ರೀವ ಹೋಮ ಹಾಗೂ 1008 ಜಪ ತಪ ಹೋಮ ಹವನ ಗಳಿಂದ ಕೇವಲ 24 ಗಂಟೆಗಳಲ್ಲಿ ಶಾಶ್ವತವಾಗಿ ಪರಿಹಾರ ಶತಸಿದ್ಧ ಇಂದೇ ಸಂಪರ್ಕಿಸಿ 9845111287