ನಮ್ಮಲ್ಲಿ ಕಾಡುವಂತ ಹಲವಾರು ದೈಹಿಕ ಸಮಸ್ಯೆಗಳಿಗೆ ಮನೆಯಲ್ಲೇ ಮನೆಮದ್ದುಗಳಿವೆ ಆದ್ರೆ ಅವುಗಳು ಹೇಗೆ ಸಹಕಾರಿ ಅನ್ನೋದನ್ನ ತಿಳಿದುಕೊಳ್ಳಬೇಕು. ನಾವುಗಳು ಸೇವನೆ ಮಾಡುವಂತ ಆಹಾರ ಪದ್ಧತಿ ನಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ. ಹಾಗೆಯೆ ನಾವುಗಳು ಚಿಕ್ಕ ಪುಟ್ಟ ದೈಹಿಕ ಸಮಸ್ಯೆಗೆ ಹೆಚ್ಚಾಗಿ ಇಂಗ್ಲಿಷ್ ಔಷಧಿ ಮಾತ್ರೆಗಳನ್ನು ಸೇವಿಸುವ ಬದಲು ನೈಸರ್ಗಿಕವಾಗಿ ಮನೆಯಲ್ಲೇ ಮಾಡಿಕೊಳ್ಳುವ ಮನೆಮದ್ದು ಸೇವನೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ
ಪಿತ್ತ ಹೆಚ್ಚಾಗಿದ್ರೆ ಅನಾರೋಗ್ಯ ಸಮಸ್ಯೆ ಕಾಡುತ್ತದೆ ಈ ಪಿತ್ತದ ಸಮಸ್ಯೆ ನಿವಾರಣೆಗೆ ಹಾಗೂ ಪಿತ್ತ ಕಡಿಮೆ ಆಗಲು ಬಸಳೆ ಸೊಪ್ಪಿನ ಬೇರಿನಿಂದ ಕಷಾಯ ಮಾಡಿ ಬೆಳ್ಗೆ ಮತ್ತು ಸಂಜೆ ಕುಡಿಯುತ್ತ ಬಂದರೆ ಜಾಸ್ತಿ ಆಗಿರುವಂತ ಪಿತ್ತವು ತಗ್ಗುತ್ತದೆ.
ಇನ್ನು ಮೆಂತ್ಯೆದ ಪುಡಿಯನ್ನು ಗಂಜಿಯಂತೆ ಮಾಡಿಕೊಂಡು ಬೇಯಿಸಿ ಸೇವಿಸುತ್ತಾ ಬಂದರೆ ಮಧುಮೇಹ ರೋಗ, ನರ ಸಂಬಂಧಿ ರೋಗಗಳೆಲ್ಲವೂ ದೂರವಾಗುತ್ತದೆ.
ಸೊಂಟದ ನೋವು ಸಮಸ್ಯೆ ಇರುವವರು ಮೆಂತ್ಯೆದ ಸೊಪ್ಪಿನೊಂದಿಗೆ ಕೋಳಿಮೊಟ್ಟೆ ಮತ್ತು ತೆಂಗಿನ ಹಾಲನ್ನು ಸೇರಿಸಿ ತುಪ್ಪದೊಂದಿಗೆ ಚನ್ನಾಗಿ ಕಲಸಿ ಆಹಾರದೊಂದಿಗೆ ಸೇವಿಸಿದರೆ ಸೊಂಟದ ನೋವು ನಿವಾರಣೆಯಾಗುತ್ತದೆ.
ಬೆಟ್ಟದಂಗೆ ಕಾಡುವಂತ ತಲೆನೋವು ನಿವಾರಣೆಗೆ ಮನೆಯಲ್ಲೇ ಮನೆಮದ್ದು ಮಾಡಿಕೊಳ್ಳುವುದು ಹೇಗೆ ಅನ್ನೋದನ್ನ ನೋಡುವುದಾದರೆ ಸ್ವಲ್ಪ ಒಣ ಶುಂಠಿಯನ್ನು ನೀರಿನಲ್ಲಿ ಅರೆದು ಹಣೆಗೆ ಬಳಿದು ಕೊಂಡರೆ ತಲೆನೋವು ಕಡಿಮೆಯಾಗುತ್ತದೆ.
ಹೊಟ್ಟೆಯಲ್ಲಿ ಜಂತು ಹುಳು ಸಮಸ್ಯೆ ಇದ್ರೆ, ಮಾವಿನ ಓಟೆಯೊಳಗಿನ ಬೀಜವನ್ನು ಒಣಗಿಸಿ ಪುಡಿ ಮಾಡಿ ಅದಕ್ಕೆ ಜೇನುತುಪ್ಪವನ್ನು ಬೆರಸಿ ಸೇವಿಸಿದರೆ ಹೊಟ್ಟೆಯಲ್ಲಿರುವಂತ ಜಂತುಹುಳು ನಾಶವಾಗುತ್ತದೆ.