Ultimate magazine theme for WordPress.

ಒಂದು ಚಮಚ ಈ ಕಾಳುಗಳನ್ನು ಸೇವಿಸಿದರೆ ಸಾಕು, ಎಂತಹ ಮಂಡಿ, ಸೊಂಟನೋವು ಇದ್ರು ನಿವಾರಣೆಯಾಗುತ್ತೆ

0 398

ಒಂದು ಸ್ಪೂನ್ ಕಾಳಿನ ಸೇವನೆಯಿಂದ ನಮ್ಮ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು ಅಲ್ಲದೆ ಈ ಕಾಳಿನ ಸೇವನೆಯಿಂದ ಮಹಿಳೆಯರ ಹಲವು ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಹಾಗಾದರೆ ಈ ಕಾಳು ಯಾವುದು, ಅದರ ಸೇವನೆಯಿಂದ ಆಗುವ ಆರೋಗ್ಯಕರ ಪ್ರಯೋಜನಗಳು ಯಾವುವು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಅಳವಿ ಬೀಜ ಅಥವಾ ಅಳವಿ ಕಾಳು ಎಂದು ಕರೆಯುತ್ತಾರೆ. ನೋಡಲು ಇದು ಎಳ್ಳಿನಂತೆ ಇರುತ್ತದೆ. ಈ ಕಾಳು ಆರೋಗ್ಯಕ್ಕೆ ಬಹಳ ಒಳ್ಳೆಯದು. ಈ ಕಾಳಿನಲ್ಲಿ ಕ್ಯಾಲ್ಸಿಯಂ, ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ, ಐರನ್, ಪ್ರೊಟೀನ್, ಫೋಲಿಕ್ ಆಸಿಡ್, ನ್ಯೂಟ್ರಿಯಂಟ್ಸ್, ಅಲ್ಲದೆ ಡಯಟರಿ ಫೈಬರ್ ಇದೆ. ಅಳವಿ ಕಾಳನ್ನು ಪ್ರತಿದಿನ ಒಂದು ಚಮಚ ತಿನ್ನುತ್ತಾ ಬಂದರೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, 15 ದಿನ ನಿರಂತರವಾಗಿ ತಿಂದು ನಂತರ ಸ್ವಲ್ಪ ದಿನ ಬಿಟ್ಟು ಮತ್ತೆ ಪ್ರಾರಂಭಿಸಬಹುದು. ಜೀರ್ಣಾಂಗ ಸಮಸ್ಯೆ, ಅಸಿಡಿಟಿ, ಗ್ಯಾಸ್ ಸಮಸ್ಯೆ ಇರುವವರು ಈ ಕಾಳನ್ನು ನಿಯಮಿತವಾಗಿ ತಿನ್ನುವುದರಿಂದ ನಿವಾರಣೆಯಾಗುತ್ತದೆ. ಅಳವಿ ಬೀಜವನ್ನು ಪ್ರಾಚೀನಕಾಲದಿಂದಲೂ ಬಳಸುತ್ತಿದ್ದರು, ಮೊದಲಿನಿಂದಲೇ ಇದಕ್ಕೆ ಉತ್ತಮ ಸ್ಥಾನವನ್ನು ಕೊಡಲಾಗಿದೆ. ಉತ್ತರ ಕರ್ನಾಟಕದಲ್ಲಿ ಇದನ್ನು ಹೆಚ್ಚು ಉಪಯೋಗಿಸುತ್ತಾರೆ, ಮಹಿಳೆಯರಿಗೆ ಇದು ಹೆಚ್ಚು ಉಪಯುಕ್ತವಾಗಿದೆ. ಸೊಂಟ ನೋವು, ಕೈಕಾಲು ನೋವು, ಕೀಲು ನೋವು, ಬೆನ್ನು ನೋವು ಇದ್ದವರು ಈ ಕಾಳನ್ನು ಪ್ರತಿದಿನ ಸೇವಿಸಬೇಕು ಇದರಿಂದ ಮೂಳೆಗಳು ಗಟ್ಟಿಯಾಗುತ್ತದೆ ಮತ್ತು ಕೀಲುಗಳಲ್ಲಿ ಯಾವುದೇ ನೋವಿದ್ದರೂ ನಿವಾರಣೆಯಾಗುತ್ತದೆ.

ಕೈ, ಕಾಲು ಮುರಿದು ಹೋಗಿದ್ದರೆ ಈ ಬೀಜವನ್ನು ಸೇವಿಸುವುದರಿಂದ ನೋವು ನಿವಾರಣೆಯಾಗುತ್ತದೆ. ಅಸ್ತಮಾ ಇರುವವರು ಈ ಬೀಜವನ್ನು ತಿನ್ನಬೇಕು, ಶೀತ ಇರುವವರು ಇದನ್ನು ತಿನ್ನುವುದು ಅವರ ಆರೋಗ್ಯಕ್ಕೆ ಬಹಳ ಒಳ್ಳೆಯದು, ಇದರಿಂದ ಶ್ವಾಸಕೋಶದ ಸಮಸ್ಯೆ ನಿವಾರಣೆಯಾಗುತ್ತದೆ. ಋತುಚಕ್ರದ ಸಮಸ್ಯೆಯನ್ನು ಅನುಭವಿಸುತ್ತಿರುವ ಮಹಿಳೆಯರು ಈ ಬೀಜವನ್ನು ನಿಯಮಿತವಾಗಿ ಸೇವಿಸಬೇಕು, ಹಾರ್ಮೋನ್ ಇಂಬ್ಯಾಲೆನ್ಸ್ ಸಮಸ್ಯೆಗಳು ನಿವಾರಣೆಯಾಗುತ್ತದೆ. ಮಹಿಳೆಯರು ಡೆಲಿವರಿ ಆದ ನಂತರ ಈ ಕಾಳುಗಳನ್ನು ಸೇವಿಸುವುದರಿಂದ ಸೊಂಟನೋವು ಬರುವುದಿಲ್ಲ, ಸೊಂಟಕ್ಕೆ ಬಲ ಬರುತ್ತದೆ. ಒಂದು ಸ್ಪೂನ್ ಅಳವಿ ಬೀಜವನ್ನು ರಾತ್ರಿ ನೀರಿನಲ್ಲಿ ನೆನೆಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು ಅಥವಾ ಒಂದು ಪಾತ್ರೆಯಲ್ಲಿ ಎರಡು ಗ್ಲಾಸ್ ನೀರನ್ನು ಕುದಿಸಿ, ನೆನೆಸಿದ ಅಳವಿ ಬೀಜವನ್ನು ಹಾಕಿ 2 ನಿಮಿಷ ಚೆನ್ನಾಗಿ ಕುದಿಸಿ ಅದಕ್ಕೆ ರುಚಿಗೆ ತಕ್ಕಷ್ಟು ಬೆಲ್ಲವನ್ನು ಹಾಕಿ ಸ್ವಲ್ಪ ಕುದಿಸಿ ನಂತರ ಸ್ವಲ್ಪ ಹಾಲನ್ನು ಹಾಕಿ 1 ನಿಮಿಷ ಕುದಿಸಿ ಬೇಕಾದರೆ ಏಲಕ್ಕಿ ಸೇರಿಸಿದರೆ ಅಳವಿ ಪಾಯಸ ಸಿದ್ಧವಾಗುತ್ತದೆ. ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಈ ಪಾಯಸವನ್ನು ಮಕ್ಕಳಿಂದ ಹಿಡಿದು ವೃದ್ದರವರೆಗೆ ಕುಡಿಯಬಹುದು. ಮಹಿಳೆಯರಿಗೆ ಡೆಲಿವರಿ ಆದನಂತರ ಎದೆಹಾಲು ಕಡಿಮೆ ಆಗುತ್ತದೆ ಅವರು ಈ ಪಾಯಸವನ್ನು ತಿನ್ನುವುದರಿಂದ ಎದೆಹಾಲು ಉತ್ಪತ್ತಿ ಹೆಚ್ಚಾಗುತ್ತದೆ. ಅಳವಿ ಬೀಜ ಬಾಣಂತಿ ಮಹಿಳೆಯರಿಗೆ ಹಾಗೂ ಮಗುವಿನ ಆರೋಗ್ಯಕ್ಕೆ ಬಹಳ ಒಳ್ಳೆಯದು. ವೀಕನೆಸ್ ಇರುವ ಮಕ್ಕಳಿಗೆ ಅಳವಿ ಬೀಜದ ಲಾಡು ಮಾಡಿ ಕೊಟ್ಟರೆ ಮಕ್ಕಳ ಆರೋಗ್ಯ ಸುಧಾರಿಸುತ್ತದೆ. ಒಂದು ಬೌಲ್ ಅಳವಿ ಬೀಜದ ಹಿಟ್ಟು, ಗೋಧಿ ಹಿಟ್ಟು, ಉದ್ದಿನ ಹಿಟ್ಟು ಈ ಹಿಟ್ಟುಗಳನ್ನು ತುಪ್ಪದಲ್ಲಿ ಚೆನ್ನಾಗಿ ಹುರಿದು ಅದಕ್ಕೆ ರುಚಿಗೆ ತಕ್ಕಷ್ಟು ಬೆಲ್ಲವನ್ನು ಸೇರಿಸಿ ಉಂಡೆ ಮಾಡಿ ಇಡಬಹುದು. ಈ ಉಂಡೆಯನ್ನು ಸೇವಿಸುವುದರಿಂದ ಮಕ್ಕಳ ಬುದ್ಧಿಶಕ್ತಿ ಹೆಚ್ಚಿಸುತ್ತದೆ. ವೇಟ್ ಲಾಸ್ ಮಾಡಿಕೊಳ್ಳುವವರು ಅಳವಿ ಬೀಜವನ್ನು ಸೇವಿಸುವುದು ಒಳ್ಳೆಯದು. ಗರ್ಭಿಣಿ ಸ್ತ್ರೀಯರು ಅಳವಿ ಬೀಜವನ್ನು ಸೇವಿಸಬಾರದು. ಅಲ್ಲದೆ ಈ ಕಾಳಿನ ಸೇವನೆಯಿಂದ ಮುಖದ ಕಾಂತಿ ಹೆಚ್ಚುತ್ತದೆ, ಕೂದಲಿನ ಆರೋಗ್ಯಕ್ಕೆ ಬಹಳ ಒಳ್ಳೆಯದು.

Leave A Reply

Your email address will not be published.