ಇಮ್ಯುನಿಟಿ/ ರೋಗ ಕ್ಷಮತ್ವ ಅಂತ ಹೇಳುವ ರೋಗ ನಿರೋಧಕ ಶಕ್ತಿ ಅಂದ್ರೆ ಏನು ಇದನ್ನ ಹೆಚ್ಚು ಮಾಡಿಕೊಳ್ಳುವುದು ಹೇಗೆ ಅನ್ನುವುದರ ಬಗ್ಗೆ ತಿಳಿಯೋಣ, ರೋಗ ನಿರೋಧಕ ಶಕ್ತಿ ಅಂದ್ರೆ ಏನು? ಉದಾಹರಣೆಗೆ , ಒಂದು ಮನೆಯಲ್ಲಿ ೨/೩ ಮಕ್ಕಳಿದ್ದಾರೆ ಅಂತ ಭಾವಿಸೋಣ. ಆ ಮಕ್ಕಳು ಅದೇ ವಾತಾವರಣದಲ್ಲಿ ಅಲ್ಲಿ ಇರುವ ಆಹಾರವನ್ನು ಉಪಯೋಗ ಮಾಡುತ್ತಾರೆ. ಒಂದೇ ಗಾಳಿ, ಒಂದೇ ಆಹಾರ, ಒಂದೇ ವಾತಾವರಣ ಹಾಗೂ ಒಂದೇ ತಂದೆ ತಾಯಿ ಗೆ ಹುಟ್ಟಿರುವ ಮಕ್ಕಳು. ಆದರೂ ಸಹ ಒಬ್ಬರು ಮಕ್ಕಳಿಗೆ ನೆಗಡಿ ಕೆಮ್ಮು ಜ್ವರ ಏನು ಆಗಲ್ಲ ಆದರೆ ಒಬ್ಬನಿಗೆ ಮಾತ್ರ ಯಾವಾಗಲು ಶೀತ ಆಗಿಯೇ ಇರತ್ತೆ ಒಬ್ಬನಿಗೆ ಮಾತ್ರ ಯಾವಾಗಲು ಖಾಯಿಲೆ ಬರ್ತಾನೆ ಇರತ್ತೆ ಇನ್ನೊಬ್ಬರಿಗೆ ಯಾವುದೇ ಖಾಯಿಲೆ ಬರಲ್ಲ. ಯಾಕೆ ಹೀಗೆ ಆಗತ್ತೆ ಮೂವರು ಮಕ್ಕಳಿಗೂ ಕೂಡ ಒಂದೇ ರೀತಿಯ ಆಹಾರ ವಿಚಾರ ಇರತ್ತೆ ಹಾಗಿದ್ದೂ ಹೀಗ್ ಯಾಕೆ ಆಗತ್ತೆ? ಅಂತ ನೋಡಿದ್ರೆ, ಆ ಒಂದು ಮಗುವಿಗೆ ವ್ಯಾಧಿ ಕ್ಷಾಮತ್ವ ಅಂದ್ರೆ, ರೋಗ ನಿರೋಧಕ ಶಕ್ತಿ ಕಡಿಮೆ ಇರತ್ತೆ.
ಈ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡೋಕೆ ಅಂತಾನೆ ಹಲವಾರು ಔಷಧಿಗಳು ಇರತ್ತೆ ಅವುಗಳನ್ನ ಹಲವಾರು ವರ್ಷಗಳು ಕೊಟ್ಟಿದ್ದೆ ಆದಲ್ಲಿ ಆ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಆದರೆ ಎಲ್ಲಾ ರೋಗಕ್ಕೂ ಒಂದೇ ಮದ್ದು ಅಲ್ಲ ಬಂತೆ ರೋಗ ನಿರೋಧಕ ಶಕ್ತಿಗಳಲ್ಲಿ ಸಹ ಹಾಗೆಯೇ. ಶ್ವಾಸ ಕೋಶಕ್ಕೆ ಸಂಬಂಧಿಸಿ ಬೇರೆ ರೋಗ ನಿರೋಧಕ ಶಕ್ತಿ , ಗರ್ಭ ಕೋಶಕ್ಕೆ ಎಂದೇ ಬೇರೆ, ಜೀರ್ಣ ಕ್ರಿಯೆಗೆ ಅಂತಾನೆ ಬೇರೆ ಹೀಗೆ ಆಯಾ ರೋಗಗಳಿಗೆ ಆಯಾ ಔಷಧಿಗಳು ಇರತ್ತೆ.
ಸರಳವಾಗಿ ಹೇಳುವುದಾದರೆ ಮಕ್ಕಳಲ್ಲಿ ಈ ಉಸಿರಾಟದ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಅದಕ್ಕಾಗಿ ಎಲ್ಲಾ ಆಯುರ್ವೇದ ಅಂಗಡಿಗಳಲ್ಲಿ ಲಭ್ಯವಿರುವ ಚವನ್ ಪ್ರಾಶ ಎಂಬ ಚೂರ್ಣ ಇದನ್ನ ಪ್ರತಿ ನಿತ್ಯ ಬೆಳಿಗ್ಗೆ ಅರ್ಧ ಚಮಚ ಹಾಗೂ ರಾತ್ರಿ ಅರ್ಧ ಚಮಚ ಕೊಡುತ್ತಾ ಬಂದರೆ ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ . ಇದರಿಂದಾಗಿ ಮಕ್ಕಳಲ್ಲಿ ನೆಗಡಿ ಕೆಮ್ಮು ಜ್ವರ ಮುಂತಾದ ಖಾಯಿಲೆಗಳು ಬರುವುದು ಕ್ರಮೇಣವಾಗಿ ದೂರ ಆಗುತ್ತದೆ. ಇದರ ಜೊತೆಗೆ ಆಹಾರ ಕ್ರಮಗಳಲ್ಲಿ ಸಹ ಸ್ವಲ್ಪ ವ್ಯತ್ಯಾಸ ಮಾಡಿಕೊಳ್ಳಬೇಕು. ತಣ್ಣನೆಯ ಆಹಾರಗಳನ್ನು ಸೇವಿಸಬಾರದು. ಇದರಂತೆಯೇ ಗರ್ಭ ಕೋಶಕ್ಕೆ ಇಮ್ಯುನಿಟಿ ಬರೋಕೆ ಅಂತಾನೆ ಬೇರೆ ಔಷಧಿ, ಜೀರ್ಣ ಕ್ರಿಯೆಗೆ ಸಂಬಂಧಿಸಿದಂತೆ ಬೇರೆ ಔಷಧಿ ಇರತ್ತೆ. ಆಯುರ್ವೇದದಲ್ಲಿ ಇದರ ಬಗ್ಗೆ ಉಲ್ಲೇಖ ಮಾಡಲಾಗಿದೆ. ವೈದ್ಯರನ್ನು ಸಂಪರ್ಕಿಸಿ ನಿಮಗೆ ಯಾವುದಕ್ಕೆ ರೋಗ ನಿರೋಧಕ ಶಕ್ತಿಯ ಅಗತ್ಯ ಇದೆ ಎಂಬುದನ್ನ ತಿಳಿದು ಔಷಧಿ ತೆಗೆದುಕೊಂಡಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು ಆಗುತ್ತದೆ.