ಮದುವೆ ಮನೆಗಳಲ್ಲಿ ಅಥವಾ ಹೋಟೆಲ್ ಗಳಲ್ಲಿ ಮಾಡುವ ಹಾಗೆ ಶಾವಿಶೇ ಚಿತ್ರಾನ್ನ ಅಥವಾ ಶಾವಿಗೆ ಉಪ್ಪಿಟ್ಟು ಹೇಗೆ ಮಾಡೋದು ಅನ್ನೋದನ್ನ ನೋಡೋಣ. ತುಂಬಾ ಸುಲಭ ಹಾಗೂ ರುಚಿಯಾದ ಬೆಳಗಿನ ಉಪಹಾರ ಶಾವಿಗೆ ಉಪ್ಪಿಟ್ಟು. ಇದನ್ನ ಮಾಡೋಕೆ ಏನೆಲ್ಲ ಬೇಕು ಅನ್ನೋದನ್ನ ನೋಡೋಣ.
ಬೇಕಾಗುವ ಸಾಮಗ್ರಿಗಳು :- ಶಾವಿಗೆ 1 ಕಪ್, ಶೇಂಗಾ ಬೀಜ, ಗೋಡಂಬಿ, ಸಾಸಿವೆ, ಉದ್ದಿನಬೇಳೆ, ಕಡಲೆಬೇಳೆ, ಬ್ಯಾಡಗಿ ಮೆಣಸಿನಕಾಯಿ, ಶುಂಠಿ, ಹಸೀಮೆಣಸಿನಕಾಯಿ, ಕರಿಬೇವಿನ ಎಲೆ, ಈರುಳ್ಳಿ, ತೆಂಗಿನಕಾಯಿ ತುರಿ, ಎಣ್ಣೆ, ಅರಿಶಿನ, ಉಪ್ಪು, ನಿಂಬೆ ಹಣ್ಣಿನ ರಸ, ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ : ಮೊದಲು ಶಾವಿಗೆಯನ್ನ ಬೇಯಿಸಿಕೊಳ್ಳೋಕೆ ನೀರು ಇಟ್ಟುಕೊಂಡು ಅದಕ್ಕೆ ಶಾವಿಗೆ ಮುದ್ದೆ ಆಗದ ಹಾಗೆ ಮಾಡಲು ಒಂದು ಟೀ ಸ್ಪೂನ್ ಎಣ್ಣೆ ಹಾಕಿ ಸ್ವಲ್ಪ ನೀರು ಬಿಸಿ ಆದ ನಂತರ ಅದಕ್ಕೆ ಒಂದು ಕಪ್ ಶಾವಿಗೆ ಹಾಕಿ ಮೂರು ನಾಲ್ಕು ನಿಮಿಷ ಬೇಯಿಸಿಕೊಳ್ಳಬೇಕು. ನಂತರ ಬೀರನ್ನು ಸೋಸಿ ಶಾವಿಗೆಯನ್ನ ತೆಗೆದಿಟ್ಟುಕೊಳ್ಳಬೇಕು. ನಂತರ ಒಂದು ಬಾಣಲೆಗೆ ಎರಡರಿಂದ ಮೂರು ಟೀ ಸ್ಪೂನ್ ಎಣ್ಣೆ ಹಾಕಿ ಕಾದ ನಂತರ ಶೇಂಗಾ ಬೀಜ ಹಾಗೂ ಗೋಡಂಬಿ ಎರಡನ್ನು ಬೇರೆ ಬೆರಯಾಗು ಹುರಿದು ತೆಗೆಡಿಟ್ಟುಕೊಳ್ಳಬೇಕು. ನಂತರ ಅದೇ ಎಣ್ಣೆಗೆ ಅರ್ಧ ಟೀ ಸ್ಪೂನ್ ಸಾಸಿವೆ, ಅರ್ಧ ಟೀ ಸ್ಪೂನ್ ಕಡಲೆ ಬೇಳೆ ಹಾಗೂ ಅರ್ಧ ಟೀ ಸ್ಪೂನ್ ಉದ್ದಿನಬೇಳೆ ಹಾಕಿ ಸ್ವಲೋಆ ಫ್ರೈ ಮಾಡಿಕೊಂಡು ನಂತರ ಒಂದು ಬ್ಯಾಡಗಿ ಮೆಣಸಿನಕಾಯಿ , ಖಾರಕ್ಕೆ ತಕ್ಕಷ್ಟು ಹಸಿಮೆಣಸಿನಕಾಯಿ , ತುರಿದುಕೊಂಡ ಶುಂಠಿ ಎರಡು ಇಂಚಿನಷ್ಟು ಹಾಕಿ ಸ್ವಲ್ಪ ಬಾಡಿಸಿಕೊಂಡು , ಅದಕ್ಕೆ 20 ಕರಿಬೇವಿನ ಎಲೆ ಹಾಗೂ 2 ಮಧ್ಯಮ ಗಾತ್ರದ ಚಿಕ್ಕದಾಗಿ ಕಟ್ ಮಾಡಿದ ಈರುಳ್ಳಿ ಸೇರಿಸಿ ಬಾಡಿಸಿಕೊಳ್ಳಬೇಕು. ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಸ್ವಲ್ಪ ಅರಿಶಿನ ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು.
ನಂತರ ಇದಕ್ಕೆ ಈಗಾಗಲೇ ಬೇಯಿಸಿ ಇಟ್ಟುಕೊಂಡ ಶಾವಿಗೆಯನ್ನ ಸೇರಿಸಿ ಮತ್ತೆ ಮುದ್ದೆ ಆಗದ ಹಾಗೆ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ರುಚಿಗಾಗಿ ಎರಡು ಟಿ ಸ್ಪೂನ್ ಅಷ್ಟು ತೆಂಗಿನಕಾಯಿ ತುರಿ ಸೇರಿಸಿ , ಮೊದಲೇ ಹುರಿದಿಟ್ಟುಕೊಂಡ ಶೇಂಗಾ ಬೀಜ ಹಾಗೂ ಗೋಡಂಬಿ ಹಾಗೂ ಕೊನೆಯಲ್ಲಿ ಅರ್ಧ ಭಾಗ ನಿಂಬೆ ಹಣ್ಣಿನ ರಸವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಕೊನೆಯಲ್ಲಿ ಸ್ವಲ್ಪ ಸಣ್ಣದಾಗಿ ಕಟ್ ಮಾಡಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಕ್ಸ್ ಮಾಡಿದ್ರೆ ರುಚಿಯಾದ್ ಶಾವಿಗೆ ಉಪ್ಪಿಟ್ಟು ರೆಡಿ.