ಬಿಳಿ ಕೂದಲು ಚಿಕ್ಕ ಮಕ್ಕಳಿಂದ ಹಿಡಿದು ವೃದ್ದರವರೆಗೆ ಸಮಸ್ಯೆಯಾಗಿದೆ ಈ ಸಮಸ್ಯೆಗೆ ಮನೆಯಲ್ಲೆ ಸುಲಭವಾಗಿ ಮಾಡಿಕೊಳ್ಳಬಹುದಾದ ಮನೆ ಮದ್ದನ್ನು ಈ ಲೇಖನದ ಮೂಲಕ ತಿಳಿಯೋಣ.
ಚಿಕ್ಕ ವಯಸ್ಸಿಗೆ ಬಿಳಿ ಕೂದಲು ಆಗಿದ್ದು ಫಂಕ್ಷನ್ ಗೆ ಹೋಗಲು ಮುಜುಗರ ಆಗುತ್ತದೆ ಆಗ ಹೀಗೆ ಮಾಡಿಕೊಳ್ಳಬಹುದು. ಮೆಹಂದಿ ಸೊಪ್ಪನ್ನು ಜಜ್ಜಿ ಅದಕ್ಕೆ ಮೊಸರು, ಕರಿ ಬೇವಿನ ಸೊಪ್ಪನ್ನು ಹಾಕಬೇಕು ಕರಿಬೇವಿನ ಸೊಪ್ಪಿನಲ್ಲಿ ಐರನ್ ಅಂಶ ಇರುವುದರಿಂದ ಅದು ಕೂದಲು ಕಪ್ಪಾಗಲು ಸಹಾಯವಾಗುತ್ತದೆ. ಇದನ್ನು ಕಬ್ಬಿಣದ ಕಂಟೇನರ್ ನಲ್ಲಿ ನೆನೆಸಿಡಬೇಕು. ಕಬ್ಬಿಣದ ಹಳೆ ಪಾತ್ರೆಯಲ್ಲೂ ನೆನೆಸಿಡಬಹುದು. ಹುಳಿ ಅಂಶವಿರುವುದರಿಂದ ಕಿಲುಬು ಬಿಡುತ್ತದೆ ಕಿಲುಬು ಕಪ್ಪು ಬಣ್ಣದ್ದಿರುತ್ತದೆ ಅದು ಐರನ್ ಚೆನ್ನಾಗಿ ಮಿಕ್ಸ್ ಆಗುತ್ತದೆ ಈ ಪೇಸ್ಟನ್ನು ಬೆಳಗ್ಗೆ ತಲೆಗೆ ಹಚ್ಚಿಕೊಳ್ಳಬೇಕು ಹಚ್ಚಿಕೊಂಡು ಪ್ಲಾಸ್ಟಿಕ್ ಕವರ್ ನಿಂದ ಮುಚ್ಚಿಕೊಳ್ಳಬೇಕು ಇದರಿಂದ ತೇವಾಂಶ ಹೆಚ್ಚು ಸಮಯ ಇದ್ದು ನಿಧಾನವಾಗಿ ಡ್ರೈ ಆಗುತ್ತದೆ.
ನಂತರ ಸ್ನಾನ ಮಾಡಬೇಕು. ಸ್ನಾನ ಮಾಡುವಾಗ ಸೋಪ, ಶಾಂಪೂ ಹಾಕಿ ಉಜ್ಜಿದರೆ ಹಚ್ಚಿದ ಅಂಶವೆಲ್ಲಾ ಹೋಗುತ್ತದೆ ಆದ್ದರಿಂದ ಸೋಪು, ಶಾಂಪೂ ಬಳಸಬಾರದು. ಉಗುರು ಬೆಚ್ಚನೆಯ ನೀರಿನಿಂದ ತಲೆ ಸ್ನಾನ ಮಾಡಬೇಕು. ತಲೆ ಒಣಗಿದ ನಂತರ ಕೊಬ್ಬರಿ ಎಣ್ಣೆಯನ್ನು ಕೂದಲಿನ ಬೇರಿಗೆ ಹಚ್ಚಬೇಕು ಏಕೆಂದರೆ ಮೊಸರು ಹಾಗೂ ಮೆಹಂದಿ ಸೊಪ್ಪನ್ನು ಹಾಕುವುದರಿಂದ ಡಾಂಡ್ರಫ್ ಆಗುವ ಸಾಧ್ಯತೆಗಳಿರುತ್ತದೆ. ಹೀಗೆ ಮಾಡುವುದರಿಂದ ಒಂದು ತಿಂಗಳವರೆಗೆ ಬಿಳಿ ಕೂದಲು ಕಾಣುವುದಿಲ್ಲ ನಂತರ ಕಂಡುಬರುತ್ತದೆ ಆಗ ಮತ್ತೆ ಈ ರೀತಿ ಮಾಡಬೇಕು ತಿಂಗಳಿಗೆ ಒಂದು ಬಾರಿ ಹೀಗೆ ಮಾಡಬೇಕು. ಎರಡು ಕೈಗಳ ಎಲ್ಲ ಬೆರಳನ್ನು ಚರ್ಮ ಮತು ಉಗುರು ಸೇರುವ ಜಾಗಕ್ಕೆ ಉಜ್ಜಬೇಕು. ಸಮಯ ಸಿಕ್ಕಾಗ ಹೀಗೆ ಮಾಡುವುದರಿಂದ ಬಿಳಿ ಕೂದಲು ಆಗುವುದು ಕಡಿಮೆ ಆಗುತ್ತದೆ ಇದು ಬಹಳಷ್ಟು ಜನರ ಅಭಿಪ್ರಾಯವಾಗಿದೆ. ಈ ಮಾಹಿತಿಯನ್ನು ತಪ್ಪದೇ ಎಲ್ಲರಿಗೂ ತಿಳಿಸಿ.