ಇತ್ತೀಚಿನ ದಿನಗಳಲ್ಲಿ ಸಕ್ಕರೆ ಖಾಯಿಲೆ ಅಂದರೆ ಡಯಾಬಿಟೀಸ್ ಸರ್ವೇಸಾಮಾನ್ಯವಾದ ಖಾಯಿಲೆಯಾಗಿದೆ. ಸಕ್ಕರೆ ಖಾಯಿಲೆ ಒಂದು ಗುಣಪಡಿಸಲಾಗದ ಖಾಯಿಲೆ ಆಗಿದ್ದು ವೈದ್ಯರ ಬಳಿ ಔಷಧಿಯನ್ನು ಪಡೆಯುವುದರ ಜೊತೆಗೆ ಮನೆಮದ್ದಿನ ಮೂಲಕ ಸಕ್ಕರೆ ಖಾಯಿಲೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಹಾಗಾದರೆ ಸಕ್ಕರೆ ಖಾಯಿಲೆಗೆ ಮಾಡಬಹುದಾದ ಮನೆಮದ್ದಿನ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಸಕ್ಕರೆ ಖಾಯಿಲೆ ಇರುವವರು ಮನೆಯಲ್ಲಿ ಸುಲಭವಾಗಿ ಸಿಗುವ ಸಾಮಗ್ರಿಗಳನ್ನು ಬಳಸಿಕೊಂಡು ಔಷಧಿಗಳನ್ನು ತಯಾರಿಸಬಹುದು. ಸಕ್ಕರೆ ಖಾಯಿಲೆ ಇರುವವರು ಆಹಾರ ಸೇವನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಸಿಹಿಯಾದ ಆಹಾರವನ್ನು ಸೇವಿಸಬಾರದು, ಸಕ್ಕರೆಯನ್ನು ತಿನ್ನಲೇಬಾರದು, ಸಕ್ಕರೆಯ ಬದಲು ಬೆಲ್ಲವನ್ನು ಸೇವಿಸಬಹುದು, ಬೆಲ್ಲವನ್ನು ಸೇವುಸುವುದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ. ಆಹಾರ ಪದ್ಧತಿ ಜೊತೆಗೆ ಪ್ರತಿದಿನ ವ್ಯಾಯಾಮ ಮಾಡುವುದರಿಂದ ಸಕ್ಕರೆ ಖಾಯಿಲೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಇದರೊಂದಿಗೆ ಮನೆ ಮದ್ದನ್ನು ಸೇವಿಸಬೇಕು 5-6 ಮಾವಿನ ಎಲೆಯನ್ನು ಒಣಗಿಸಿ ಪುಡಿ ಮಾಡಿಟ್ಟುಕೊಳ್ಳಬೇಕು ಪ್ರತಿದಿನ 2 ಬಾರಿ ಅರ್ಧ ಸ್ಪೂನ್ ಈ ಪುಡಿಯನ್ನು ಸೇವಿಸುವುದರಿಂದ ಸಕ್ಕರೆ ಖಾಯಿಲೆ ನಿಯಂತ್ರಣದಲ್ಲಿರುತ್ತದೆ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಚೆನ್ನಾಗಿ ಬೆಳೆದಿರುವ ಕರಿಬೇವಿನ ಎಲೆಯನ್ನು ಸೇವಿಸುವುದು ಸಕ್ಕರೆ ಖಾಯಿಲೆಯಿಂದ ಆರೋಗ್ಯಕ್ಕೆ ಒಳ್ಳೆಯದು. ಇನ್ಸುಲಿನ್ ಎಲೆ ಎಂದು ಸಿಗುತ್ತದೆ ಒಂದು ಎಲೆಯನ್ನು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಅಮೃತಬಳ್ಳಿ ಎಲೆ ಹಳ್ಳಿಗಳಲ್ಲಿ ಸಿಗುತ್ತದೆ, 3-4 ಅಮೃತಬಳ್ಳಿ ಎಲೆಯನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಸಕ್ಕರೆ ಖಾಯಿಲೆ ನಿಯಂತ್ರಣದಲ್ಲಿ ಇರುತ್ತದೆ.
ಸ್ವಲ್ಪ ಮೆಂತೆಯನ್ನು ರಾತ್ರಿ ಮಲಗುವಾಗ ನೆನೆಸಿ ಮೊಳಕೆ ಬರಿಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಹಾಗಲಕಾಯಿಯ ಜ್ಯೂಸ್ ಕುಡಿಯುವುದು ಸಕ್ಕರೆ ಖಾಯಿಲೆ ಇರುವವರಿಗೆ ಬಹಳ ಒಳ್ಳೆಯದು. ಇವುಗಳಲ್ಲಿ ಯಾವ ಒಂದು ಮನೆಮದ್ದನ್ನು ಬೇಕಾದರೂ ಅನುಸರಿಸಬಹುದು ಮನೆಮದ್ದುಗಳನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳುವುದು ಒಳ್ಳೆಯದು. ಸಕ್ಕರೆ ಖಾಯಿಲೆ ಇರುವವರು ಪ್ರತಿದಿನ ಮೂರು ಬಾರಿ 3-4 ಹಸಿ ದ್ರಾಕ್ಷಿ ಹಣ್ಣನ್ನು ಸೇವಿಸುವುದು ಒಳ್ಳೆಯದು. ರಾತ್ರಿ ಅರ್ಧ ಕಪ್ ನೀರಿಗೆ 2 ಬೆಂಡೆಕಾಯಿಯನ್ನು ಕತ್ತರಿಸಿ ಹಾಕಿ ನೆನೆಸಿ ಬೆಳಗ್ಗೆ ಬೆಂಡೆಕಾಯಿಯನ್ನು ತೆಗೆದು ಈ ನೀರನ್ನು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು ಇದರಿಂದ ಸಕ್ಕರೆ ಖಾಯಿಲೆ ಹತೋಟಿಯಲ್ಲಿರುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ ಸಕ್ಕರೆ ಖಾಯಿಲೆ ಇರುವವರು ಈ ಅಂಶಗಳನ್ನು ಅನುಸರಿಸಿದರೆ ಉತ್ತಮ ಆರೋಗ್ಯವನ್ನು ಪಡೆಯಬಹುದು.