ಸೀಬೆ ಹಣ್ಣು ಕೆಲವರಿಗೆ ಶೀತ ನೆಗಡಿ ಉಂಟು ಮಾಡುತ್ತದೆ ಎಂದು ಅದನ್ನು ತಿನ್ನುವುದಿರಲಿ ಮುಟ್ಟುವ ಗೋಜಿಗೂ ಹೋಗುವುದಿಲ್ಲ. ಆದರೆ ಸೀಬೆ ಹಣ್ಣಿನ ಬಗೆಗಿನ ಇಂತಹ ತಪ್ಪು ಕಲ್ಪನೆಯೇ ಒಂದು ದೊಡ್ಡ ತಪ್ಪು. ಏಕೆಂದರೆ ಸೀಬೆ ಹಣ್ಣಿನಲ್ಲಿ ನಮ್ಮ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾದ ಅದರಲ್ಲೂ ಚಳಿಗಾಲದಲ್ಲಿ ವಿಶೇಷವಾಗಿ ತುಂಬಾ ಅಗತ್ಯವಿರುವ ಅಂಶಗಳು ಸಿಗುತ್ತವೆ. ಚಳಿಗಾಲದಲ್ಲಿ ಹೆಚ್ಚಾಗಿ ಸೀಬೆ ಹಣ್ಣುಗಳು ಎಲ್ಲಾ ಕಡೆ ಸಿಗುತ್ತವೆ. ಮಧುಮೇಹಿಗಳಿಗೆ ಬೇರೆ ಹಣ್ಣುಗಳಿಗೆ ಹೋಲಿಸಿದರೆ ಸೀಬೆ ಹಣ್ಣು ಆರೋಗ್ಯಕ್ಕೆ ಸಾಕಷ್ಟು ಒಳ್ಳೆಯ ಪ್ರಯೋಜನಗಳನ್ನು ಉಂಟು ಮಾಡುತ್ತದೆ. ಸಿಬಿ ಹಣ್ಣುಗಳಲ್ಲಿ ಪೌಷ್ಟಿಕಾಂಶಗಳ ಮಹಾಪೂರವೇ ಇದೆ. ಸೀಬೆ ಹಣ್ಣಿನ ವಿವಿಧ ಪ್ರಯೋಜನಗಳನ್ನು ಈ ಲೇಖನದ ಮೂಲಕ ನೀವು ತಿಳಿದುಕೊಳ್ಳಬಹುದು.

ಪೇರಳೆ ಹಣ್ಣು ಅಥವಾ ಸೀಬೆಹಣ್ಣು ಈ ಹಣ್ಣಿನಲ್ಲಿ ಮೂರು ರೀತಿಯ ಬಗೆಗಳಿವೆ ಮೊದಲನೇದಾಗಿ ಚಂದ್ರ ಪೇರಳೆ ಅಂದರೆ ಈ ಒಂದು ಪೇರಳೆ ಹಣ್ಣು ಕತ್ತರಿಸಿ ನೋಡಿದಾಗ ಅದರೊಳಗೆ ಕೆಂಪು ಬಣ್ಣದಿಂದ ಕೂಡಿರುತ್ತದೆ ಆದ್ದರಿಂದ ಇದನ್ನು ಚಂದ್ರ ಪೇರಳೆ ಎಂದು ಕರೆಯುತ್ತೇವೆ. ಇನ್ನು ಎರಡನೆಯದಾಗಿ ಬಿಳಿ ಪೇರಳೆ ಅಂದರೆ ಈ ಒಂದು ಹಣ್ಣನ್ನು ಕತ್ತರಿಸಿ ನೋಡಿದಾಗ ಅದರ ಒಳಭಾಗದಲ್ಲಿ ಬಿಳಿ ಬಣ್ಣದಿಂದ ಕೂಡಿರುತ್ತದೆ. ಇನ್ನು ಕೊನೆಯದಾಗಿ ಕೆಂಪು ಅಂದರೆ ಈ ಒಂದು ಗಿಡದ ಎಲೆ ಕಾಂಡ ಹಾಗೂ ಹಣ್ಣನ್ನು ಕತ್ತರಿಸಿ ನೋಡಿದಾಗ ಎಲ್ಲವೂ ಕೂಡ ಕೆಂಪು ಬಣ್ಣದಿಂದ ಕೂಡಿರುತ್ತದೆ. ಈ ರೀತಿಯ ಮೂರು ವಿಧಾನಗಳನ್ನು ಈ ಸೀಬೆಹಣ್ಣು ಒಳಗೊಂಡಿದೆ ಈ ಮೂರು ರೀತಿಯ ವಿಧಾನದ ಹಣ್ಣುಗಳು ಕೂಡ ನಮ್ಮ ಆರೋಗ್ಯಕ್ಕೆ ಬಹಳ ಉಪಕಾರಿ ಆದಂತಹ ಅಂಶಗಳನ್ನು ಒಳಗೊಂಡಿದೆ.

ಸೀಬೆ ಹಣ್ಣಿನಲ್ಲಿ ನಮ್ಮ ಆರೋಗ್ಯಕ್ಕೆ ಅಪಾರವಾದ ಪೌಷ್ಟಿಕಾಂಶಗಳು ಸಿಗುತ್ತವೆ ಎಂದು ಹೇಳುತ್ತಾರೆ. ಮೊಟ್ಟ ಮೊದಲಿಗೆ ವಿಟಮಿನ್ ಸಿ ಅಂಶವನ್ನು ನಾವು ಸೀಬೆ ಹಣ್ಣಿನಲ್ಲಿ ಹೇರಳವಾಗಿ ಕಾಣಬಹುದು. ಸೀಬೆ ಹಣ್ಣಿನ ಸೇವನೆಯಿಂದ ನಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂಬುದು ಸತ್ಯ . ಸೀಬೆ ಹಣ್ಣಿನಲ್ಲಿ ಕಂಡು ಬರುವ ಆಂಟಿ – ಆಕ್ಸಿಡೆಂಟ್ ಅಂಶಗಳು ನಮ್ಮ ದೇಹದಲ್ಲಿರುವ ಫ್ರೀ ರಾಡಿಕಲ್ ಗಳನ್ನು ನಾಶ ಪಡಿಸಿ ಕ್ಯಾನ್ಸರ್ ಕಾರಕ ಜೀವ ಕೋಶಗಳು ಬೆಳವಣಿಗೆ ಆಗದಂತೆ ತಡೆ ಹಾಕುತ್ತವೆ. ಸೀಬೆ ಕಾಯಿಯಲ್ಲಿ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಇರುವ ಕಾರಣ ಮಧುಮೇಹದವರಿಗೆ ಇದೊಂದು ಅತ್ಯದ್ಭುತ ಫಲಾಹಾರ ಎಂದು ಹೇಳಬಹುದು. ಬೇರೆ ಹಣ್ಣುಗಳನ್ನು ತಿನ್ನಲು ಹಿಂದೆ ಮುಂದೆ ನೋಡಿದಂತೆ ಸೀಬೆ ಹಣ್ಣನ್ನು ಸೇವನೆ ಮಾಡಲು ಸಕ್ಕರೆ ಕಾಯಿಲೆಗೆ ಇರುವವರು ಸ್ವಲ್ಪವೂ ಆಲೋಚನೆ ಮಾಡಬೇಕಾಗಿಲ್ಲ. ಸೀಬೆ ಹಣ್ಣಿನಲ್ಲಿ ನಾರಿನ ಅಂಶ ಯಥೇಚ್ಛವಾಗಿದೆ ಇದರಿಂದ ನಮ್ಮ ಕರುಳಿನ ಚಲನೆ ಉತ್ತಮಗೊಳ್ಳುತ್ತದೆ ಮತ್ತು ನಮ್ಮ ಮಧುಮೇಹ ಸಮಸ್ಯೆ ನಿವಾರಣೆ ಆಗುತ್ತದೆ. ಸೀಬೆ ಹಣ್ಣಿನಲ್ಲಿ ನಮ್ಮ ಕಣ್ಣುಗಳ ಆರೋಗ್ಯವನ್ನು ಅಭಿವೃದ್ಧಿ ಪಡಿಸಿ ಹೃದಯದ ಆರೋಗ್ಯವನ್ನು ಉತ್ತಮವಾಗಿಸಿ ನಮ್ಮ ದೇಹದ ತೂಕವನ್ನು ಕಡಿಮೆ ಮಾಡುವ ಗುಣ ಲಕ್ಷಣ ಕಂಡು ಬರುತ್ತದೆ. ಹಾಗಾಗಿ ಬೊಜ್ಜಿನ ಸಮಸ್ಯೆಯನ್ನು ಮತ್ತು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಹೊಂದಿರುವ ಹಲವರಿಗೆ ಸೀಬೆ ಹಣ್ಣಿನಿಂದ ಆರೋಗ್ಯಕ್ಕೆ ಸಾಕಷ್ಟು ಲಾಭಗಳು ಉಂಟಾಗಲಿವೆ.

ಈ ಒಂದು ಹಣ್ಣು ಬಹಳನೇ ಪುಷ್ಟಿದಾಯಕ ಅತಿಸಾರ ಆಮಶಂಕೆ ಭೇದಿ ಇದ್ದರೆ ಈ ಗಿಡದ ಚಿಗಿರು ಎಲೆಗಳನ್ನು ಜಗಿದು ತಂದರೆ ಬೇದಿ ನಿಂತುಹೋಗುತ್ತದೆ. ಜೊತೆಗೆ ಈ ಹಣ್ಣನ್ನು ಹಾಗೂ ಈ ಹಣ್ಣಿನ ಎಲೆಗಳನ್ನು ಸೇವಿಸುವುದರಿಂದ ನಮ್ಮ ವಸಡುಗಳು ಮತ್ತು ಹಲ್ಲುಗಳು ಗಟ್ಟಿಯಾಗುತ್ತದೆ. ಮುಖ್ಯವಾಗಿ ಮಧುಮೇಹ ಇರುವಂತವರು ಪ್ರತಿನಿತ್ಯ ಬೆಳಿಗ್ಗೆ ಈ ಎಲೆಗಳನ್ನು ತೆಗೆದುಕೊಂಡು ಬಂದು ಅದನ್ನು ಅರೆದು ಅದರ ರಸವನ್ನು ಒಂದು ಟೇಬಲ್ ಸ್ಪೂನ್ ತೆಗೆದುಕೊಂಡು ಅದಕ್ಕೆ ಒಂದು ಟೇಬಲ್ ಸ್ಪೂನ್ ಜೇನುತುಪ್ಪವನ್ನು ಬೆರೆಸಿ ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ಒಂದು ಮಂಡಲವಾಗಿ ಎಂದರೆ 48 ದಿನ ಕುಡಿದರೆ ಸಕ್ಕರೆ ಕಾಯಿಲೆ ಹತೋಟಿಗೆ ಬರುತ್ತದೆ. ಈ ಪೇರಳೆ ಹಣ್ಣು ಬಹು ಬೀಜದ ಫಲವಾಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!