ವಯಸ್ಸಾದಂತೆ ಸಾಮಾನ್ಯವಾಗಿ ಎಲ್ಲರಿಗೂ ಮಧುಮೇಹ, ರಕ್ತಹೀನತೆ, ಅಶಕ್ತತೆ, ಕೈಕಾಲು ನೋವುಗಳು ಬರುತ್ತದೆ ಈ ಎಲ್ಲಾ ಸಮಸ್ಯೆಗಳು ಸಿಹಿ ಗುಂಬಳಕಾಯಿಯ ಬೀಜವನ್ನು ಸೇವಿಸುವುದರಿಂದ ಪರಿಹಾರ ಆಗುತ್ತದೆ. ಹಾಗಾದರೆ ಈ ಬೀಜವನ್ನು ಸೇವಿಸುವುದರಿಂದ ಆಗುವ ಆರೋಗ್ಯಕರ ಪ್ರಯೋಜನಗಳನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಡಯಾಬಿಟೀಸ್ ಸಮಸ್ಯೆ ಇದ್ದವರು ಹಬ್ಬಗಳಲ್ಲಿ ಕಡಬು ಮಾಡುವ ಸಿಹಿ ಗುಂಬಳಕಾಯಿಯ ಬೀಜ ಅಥವಾ ಕಾಳುಗಳನ್ನು ಬಿಸಾಕುತ್ತೇವೆ ಆದರೆ ಈ ಕಾಳುಗಳನ್ನು ಸಂಗ್ರಹಿಸಿ ದಿನಕ್ಕೆ ಮೂರು ಬಾರಿ ಒಂದು ಸ್ಪೂನ್ ಸೇವಿಸಬೇಕು ಇದರಲ್ಲಿ ವಿಟಮಿನ್ ಎ,ಸಿ,ಇ,ಬಿ2 ಇದೆ. ಈ ಕಾಳುಗಳು ಮಾರ್ಕೆಟ್ ನಲ್ಲಿ ಸಿಗುತ್ತದೆ. ಈ ಕಾಳುಗಳ ಸೇವನೆಯಿಂದ ಶುಗರ್ ಕಂಟ್ರೋಲ್ ಆಗುತ್ತದೆ ಮತ್ತು ಶುಗರ್ ನಿಂದ ಬರುವ ಇತರೆ ಸಮಸ್ಯೆಗಳು ನಿವಾರಣೆಯಾಗುತ್ತದೆ. ಈ ಕಾಳುಗಳನ್ನು ಸೇವಿಸುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಇದರಿಂದ ಯಾವುದೇ ಖಾಯಿಲೆ ಬರುವುದಿಲ್ಲ. ಅಶಕ್ತತೆ, ತಲೆನೋವು, ಕೈಕಾಲು ನೋವು ಈ ಎಲ್ಲಾ ಸಮಸ್ಯೆಗಳು ಈ ಕಾಳಿನ ಸೇವನೆಯಿಂದ ನಿವಾರಣೆಯಾಗುತ್ತದೆ.

ಈ ಕಾಳನ್ನು ಪ್ರತಿದಿನ ತಿನ್ನುವುದರಿಂದ ದೇಹದಲ್ಲಿ ಬ್ಯಾಡ್ ಕೊಲೆಸ್ಟ್ರಾಲ್ ಕಡಿಮೆ ಆಗಿ ಗುಡ್ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಈ ಕಾಳಿನಿಂದ ಹೃದಯ ಸಂಬಂಧಿ ಖಾಯಿಲೆ ಬರದಂತೆ ತಡೆಯುತ್ತದೆ. ರಾತ್ರಿ ನಿದ್ರೆ ಬಾರದೆ ಇರುವವರು, ಟೆನ್ಷನ್ ನಿಂದ ಬಳಲುತ್ತಿರುವವರು ಈ ಕಾಳನ್ನು ಸೇವಿಸುವುದರಿಂದ ನಿದ್ರೆ ಬರುತ್ತದೆ, ಸುಸ್ತು ಕಡಿಮೆಯಾಗಿ ದೇಹಕ್ಕೆ ಚೈತನ್ಯ ದೊರೆಯುತ್ತದೆ ಏಕೆಂದರೆ ಈ ಕಾಳಿನಲ್ಲಿ ವಿಟಮಿನ್ ಸಿ ಹೆಚ್ಚಾಗಿದೆ.

ಈ ಕಾಳಿನಲ್ಲಿ ಮೂಳೆಯನ್ನು ಬಲಪಡಿಸುವ ಶಕ್ತಿ ಇದೆ. 10 ವರ್ಷದ ನಂತರದ ಮಕ್ಕಳಿಗೆ ಸಿಹಿ ಗುಂಬಳಕಾಯಿಯ ಕಾಳುಗಳು ಬಾದಾಮಿ, ಗೋಡಂಬಿ ಡ್ರೈ ಫ್ರೂಟ್ಸ್ ಗಳನ್ನು ಪೌಡರ್ ಮಾಡಿ ಹಾಲಿನಲ್ಲಿ ಮಿಕ್ಸ್ ಮಾಡಿ ಕೊಡುವುದರಿಂದ ಮೂಳೆಯ ಸಮಸ್ಯೆ ನಿವಾರಣೆಯಾಗುತ್ತದೆ. ದೊಡ್ಡವರು ಸಹ ದಿನಕ್ಕೆ ಎರಡು ಬಾರಿ ಈ ಪೌಡರ್ ಅನ್ನು ಹಾಲಿಗೆ ಸೇರಿಸಿ ಕುಡಿಯುವುದು ಒಳ್ಳೆಯದು ಇದರಿಂದ ಕೈಕಾಲು ನೋವು ಇರುವುದಿಲ್ಲ ಅಸಿಡಿಟಿ, ಜೀರ್ಣಶಕ್ತಿ ಸಮಸ್ಯೆಗಳಿಗೂ ಈ ಕಾಳು ಪರಿಹಾರ ಕೊಡುತ್ತದೆ.

ಈ ಕಾಳಿನಲ್ಲಿ ಫೈಬರ್ ಅಂಶ ಹೆಚ್ಚು ಇದ್ದು ಇದನ್ನು ಸೇವಿಸುವುದರಿಂದ ಜೀರ್ಣಶಕ್ತಿ ವೃದ್ಧಿಸುತ್ತದೆ. ಈ ಕಾಳಿನಲ್ಲಿ ವಿಟಮಿನ್ ಎ ಅಂಶ ಹೆಚ್ಚಾಗಿರುವುದರಿಂದ ದೃಷ್ಟಿ ದೋಷ ನಿವಾರಣೆಯಾಗುತ್ತದೆ ಅಲ್ಲದೇ ಈ ಕಾಳಿನಲ್ಲಿ ಐರನ್ ಅಂಶ ಹೆಚ್ಚಾಗಿ ಇರುವುದರಿಂದ ಇದರ ಸೇವನೆಯಿಂದ ರಕ್ತ ಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ. ತೂಕ ಇಳಿಸಲು ಈ ಕಾಳು ಬಹಳ ಸಹಾಯಕಾರಿ. ಈ ಕಾಳಿನ ಸೇವನೆಯಿಂದ ಆರೋಗ್ಯಕರವಾಗಿ ತೂಕ ಕಡಿಮೆ ಮಾಡಿಕೊಳ್ಳಬಹುದು. ಇಷ್ಟೊಂದು ಪ್ರಯೋಜನ ಇರುವ ಸಿಹಿ ಗುಂಬಳಕಾಯಿಯ ಬೀಜಗಳನ್ನು ಎಸೆಯದೆ ಒಣಗಿಸಿ ಅಥವಾ ಪೌಡರ್ ಮಾಡಿ ಸಂಗ್ರಹಿಸಿ ನಮ್ಮ ಆರೋಗ್ಯವನ್ನು ಹೆಚ್ಚಿಸಿಕೊಳ್ಳೋಣ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!