ಇತ್ತೀಚಿನ ದಿನಗಳಲ್ಲಿ ತಲೆ ಹೊಟ್ಟು ಸಮಸ್ಯೆಯನ್ನು ಬಹಳಷ್ಟು ಜನರು ಎದುರಿಸುತ್ತಾರೆ. ಹೊಟ್ಟಿಗೆ ಕಾರಣ, ಲಕ್ಷಣಗಳು, ಪರಿಹಾರದ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.
ತಲೆಯಲ್ಲಿ ಚರ್ಮ ಒಣಗಿ ವಾತ ವೃದ್ಧಿಯಾಗಿ ಪುಡಿ ಪುಡಿಯಾಗಿ ಉದುರುವುದು. ತಲೆಯಲ್ಲಿ ಹೊಟ್ಟಾಗಲು ಡ್ರೈ ನೆಸ್ ಕಾರಣ. ಡ್ರೈ ನೆಸ್ ಆಗಲು ಎಣ್ಣೆ ಹಚ್ಚದೇ ಇರುವುದು, ಕೆಮಿಕಲ್ ಬಳಸುವುದು, ಡೈ ಅನ್ನು ಹಚ್ಚುವುದು ಅಥವಾ ಇನ್ನಾವುದೋ ಕಾಯಿಲೆಯಿಂದ ಡ್ರೈ ನೆಸ್ ಆಗುತ್ತದೆ ಇದರಿಂದ ತಲೆಯಲ್ಲಿ ಹೊಟ್ಟಾಗುತ್ತದೆ.
ಇದರ ಲಕ್ಷಣಗಳೆಂದರೆ ವಿಪರೀತ ಕಡಿತ, ಪುಡಿ ಉದುರುವುದು, ಕಣ್ಣು ಕಡಿತ, ಭುಜದ ಮೇಲೆ ಗುಳ್ಳೆಗಳಾಗುವುದು, ಹಣೆ ಮೇಲೆ ಗುಳ್ಳೆಗಳಾಗುವುದು, ಕೂದಲು ಉದುರುವುದು. ಇದಕ್ಕೆ ಪರಿಹಾರವೆಂದರೆ ಅರ್ಧ ಲೀಟರ್ ಕೊಬ್ಬರಿ ಎಣ್ಣೆಗೆ ಒಂದು ಮುಷ್ಠಿಯಷ್ಟು ಬೇವಿನ ಸೊಪ್ಪನ್ನು ಜಜ್ಜಿ ರಸವನ್ನು ಸೇರಿಸಿ ಅದಕ್ಕೆ ನೆಲ್ಲಿಕಾಯಿ ಪುಡಿಯನ್ನು ಸೇರಿಸಿ ಮಂದಾಗ್ನಿಯಲ್ಲಿ ಕುದಿಸಿ ನೆಲ್ಲಿಕಾಯಿಯ ಪುಡಿ ಕಪ್ಪಾಗುವವರೆಗೆ ಕುದಿಸಿ ನಂತರ ಕಾಟನ್ ಬಟ್ಟೆಯಿಂದ ಸೋಸಿ ಇಟ್ಟುಕೊಂಡು ಆ ಎಣ್ಣೆಯನ್ನು ತಲೆಗೆ ಅಪ್ಲೈ ಮಾಡುತ್ತಿದ್ದರೆ ಕ್ರಮೇಣವಾಗಿ ಹೊಟ್ಟು ಕಡಿಮೆಯಾಗುತ್ತದೆ. ಈ ಮನೆ ಮದ್ದನ್ನು ಮನೆಯಲ್ಲಿ ಸುಲಭವಾಗಿ ಮಾಡಬಹುದು. ಒಂದು ವೇಳೆ ಇದಕ್ಕೂ ಕಡಿಮೆ ಆಗದೆ ಇದ್ದರೆ ಹತ್ತಿರದ ಆಯುರ್ವೇದ ಆಸ್ಪತ್ರೆಗೆ ಭೇಟಿ ಮಾಡಿ ಸಲಹೆಯನ್ನು ಪಡೆಯಬಹುದು.