ಏನಾದ್ರೂ ಹಬ್ಬ ಬಂತು ಅಂದಾಕ್ಷಣ ಸಾಮಾನ್ಯವಾಗಿ ಎಲ್ಲರೂ ಹೋಳಿಗೆ ಮಾಡ್ತಾರೆ. ಆದ್ರೆ ಕೆಲವೊಂದು ನಾವು ಬಾರಿ ಏನಾದ್ರೂ ಒಂದು ಸಾಮಗ್ರಿಗಳನ್ನು ಹಾಕೋವಾಗ ಹೆಚ್ಚು ಕಡಿಮೆ ಮಾಡಕೊಂದು ಹೋಳಿಗೆ ಸರಿಯಾಗಿ ಬರೋದೇ ಇಲ್ಲ. ಇವತ್ತು ಇಲ್ಲಿ ಸುಲಭವಾಗಿ ಬೇಗ ಕಾಯಿ ಹೋಳಿಗೆ ಮಾಡೋದು ಹೇಗೆ ಅಂತ ನೋಡೋಣ.
ಕಾಯಿ ಹೋಳಿಗೆ ಬೇಕಾಗಿರುವ ಸಾಮಗ್ರಿಗಳು :- ಚಿರೋಟಿ ರವೆ ಅರ್ಧ ಕಪ್, ಮೈದಾ ಹಿಟ್ಟು ಅರ್ಧ ಕಪ್,ತುಪ್ಪ ಒಂದು ಟಿ ಸ್ಪೂನ್, ಎಣ್ಣೆ ಸ್ವಲ್ಪ. ೨ ಕಪ್ ಒಣ ಕೊಬ್ಬರಿ ತುರಿ ೧ಕಪ್ ಸಕ್ಕರೆ ಪೌಡರ್
೧ ಟಿ ಸ್ಪೂನ್ ಅಷ್ಟು ಹುರಿಗಡಲೆ ಪೌಡರ್ ೧ ಟಿ ಸ್ಪೂನ್ ತುಪ್ಪ ಕಾಲು ೧ ಟಿ ಸ್ಪೂನ್ ಏಲಕ್ಕಿ.
ಮಾಡುವ ವಿಧಾನ :- ಮೊದಲು ಒಂದು ದೊಡ್ಡ ತಟ್ಟೆಗೆ ಚಿರೋಟಿ ರವೆ ಮೈದಾ ಹಿಟ್ಟು ತುಪ್ಪ ಹಾಕಿ ಮಿಕ್ಸ್ ಮಾಡಿಕೊಂಡು ನಂತರ ಸ್ವಲ್ಪ ಸ್ವಲ್ಪ ನೀರು ಹಾಕಿ ಕಲಸಿಕೊಂಡು, ರವೆ ನೀರನ್ನ ಹೀರಿಕೊಳ್ಳುತ್ತದೆ ಹಾಗಾಗಿ ಐದರಿಂದ ಹತ್ತು ನಿಮಿಷ ಚೆನ್ನಾಗಿ ನಾದಿ ಕೊಳ್ಳಬೇಕು. ನಂತರ ಮತ್ತೆ ಒಂದು ಸ್ಪೂನ್ ಎಣ್ಣೆ ಹಾಕಿ ಮತ್ತೆ ಮಿಕ್ಸ್ ಮಾಡಿ ನಾದಿಕೊಂಡು ಮೇಲಿಂದ ಸ್ವಲ್ಪ ಎಣ್ಣೆ ಹಾಕಿ ಮೂರರಿಂದ ನಾಲ್ಕು ಗಂಟೆಗಳ ಕಾಲ ನೆನೆಯಲು ಬಿಡಬೇಕು.
ಒಂದು ಪ್ಯಾನ್ ಸ್ವಲ್ಪ ಬಿಸಿ ಮಾಡ್ಕೊಂಡು ಅದಕ್ಕೆ ಒಣ ಕೊಬ್ಬರಿ ತುರಿ ಹಾಕಿ ಸ್ವಲ್ಪ ಕೆಂಪು ಬಣ್ಣ ಬರುವ ವರೆಗೂ ಹುರಿದುಕೊಳ್ಳಬೇಕು. ನಂತರ ಸ್ಟೌ ಆರಿಸಿ ಒಂದು ಪ್ಲೇಟ್ ಗೆ ಹರಡಿ ತಣ್ಣಗಾಗಲು ಬಿಟ್ಟು ತಣಿದ ನಂತರ ಮಿಕ್ಸಿ ಜಾರಿಗೆ ಹಾಕಿ ಪೌಡರ್ ಮಾಡಿಕೊಳ್ಳಬೇಕು. ಅದನ್ನ ಒಂದು ಬೌಲ್ ಗೆ ಹಾಕಿ ಅದಕ್ಕೆ ಸಕ್ಕರೆ ಹಾಕಿ ಮಿಕ್ಸ್ ಮಾಡಿಕೊಂಡು ನಂತರ ಒಂದು ಟಿ ಸ್ಪೂನ್ ಹುರಿಗಡಲೆ ಪೌಡರ್ ತುಪ್ಪ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಉಂಡೆ ಕಟ್ಟಲು ಬರುವ ಹಾಗೆ ೨ ಸ್ಪೂನ್ ನೀರು ಸೇರಿಸಿ ಕಲಸಿಕೊಳ್ಳಬೇಕು.
ಮೊದಲೇ ಕಲಸಿಕೊಂಡ ಹಿಟ್ಟನ್ನು ಚಿಕ್ಕ ಚಿಕ್ಕ ಉಂಡೆಗಳಾಗಿ ಮಾಡಿಕೊಂಡು ಅಂಗೈ ಗು ಎಣ್ಣೆಯನ್ನು ಹಚ್ಚಿಕೊಂಡು ಹಿಟ್ಟನ್ನು ಅಂಗೈ ಅಲ್ಲಿ ತಟ್ಟಿ ಹೂರಣವನ್ನು ಚಿಕ್ಕ ಉಂಡೆಗಳಾಗಿ ಮಾಡಿಕೊಂಡು ಅದರೊಳಗೆ ತುಂಬಿ ಹೂರಣ ಹೊರಗೆ ಬರದಂತೆ ಸೀಲ್ ಮಾಡಿ ಒಂದು ಪ್ಲಾಸ್ಟಿಕ್ ಮೇಲೆ ಎಣ್ಣೆ ಸವರಿಕೊಂಡು ಅದರ ಮೇಲೆ ಇಟ್ಟು ತಟ್ಟಿಕೊಂಡು / ಲಟ್ಟಣಿಗೆ ಸಹಾಯದಿಂದ ಕಟ್ಟಿಸಿಕೊಂಡು ಕಾದ ತವಾದ ಮೇಲೆ ಎಣ್ಣೆ ಹಾಕಿ ಹಿಲಿಗೆಯನ್ನ ಹಾಕಿ ಎರಡೂ ಕಡೆ ಮಧ್ಯಮ ಉರಿಯಲ್ಲಿ ಬೇಯಿಸಬೇಕು.ಹೀಗೆ ಮಾಡುವುದರಿಂದ ಯಾವುದೇ ಟೆನ್ಷನ್ ಇಲ್ಲದೇ ಸುಲಭವಾಗಿ ಬೇಗ ಕೊಬ್ಬರಿ ಹೋಳಿಗೆ ಮಾಡಬಹುದು.