ತಲೆ ಕೂದಲು ಉದುರುವ ಸಮಸ್ಯೆ ಈಗ ಎಲ್ಲರಲ್ಲೂ ಸರ್ವೇ ಸಾಮಾನ್ಯ. ನಮ್ಮ ಈಗಿನ ಆಹಾರ, ವಿಹಾರ ಜೀವನ ಶೈಲಿ ಎಲ್ಲವೂ ಸಹ ನಮ್ಮ ತಲೆಕೂದಲು ಉದುರಲು ಪ್ರಮುಖ ಕಾರಣ ಎನ್ನಬಹುದು. ತಲೆ ಕೂದಲು ಉದುರದ ಹಾಗೇ, ಕಪ್ಪಾಗಿ ದಟ್ಟವಾಗಿ ಉದ್ದವಾಗಿ ಕೂದಲು ಬೆಳೆಯಲು ನಾವು ಸುಲಭವಾಗಿ ಮನೆಯಲ್ಲಿಯೇ ಯಾವ ರೀತಿ ಉಪಚಾರ ಮಾಡಿಕೊಳ್ಳಬಹುದು ಎನ್ನುವುದನ್ನು ಇಲ್ಲಿ ತಿಳಿದುಕೊಳ್ಳೋಣ.
ಯಾರಿಗೆ ತಾನೆ ಇಷ್ಟ ಇರಲ್ಲ ಹೇಳಿ ಉದ್ದನೆಯ ಕಪ್ಪಾದ ದಟ್ಟವಾದ ಕೂದಲು ಇರಬೇಕೆಂದು? ಇದಕ್ಕೆ ತಲೆಕೂದಲು ಬೆಳವಣಿಗೆಗೆ ಉತ್ತಮ ಪರಿಹಾರ ಅಂದರೆ ಬೇವಿನ ಎಣ್ಣೆ. ನಮಗೆ ಇದನ್ನ ಮಾಡಲು ಮುಖ್ಯವಾಗಿ ಬೇಕಿರುವುದು ಕಹಿಬೇವಿನ ಎಲೆ ಮತ್ತು ಮೆಂತೆ ಕಾಳು. ಇವೆರಡರಲ್ಲಿ ಔಷಧೀಯ ಗುಣಗಳು ಹೇರಳವಾಗಿ ಇರುತ್ತವೆ. ಒಂದು ಬೌಲ್ ಅಷ್ಟು ಕಹಿಬೇವಿನ ಸೊಪ್ಪು, ಎರಡು ಟೀ ಸ್ಪೂನ್ ಮೆಂತೆ ಕಾಳು ಹಾಗೂ ಶುದ್ಧವಾದ ಕೊಬ್ಬರಿ ಎಣ್ಣೆ. ಒಂದು ಪ್ಯಾನ್ ಗೆ ಮೊದಲು ಎರಡು ಸ್ಪೂನ್ ಮೆಂತೆ ಕಾಳು ಹಾಕಿಕೊಂಡು ಸ್ವಲ್ಪ ಹುರಿದುಕೊಳ್ಳಬೇಕು. (ಮೆಂತೆ ಕಾಳನ್ನು ಪುಡಿ ಮಾಡಿ ಹಾಕುವುದರಿಂದ ಇದನ್ನು ಸ್ವಲ್ಪ ಪುಡಿ ಮಾಡಲು ಸಹಾಯ ಆಗುವ ಹಾಗೇ ಹುರಿದುಕೊಳ್ಳಬೇಕು) ಹಾಗೇ ನಂತರ ತೋಳೆದುಕೊಂಡ ಕರಿ ಬೇವಿನ ಎಳೆಗಳನ್ನೂ ಸಹ ಸ್ವಲ್ಪ ಗರಿ ಗರಿ ಆಗುವ ಹಾಗೆ ಬಿಸಿ ಮಾಡಿಕೊಳ್ಳಬೇಕು. ಇವೆರಡೂ ತಣ್ಣಗಾದ ನಂತರ, ಮಿಕ್ಸಿ ಜಾರಿಗೆ ಹಾಕಿ ಎಷ್ಟು ಸಾಧ್ಯವೋ ಅಷ್ಟು ನುಣ್ಣಗೆ ಪುಡಿ ಮಾಡಿಕೊಳ್ಳಬೇಕು.
ನಂತರ ಪ್ಯಾನ್ ಗೆ ಶುದ್ಧವಾದ ಕೊಬ್ಬರಿ ಎಣ್ಣೆ ಹಾಕಿ, ಎಣ್ಣೆ ಬಿಸಿ ಆಗುವ ಮೊದಲೇ ನಾವು ಮಾಡಿಟ್ಟುಕೊಂಡ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಹೀಗೆ ಮಾಡುವುದರಿಂದ ಕಹಿಬೇವು ಮತ್ತು ಮೆಂತೆಯಲ್ಲಿ ಇರುವಂತಹ ಔಷಧೀಯ ಗುಣಗಳು ಎಣ್ಣೆಯಲ್ಲಿ ಬಿಟ್ಟುಕೊಳ್ಳುತ್ತವೆ. ಮಿಕ್ಸ್ ಮಾಡಿ ಸಣ್ಣ ಉರಿಯಲ್ಲಿ ಕೇವಲ ಐದರಿಂದ ಹತ್ತು ನಿಮಿಷ ಗಳ ಕಾಲ ತಿರುಗುತ್ತಲೇ ಇರಬೇಕು. ಇಲ್ಲವಾದಲ್ಲಿ ದೊಡ್ಡ ಉರಿಯಲ್ಲಿ ಇಟ್ಟುಕೊಂಡರೆ ಕೊಬ್ಬರಿ ಎಣ್ಣೆ ನೊರೆ ಬಂದು ಉಕ್ಕಿ ಚೆಲ್ಲುತ್ತದೆ. ಹಾಗಾಗಿ ಸಣ್ಣ ಉರಿಯಲ್ಲಿಯೆ ಇಟ್ಟುಕೊಂಡು ಹತ್ತು ನಿಮಿಷಗಳ ಕಾಲ ಬಿಸಿ ಮಾಡಿದರೆ ಕರಿಬೇವಿನ ಎಣ್ಣೆ ರೆಡಿ ಆಗುವುದು. ನಂತರ ಎಣ್ಣೆ ಪೂರ್ತಿಯಾಗಿ ತಣ್ಣಗಾದ ಮೇಲೆ ಇದನ್ನು ಶೋಧಿಸಿಕೊಳ್ಳಬೇಕು. ಮನೆಯಲ್ಲಿಯೇ ತಯಾರಿಸಿದ ಶುದ್ಧವಾದ ಎಣ್ಣೆ ಕೂದಲು ಉದ್ದವಾಗಿ, ದಟ್ಟವಾಗಿ ಮತ್ತು ಕಪ್ಪಾಗಿ ಬೆಳೆಯಲು ಸಹಾಯ ಮಾಡುವ ಕಹಿಬೇವಿನ ಎಣ್ಣೆಯನ್ನು ಈ ರೀತಿ ಮಾಡಿಕೊಳ್ಳಬಹುದು.