ಅಡುಗೆ ಮಾಡುವಾಗ ಹಲವಾರು ಸಣ್ಣ ಸಣ್ಣ ಸಮಸ್ಯೆ ಉಂಟಾಗುತ್ತದೆ ಇದಕ್ಕಾಗಿ ಕೆಲವು ಉಪಯೋಗಕಾರಿ ಟಿಪ್ಸ್ ಗಳನ್ನು ಈ ಲೇಖನದ ಮೂಲಕ ತಿಳಿಯೋಣ.
ಕುಕ್ಕರ್ ನಲ್ಲಿ ಬೇಳೆ ಬೇಯಿಸಲು ಇಟ್ಟಾಗ ನೀರು ಚೆಲ್ಲುತ್ತದೆ. ಅದಕ್ಕೆ ಕುಕ್ಕರ್ ಮುಚ್ಚಳಕ್ಕೆ ಗ್ಯಾಸ್ಕೆಟ್ ಹಾಕುವಲ್ಲಿ ಎಣ್ಣೆಯನ್ನು ಹಚ್ಚಬೇಕು ಇದರಿಂದ ಲಿಕೇಜ್ ಆಗುವುದಿಲ್ಲ. ಹೆಚ್ಚಾಗಿ ಕಬ್ಬಿಣದ ತವಾ ಬಳಸುತ್ತಾರೆ. ತುಂಬಾ ದಿನ ದೋಸೆ ಮಾಡಿಲ್ಲ ಅಂದರೆ ದೋಸೆ ಎದ್ದೇಳುವುದಿಲ್ಲ ಆಗ ಹಂಚನ್ನು ಬಿಸಿ ಇಟ್ಟು ಒಂದು ಸ್ಪೂನ್ ಸಾಸಿವೆಯನ್ನು ಹಾಕಿ ಉಜ್ಜಬೇಕು ನಂತರ ಹಳೆ ಬಟ್ಟೆಯಿಂದ ಸಾಸಿವೆಯನ್ನು ತೆಗೆಯಬೇಕು. ಕಬ್ಬಿಣದ ತವಾ ಬಳಸುವುದು ಒಳ್ಳೆಯದು. ನಂತರ ಈರುಳ್ಳಿಯನ್ನು ಫೋರ್ಕನಲ್ಲಿ ಚುಚ್ಚಿ ಈರುಳ್ಳಿಯಿಂದ ಎಣ್ಣೆಯನ್ನು ತವಾಗೆ ಹಚ್ಚಿಕೊಂಡು ದೋಸೆ ಮಾಡಿದರೆ ಏಳುತ್ತದೆ. ಬೇಸಿಗೆ ಕಾಲದಲ್ಲಿ ದೋಸೆ ಹಿಟ್ಟು ಹೆಚ್ಚು ಹುಳಿ ಬರುತ್ತದೆ ಇದಕ್ಕೆ ಬೆಳಗ್ಗೆ ದೋಸೆ ಹಿಟ್ಟಿನ ಮೇಲೆ ಇರುವ ನೀರನ್ನು ತೆಗೆಯಬೇಕು ನಂತರ ಅರ್ಧ ಸ್ಪೂನ್ ಸಕ್ಕರೆ ಹಾಕುವುದರಿಂದ ಹುಳಿ ಕಡಿಮೆಯಾಗುತ್ತದೆ. ಯಾವುದೇ ಬೇಳೆಯು ಜಾಸ್ತಿ ದಿನ ಇದ್ದರೆ ಹಾಳಾಗಿಹೋಗುತ್ತದೆ ಆದ್ದರಿಂದ ಬೇಳೆಯ ಡಬ್ಬದಲ್ಲಿ ಪಲಾವ್ ಎಲೆಯನ್ನು ಬೇಳೆಯ ಮಧ್ಯದಲ್ಲಿ ಹಾಕಿ ಇಡುವುದರಿಂದ ಹಾಳಾಗುವುದಿಲ್ಲ ಹುಳ ಆಗುವುದಿಲ್ಲ, ಹೆಚ್ಚು ದಿನ ಬಾಳಿಕೆ ಬರುತ್ತದೆ. ಮಾವಿನಕಾಯಿ, ಚಿಕ್ಕು, ಪಪ್ಪಾಯ ಇತರೆ ಹಲವು ಕಾಯಿಯನ್ನು ಅಕ್ಕಿ ಡಬ್ಬದಲ್ಲಿ ಇಡುವುದರಿಂದ ಬೇಗ ಹಣ್ಣಾಗುತ್ತದೆ. ನೋನಸ್ಟಿಕ್ ತವಾ ಅಥವಾ ಬಾಂಡ್ಲಿಗೆ ಅರ್ಧ ಲೋಟ ವಿನೆಗರ್ ಮತ್ತು ಒಂದು ಸ್ಪೂನ್ ಬೇಕಿಂಗ್ ಸೋಡಾ ಹಾಕಿ ಸ್ವಲ್ಪ ಹೊತ್ತು ಕುದಿಯಲು ಬಿಡಬೇಕು ನಂತರ ಚೆನ್ನಾಗಿ ಉಜ್ಜಬೇಕು ನಂತರ ಅದನ್ನು ವಿಮ್ ಜಲ್ ನಿಂದ ತೊಳೆದರೆ ಕ್ಲೀನ್ ಆಗುತ್ತದೆ. ಹುಣಸೆಹಣ್ಣನ್ನು ಎರಡು ದಿನ ಬಿಸಿಲಲ್ಲಿ ಇಟ್ಟು 1 ಸ್ಪೂನ್ ಉಪ್ಪು ಹಾಕಿ ಇಡುವುದರಿಂದ ಹಾಳಾಗುವುದಿಲ್ಲ ಹೆಚ್ಚು ದಿನ ಬಾಳಿಕೆ ಬರುತ್ತದೆ.
ಬೇಸಿಗೆ ಕಾಲದಲ್ಲಿ ತಂಬಳಿ, ಮೊಸರು ಹುಳಿ ಬರುತ್ತದೆ. ಒಂದು ಪಾತ್ರೆಗೆ ನೀರು ಹಾಕಿ ಹುಳಿ ಬರುವ ಮೊಸರು, ತಂಬಳಿ ಪಾತ್ರೆ ಇಟ್ಟು ಮುಚ್ಚಿಡುವುದರಿಂದ ಹುಳಿ ಬರುವುದಿಲ್ಲ ಇದು ಫ್ರಿಜ್ ಇಲ್ಲದೆ ಇರುವವರಿಗೆ ಸಹಾಯವಾಗುತ್ತದೆ. ಅನ್ನ ಉದುರು ಉದರಾಗಬೇಕು ಅಂದರೆ ಒಂದು ಸ್ಪೂನ್ ಎಣ್ಣೆ ಹಾಗೂ ಅರ್ಧ ಸ್ಪೂನ್ ಉಪ್ಪು ಹಾಕಿ ಅನ್ನ ಮಾಡುವುದರಿಂದ ಅನ್ನ ಉದುರಾಗುತ್ತದೆ. ಸಾಂಭಾರಿಗೆ ಉಪ್ಪು ಹೆಚ್ಚಾದಾಗ ಒಂದು ಆಲೂಗಡ್ಡೆಯನ್ನು ಬೇಯಿಸಿ ಹೋಳುಗಳನ್ನಾಗಿ ಮಾಡಿ ಹಾಕಿ ಒಂದು ಕುದಿ ಬರಬೇಕು ಇದರಿಂದ ಉಪ್ಪನ್ನು ಆಲೂಗಡ್ಡೆ ಹೀರಿಕೊಳ್ಳುತ್ತದೆ. ಖಾರ ಜಾಸ್ತಿ ಆದಾಗಲೂ ಹೀಗೆ ಮಾಡಬಹುದು. ಲೋಟ ಒಂದಕ್ಕೊಂದು ಕಚ್ಚಿಕೊಂಡಿದ್ದರೆ ಅದರ ಸೈಡ್ ಎಣ್ಣೆಯನ್ನು ಹಚ್ಚಿ ಒಂದು ನಿಮಿಷದ ನಂತರ ಸುಲಭವಾಗಿ ತೆಗೆಯಬಹುದು. ಮಿಕ್ಸಿ ಜಾರ್ ಬಹಳ ದಿನ ಬಳಸಿ ಅದರ ಬ್ಲೇಡ್ ಸವೆದು ಹೋಗುತ್ತದೆ. ಆದ್ದರಿಂದ ಜಾರ್ ಗೆ 3 ಸ್ಪೂನ್ ಉಪ್ಪು ಹಾಕಿ ರನ್ ಮಾಡುವುದರಿಂದ ಬ್ಲೇಡ್ ಹರಿತವಾಗುತ್ತದೆ. ಬೆಳ್ಳುಳ್ಳಿ ಗಡ್ಡೆಯನ್ನು ಅದರ ಸಿಪ್ಪೆಯನ್ನು ಬಿಡಿಸಿ ನೀರಿನಲ್ಲಿ 10 ನಿಮಿಷ ನೆನೆಸಿ ಸಿಪ್ಪೆ ತೆಗೆಯುವುದರಿಂದ ಸುಲಭವಾಗಿ ಸಿಪ್ಪೆ ಬಿಡುತ್ತದೆ. ಈ ಟಿಪ್ಸ್ ಗಳನ್ನು ಅನುಸರಿಸಿ ಹಾಗೂ ತಪ್ಪದೆ ಎಲ್ಲರಿಗೂ ತಿಳಿಸಿ.