ಮನೆಯಲ್ಲಿ ಸುಲಭವಾಗಿ ಶುದ್ಧವಾದ ತೆಂಗಿನ ಎಣ್ಣೆಯನ್ನು ತಯಾರಿಸಿಕೊಳ್ಳುವುದು ಹೇಗೆ ಎನ್ನುವುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಮೊದಲು ತೆಂಗಿನ ಕಾಯಿಯನ್ನು ಒಡೆದು ತುರಿದುಕೊಳ್ಳಬಹುದು ಅಥವಾ ಸಣ್ಣದಾಗಿ ಪೀಸ್ ಕೂಡ ಮಾಡಿಕೊಳ್ಳಬಹುದು. ಚಿಕ್ಕದಾಗಿ ಕಟ್ ಮಾಡಿಕೊಂಡು ಮಿಕ್ಸಿ ಜಾರಿಗೆ ಸ್ವಲ್ಪ ಸ್ವಲ್ಪವೇ ತೆಂಗಿನಕಾಯಿಯನ್ನು ಹಾಕಿ ರುಬ್ಬಿಕೊಳ್ಳಬೇಕು. ಇಲ್ಲಿ ಎರಡು ತೆಂಗಿನಕಾಯಿಗೆ ಒಂದರಿಂದ ಒಂದುವರೆ ಲೀಟರ್ ನಷ್ಟು ನೀರನ್ನು ಬಳಕೆ ಮಾಡಬಹುದು. ಸ್ವಲ್ಪ ಸ್ವಲ್ಪವಾಗಿ ಎಲ್ಲಾ ಕಾಯಿಯನ್ನು ಚೆನ್ನಾಗಿ ನುಣ್ಣಗೆ ರುಬ್ಬಿಕೊಂಡು ಒಂದು ಕಾಟನ್ ಬಟ್ಟೆ ಸಹಾಯದಿಂದ ಅದನ್ನು ಶೋಧಿಸಿ ರಸವನ್ನು ತೆಗೆದುಕೊಳ್ಳಬೇಕು. ಎಲ್ಲಾ ಕಾಯಿ ಹಾಲನ್ನು ತೆಗೆದುಕೊಂಡು ಸ್ವಲ್ಪ ಗಟ್ಟಿಯಾದ ಪ್ಲಾಸ್ಟಿಕ್ ಕವರಿನಲ್ಲಿ ಇದನ್ನು ಹಾಕಿ ಕಾಯಿಹಾಲು ಪ್ಲಾಸ್ಟಿಕ್ ಕವರ್ ನಿಂದ ಹೊರಗೆ ಬೀಳದಂತೆ ಗಟ್ಟಿಯಾಗಿ ಒಂದು ರಬ್ಬರ್ ಬ್ಯಾಂಡ್ ನ ಸಹಾಯದಿಂದ ಕಟ್ಟಿಡಬೇಕು. ಈ ರೀತಿಯಾಗಿ ಇದನ್ನು 6 ರಿಂದ 7 ಗಂಟೆಗಳ ಕಾಲ ಹಾಗೆ ಬಿಟ್ಟಿರಬೇಕು.
6ರಿಂದ 7 ಗಂಟೆಗಳ ನಂತರ ನಾವು ಮಿಕ್ಸಿ ಮಾಡಲು ಹಾಕಿಕೊಂಡಿರುವ ನೀರು ಕೆಳಗೆ ಸೇರಿಕೊಂಡು ತೆಂಗಿನಕಾಯಿಯ ಕ್ರೀಮ್ ಮಾತ್ರ ಮೇಲೆ ಸೇರಿಕೊಂಡಿರುತ್ತದೆ. ನಂತರ ಕವರಿನ ಒಂದು ಮೂಲೆಯಲ್ಲಿ ತುದಿಯಲ್ಲಿ ಚಿಕ್ಕದಾಗಿ ಕಟ್ ಮಾಡಿಕೊಂಡು ನೀರನ್ನೆಲ್ಲ ಹೊರಗೆ ತೆಗೆದುಕೊಳ್ಳಬೇಕು. ನೀರನ್ನೆಲ್ಲ ತೆಗೆದ ನಂತರ ಉಳಿದ ಬರೀ ತೆಂಗಿನಕಾಯಿ ಕ್ರೀಮನ್ನು ಮಾತ್ರ ಒಂದು ಪಾತ್ರೆಗೆ ಹಾಕಿಕೊಂಡು ಅದನನ್ನ ಸ್ಟೋವ್ ಮೇಲೆ ಇಟ್ಟು ಮಧ್ಯಮ ಉರಿಯಲ್ಲಿಟ್ಟು 25 ರಿಂದ 30 ನಿಮಿಷಗಳ ಕಾಲ ನಿಧಾನವಾಗಿ ಕಾಯಿಸಬೇಕು. ಹೀಗೆ ಕಾಯಿಸುತ್ತಾ ಕಾಯಿಸುತ್ತಾ ತೆಂಗಿನಕಾಯಿಯ ಬಿಳಿಬಣ್ಣದ ಕ್ರೀಮ್ ಕಾದನಂತರ ಸ್ವಲ್ಪ ಕೆಂಪಗಿನ ಬಣ್ಣಕ್ಕೆ ಬರುವವರೆಗೆ ಕಾಯಿಸಬೇಕು. ಕೆಂಪಗಿನ ಬಣ್ಣಕ್ಕೆ ತಿರುಗಿದಾಗ ತೆಂಗಿನ ಎಣ್ಣೆ ತಯಾರಾಗಿದೆ ಎಂದು ಅರ್ಥ. ಸ್ಟೋವ್ ಆಫ್ ಮಾಡಿ ಅದನ್ನು ಶೋಧಿಸಿ ಕೊಳ್ಳಬೇಕು. ಈ ರೀತಿ ಮಾಡಿಕೊಳ್ಳುವುದರಿಂದ ಯಾವುದೇ ರೀತಿಯ ರಾಸಾಯನಿಕಗಳನ್ನು ಬಳಸದ ಶುದ್ಧವಾದ ತೆಂಗಿನ ಎಣ್ಣೆಯನ್ನು ಮನೆಯಲ್ಲಿಯೇ ನಾವು ಮಾಡಿಕೊಂಡು ಬಳಸಬಹುದು.
ಈ ವಿಡಿಯೋ ನೋಡಿ ನಿಮಗೆ ಈ ಮಾಹಿತಿ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಧನ್ಯವಾದಗಳು