ಮನೆಯಲ್ಲಿ ಸುಲಭವಾಗಿ, ರುಚಿಕರವಾದ ಚಿಕನ್ ಮಾಡಲು ಬೇಕಾಗುವ ಸಾಮಗ್ರಿಗಳು ಹಾಗೂ ಮಾಡುವ ವಿಧಾನವನ್ನು ಈ ಲೇಖನದ ಮೂಲಕ ತಿಳಿಯೋಣ.
ಚಿಕನ್ ಮಾಡುವ ವಿಧಾನ 10-15 ಒಣಮೆಣಸನ್ನು ಪ್ರೈ ಮಾಡಿ ಪ್ರತ್ಯೇಕವಾಗಿ ಇಟ್ಟುಕೊಳ್ಳಬೇಕು. ಅದೇ ಪಾತ್ರೆಯಲ್ಲಿ ಒಂದು ಸ್ಪೂನ್ ಕಾಳುಮೆಣಸು. ಒಂದುವರೆ ಚಮಚ ಕೊತ್ತಂಬರಿ ಕಾಳು, ಅರ್ಧ ಚಮಚ ಜೀರಿಗೆ ಇವುಗಳನ್ನು ಪ್ರೈ ಮಾಡಿದ ನಂತರ ಕಾಲು ಚಮಚ ಬಡೆಸೊಪ್ಪು, ಗಸಗಸೆ, ದಾಲ್ಚಿನಿ, ಲವಂಗ, ಏಲಕ್ಕಿ ಹಾಗೂ ಸ್ವಲ್ಪ ಕಸ್ತೂರಿ ಮೇತಿ ಹಾಕಿ ಪ್ರೈ ಆದ ನಂತರ ಒಣಮೆಣಸಿನೊಂದಿಗೆ ಮಿಕ್ಸಿಗೆ ಹಾಕಿ ಪುಡಿ ಮಾಡಿಟ್ಟುಕೊಳ್ಳಿ.
ಅದೇ ಪಾತ್ರೆಯಲ್ಲಿ ಎಣ್ಣೆ ಹಾಕಿ ಬಿಸಿ ಆದ ನಂತರ ಕಾಲು ಕಪ್ ಬೆಳ್ಳುಳ್ಳಿ, ಕರಿಬೇವಿನ ಸೊಪ್ಪು ಅಥವಾ ಶುಂಠಿಯನ್ನು ಸಣ್ಣ ಚೂರು ಮಾಡಿ ಹಾಕಬಹುದು. ಬೆಳ್ಳುಳ್ಳಿ ಕೆಂಪಾಗುವವರೆಗೆ ಪ್ರೈ ಮಾಡಬೇಕು ನಂತರ ಚಿಕನ್ ಹಾಕಿ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಗೂ ಅರಿಶಿಣ ಹಾಕಿ 5 ನಿಮಿಷ ಪ್ರೈ ಮಾಡಿದ ನಂತರ ಮಾಡಿಟ್ಟುಕೊಂಡ ಮಸಾಲೆ ಹಾಕಿ ಮತ್ತೆ 5-10 ನಿಮಿಷ ಪ್ರೈ ಮಾಡಬೇಕು ನಂತರ ನೀರು ಹಾಕಿ ಪ್ರೈ ಮಾಡುತ್ತಿರಬೇಕು ಇದಕ್ಕೆ ಟೊಮೆಟೊವನ್ನು ಗ್ರೈಂಡ್ ಮಾಡಿಯೂ ಸಹ ಹಾಕಬಹುದು. ನಂತರ ಸ್ವಲ್ಪ ಹೊತ್ತು ಮುಚ್ಚಿಡಬೇಕು. ಚೆನ್ನಾಗಿ ಬೆಂದ ನಂತರ ಹುಳಿನೀರು ಅಥವಾ ನಿಂಬೆ ರಸವನ್ನು ಹಾಕಿ ಮಿಕ್ಸ್ ಮಾಡಿ ಮುಚ್ಚಿಡಬೇಕು ಒಂದು ಕುದಿ ಬಂದ ನಂತರ ಚಿಕನ್ ಸರಿಯಾಗಿ ಬೆಂದು ಸಾಫ್ಟ್ ಆಗುತ್ತದೆ. ಕೊತ್ತಂಬರಿ ಸೊಪ್ಪನ್ನು ಉದುರಿಸಬೇಕು. ಮನೆಯಲ್ಲಿ ಸುಲಭವಾಗಿ, ಶುಚಿಯಾಗಿ, ರುಚಿಕರವಾದ ಚಿಕನ್ ನ್ನು ಮಾಡಬಹುದು. ಈ ರೆಸಿಪಿಯನ್ನು ಚಿಕನ್ ಪ್ರಿಯರಿಗೆ ತಿಳಿಸಿ.