ಹಲವು ಜನರಿಗೆ ಗೃಹರಕ್ಷಕ ದಳದಲ್ಲಿ ಕೆಲಸ ಮಾಡಬೇಕು ಎಂದು ಆಸೆ ಇರುತ್ತದೆ. ಅಂಥವರಿಗೆ ಈಗ ಒಂದು ಗುಡ್ ನ್ಯೂಸ್ ಸಿಕ್ಕಿದ್ದು, ಮೈಸೂರು ಜಿಲ್ಲಾ ಗೃಹರಕ್ಷಕ ದಳದ ವ್ಯಾಪ್ತಿಯಲ್ಲಿ ಬರುವ ಗೃಹರಕ್ಷಕ ಘಟಕಗಳಾದ ಮೈಸೂರು, ನಂಜನಗೂಡು, ದೊಡ್ಡ ಕವಲಂದೆ, ಟಿ ನರಸೀಪುರ, ಹೆಚ್.ಡಿ ಕೋಟೆ, ಹ್ಯಾಂಡ್ ಪೋಸ್ಟ್, ಸರಗೂರು, ಕೆ.ಆರ್ ನಗರ, ಹುಣಸೂರು, ಪಿರಿಯಾಪಟ್ಟಣ ಇಲ್ಲೆಲ್ಲಾ ಖಾಲಿ ಇರುವ ಗೃಹರಕ್ಷಕ ಹುದ್ದೆಗಳನ್ನು ಭರ್ತಿ ಮಾಡಲು ಆದೇಶವನ್ನು ನೀಡಲಾಗಿದೆ.

ಈ ಹುದ್ದೆಗೆ ಆಗತ್ಯವಿರುವ ಮುಖ್ಯವಾದ ಅರ್ಹತೆ ಉತ್ತಮವಾದ ದೇಹಾರ್ಢ್ಯತೆ ಹೊಂದಿರುವುದಾಗಿದೆ. ಈ ರೀತಿ ಇರುವ ಅಭ್ಯರ್ಥಿಗಳು ಅಪ್ಲಿಕೇಶನ್ ಫಿಲ್ ಮಾಡಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ ಎಂದು ನೋಡುವುದಾದರೆ, ಆಸಕ್ತಿ ಇರುವ ಅಬ್ಯರ್ಥಿಗಳು ಮೈಸೂರಿನ ಜಿಲ್ಲಾ ಗೃಹರಕ್ಷಕ ಆಫೀಸ್ ಗೆ ಹೋಗಿ, ಅಲ್ಲಿಂದ ಅರ್ಜಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಬೇಕು..

ಫೆಬ್ರವರಿ 17, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಆಗಿರುತ್ತದೆ.
ಜಿಲ್ಲಾ ಸಮಾದೇಷ್ಟರವರ ಕಛೇರಿ, ಗೃಹರಕ್ಷಕದಳ ಸರಸ್ವತಿಪುರಂ, ಮೈಸೂರು ಇದು ಆಫೀಸ್ ಅಡ್ರೆಸ್ ಆಗಿದೆ. ಫೋನ್ ಮಾಡಿ ಕೂಡ ಅರ್ಜಿ ಸಲ್ಲಿಸಬಹುದು, 0821-2542877 ನಂಬರ್ ಗೆ ಕಾಲ್ ಮಾಡಿ ಮಾತನಾಡಬಹುದು.

By

Leave a Reply

Your email address will not be published. Required fields are marked *