ಸರ್ಕಾರಿ ಉದ್ಯೋಗ ಪಡೆಯುವುದು ಅತಿ ಹೆಚ್ಚು ಹೆಣ್ಣು ಮಕ್ಕಳ ಕನಸು. ಅದನ್ನು  ಬಯಸುವ ಮಹಿಳೆಯರಿಗೆ ಒಂದು ಸುವರ್ಣ ಅವಕಾಶ. ಕರ್ನಾಟಕದಲ್ಲಿ 6 ಜಿಲ್ಲೆಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕ ಕಾರ್ಯಕರ್ತೆಯ ನೇಮಕಾತಿ ನಡೆಯುತ್ತಿದೆ.

ಸರ್ಕಾರ ಆನ್’ಲೈನ್ ಮೂಲಕ ಅಪ್ಲಿಕೇಶನ್ (online application ) ಬಿಡುಗಡೆ ಮಾಡಿದೆ. ಹತ್ತನೇ ತರಗತಿ ( SSLC ) ಪೂರ್ಣಗೊಳಿಸಿದ ಮಹಿಳೆಯರು ಈ ಹುದ್ದೆಗೆ ಅರ್ಹತೆ ಹೊಂದಿರುತ್ತಾರೆ ಹಾಗೂ ಪ್ರಥಮ ಭಾಷೆ ಕನ್ನಡದಲ್ಲಿ ವ್ಯಾಸಂಗ ಮಾಡಿರಬೇಕು. ಈ ಹುದ್ದೆಗೆ ಬೇಕಾದ ಡಾಕ್ಯುಮೆಂಟ್ಸ್  ಹಾಗೂ ಅರ್ಜಿ ಸಲ್ಲಿಸುವ ವಿಧಾನವನ್ನು ತಿಳಿಯಿರಿ.
ಖಾಲಿ ಇರುವ ಹುದ್ದೆಗಳ ಸಂಖ್ಯೆ :– ಕರ್ನಾಟಕದ 6 ಜಿಲ್ಲೆಗಳಲ್ಲಿ 1000 ಹೆಚ್ಚಿನ ಹುದ್ದೆಗಳು ಖಾಲಿ ಇವೆ.

ಕೆಲಸ ಮಾಡಬೇಕಾದ ಸ್ಥಳಗಳು ( Work Places ):- ಕರ್ನಾಟಕ ರಾಜ್ಯದ ಒಟ್ಟು ಆರು ಜಿಲ್ಲೆಗಳಲ್ಲಿ ಅರ್ಜಿಗೆ ಆಹ್ವಾನ ಮಾಡಲಾಗಿದೆ. ಬೆಂಗಳೂರು ಗ್ರಾಮೀಣ, ಬೆಂಗಳೂರು ನಗರ, ಬೆಳಗಾವಿ, ಬೀದರ್, ಹಾವೇರಿ ಮತ್ತು ತುಮಕೂರು.

ವಿದ್ಯಾ ಅರ್ಹತೆ ( Education Qualification ):- ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ :- ಪಿಯುಸಿ ಅಥವಾ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.
ಸಹಾಯಕಿ ಹುದ್ದೆಗೆ :- ಹತ್ತನೇ ತರಗತಿ ( SSLC ) ಸಂಪೂರ್ಣ ಮಾಡಿರಬೇಕು.
ವಯಸ್ಸಿನ ಮಿತಿ ( Age Limitation ):- ಇಲಾಖೆಯ ನಿಯಮದ ಪ್ರಕಾರ ಅರ್ಜಿ ಸಲ್ಲಿಸಲು ಅರ್ಜಿದಾರರ ವಯಸ್ಸಿನ ಮಿತಿ 18 ರಿಂದ 35 ವರ್ಷಗಳು.
ಶುಲ್ಕದ ( fee ) ವಿವರ :- ಈ ವೃತ್ತಿಗೆ ಅಪ್ಲೈ ಮಾಡಲು ನೀವು ಯಾವುದೇ ರೀತಿಯ ಶುಲ್ಕ ಪಾವತಿ ಮಾಡುವ ಅಗತ್ಯ ಇರುವುದಿಲ್ಲ.

ಅರ್ಜಿ ಸಲಿಸುವ ವಿಧಾನ ಅಂತ ಅಂತವಾಗಿ ತಿಳಿಯೋಣ :-

  1. ಅರ್ಜಿ ಹಾಕಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ವೆಬ್ಸೈಟ್ ಗೆ ಹೋಗಿ.
    https://karnemakaone.kar.nic.in/abcd/ApplicationForm_JA_org.aspx
  2. ಜಿಲ್ಲೆಯ ಹೆಸರನ್ನು ( distict name ) ಸೆಲೆಕ್ಟ್ ಮಾಡಿ.
  3. ಶಿಶು ಅಭಿವೃದ್ಧಿ ಯೋಜನೆ ಬಟನ್ ಮೇಲೆ ಕ್ಲಿಕ್ ಮಾಡಿ.
  4. ನೇಮಕಾತಿ ಬಯಸುವ ಹುದ್ದೆಯ ಹೆಸರನ್ನು ಸೆಲೆಕ್ಟ್ ಮಾಡಿ. ( ಅಂಗನವಾಡಿ ಕಾರ್ಯಕರ್ತೆ ಅಥವಾ ಸಹಾಯಕಿ ).
  5. ನಂತರ ನೀವು ಅರ್ಜಿ ಸಲ್ಲಿಸಬೇಕಾದ ಅಂಗನವಾಡಿ ಕೇಂದ್ರವನ್ನು ಸೆಲೆಕ್ಟ್ ಮಾಡಬೇಕು. ( ಮೇಲಿನ 6 ಜಿಲ್ಲೆಗಳಲ್ಲಿ ನೀವು ಬಯಸುವ ಜಿಲ್ಲೆಯ ಹೆಸರು ಮತ್ತು ಅಂಗನವಾಡಿ ಕೇಂದ್ರ ).
  6. ನಂತರ ಆನ್‌ಲೈನ್‌ ಅರ್ಜಿ ಫಾರ್ಮ್‌ ಓಪನ್‌ ಆಗುತ್ತದೆ.
  7. ನಿಮ್ಮ ಹೆಸರು ವಯಸ್ಸು ಮತ್ತು ನಿಮ್ಮ ವಿದ್ಯಾರ್ಹತೆಯ ಮಾಹಿತಿಯನ್ನು ಭರ್ತಿ ಮಾಡಬೇಕು.
  8. ಆಧಾರ್ ಕಾರ್ಡ್ ನಂಬರ್ ಫೋನ್ ನಂಬರ್ ಭರ್ತಿ ಮಾಡಿ.
  9. ಮಾರ್ಕ್ಸ್ ಕಾರ್ಡ್ ಜೆರಾಕ್ಸ್ ಸ್ಕ್ಯಾನ್ ಮಾಡಿ ಹಾಕಬೇಕು. ನಂತರ ಅಪ್ಲೈ ಬಟನ್ ಮೇಲೆ ಕ್ಲಿಕ್ ಮಾಡಿ.

ಅಪ್ಲಿಕೇಶನ್ ಹಾಕಲು ಬೇಕಾಗಿರುವ ಮುಖ್ಯವಾದ ಡಾಕ್ಯುಮೆಂಟ್ಸ್ ವಿವರ :-
S.S.L.C ಮಾರ್ಕ್ಸ್ ಕಾರ್ಡ್, ಪಿಯುಸಿ ಮಾರ್ಕ್ಸ್ ಕಾರ್ಡ್.
ಹೆಚ್ಚಿನ ವಿದ್ಯಾಭ್ಯಾಸ ಮಾಡಿದ್ದರೆ ಅದರ ಮಾರ್ಕ್ಸ್ ಕಾರ್ಡ್.
ಆಧಾರ್ ಕಾರ್ಡ್ ಜೆರಾಕ್ಸ್.
ಜಾತಿ ಪ್ರಮಾಣ ಪತ್ರ.
ವಿಧವೆ ಮಹಿಳೆ ಆಗಿದ್ದರೆ ಪತಿಯ ಡೆತ್ ಸರ್ಟಿಫಿಕೇಟ್.
ಡೈವೋರ್ಸ್ ಆದ ಮಹಿಳೆ ಆಗಿದ್ದಲ್ಲಿ ಅದರ ಬಗ್ಗೆ ಸರಿಯಾದ ದಾಖಲೆ.
ಮೊಬೈಲ್ ಸಂಖ್ಯೆ.
ಆ’ತ್ಮಹತ್ಯೆಯಿಂದ ಮೃತನಾದ ರೈತರ ಪತ್ನಿಯಾಗಿದ್ದಲ್ಲಿ ಉಪವಿಭಾಗಾಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ.

ಅಪ್ಲಿಕೇಶನ್ ಓಪನ್ ಆದ ದಿನಾಂಕ :- ಜನವರಿ 16 2024 .
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :-
ಫೆಬ್ರುವರಿ 15 2024.
ಮಹಿಳೆಯರು ಇದರ ಸದುಪಯೋಗ ಪಡಿಸಿಕೊಳ್ಳಬಹುದು. ವ್ಯಾಸಂಗಕ್ಕೆ ತಕ್ಕ ಉದ್ಯೋಗ ಅದು ಕೂಡ ಸರ್ಕಾರಿ ಕೆಲಸ.

Leave a Reply

Your email address will not be published. Required fields are marked *