ಹಳ್ಳಿಗಳಲ್ಲಿ ಜಮೀನಿಗೆ ಹಾವು ಬರುವುದು ಸಹಜ ಹಾವುಗಳು ಜಮೀನಿನ ಸುತ್ತ ಮುತ್ತ ಬರದಂತೆ ತಡೆಯಲು ಇರುವ ಪರಿಹಾರವನ್ನು ಈ ಲೇಖನದ ಮೂಲಕ ತಿಳಿಯೋಣ

ಹಳ್ಳಿಗಳಲ್ಲಿ ಹಾವು ಸಾಮಾನ್ಯವಾಗಿ ಕಂಡುಬರುತ್ತದೆ ಅದರಲ್ಲೂ ಜಮೀನಿಗೆ ಹಾವು ಬರುವುದು ಸರ್ವೆ ಸಾಮಾನ್ಯ. ಜಮೀನಿನಲ್ಲಿ ಮೊಲ, ಇಲಿ, ಕೀಟಗಳು ಇರುತ್ತವೆ ಈ ಕಾರಣದಿಂದ ಹಾವು ಬರುತ್ತದೆ. ಇದು ಬಹಳಷ್ಟು ರೈತರಿಗೆ ಸಮಸ್ಯೆಯಾಗುತ್ತದೆ. ಹಾವನ್ನು ಕೊಲ್ಲುವುದು ತಪಾಗುತ್ತದೆ. ಹಾವುಗಳಿಗೆ ಕೆಲವು ಗಿಡಗಳು ಅಂದರೆ ಘಾಟ್ ಇರುವ ಗಿಡಗಳೆಂದರೆ ಆಗುವುದಿಲ್ಲ. ಆ ಗಿಡಗಳೆಂದರೆ ನಾಗಧಾಳಿ ಗಿಡ. ಇದರ ವಾಸನೆಗೆ ನಾಗರ ಹಾವುಗಳು ಬರುವುದಿಲ್ಲ. ಗಾರ್ಲಿಕ್ ಕ್ರೀಪರ್ ಇದು ಹೂ ಬಿಡುತ್ತದೆ ಇದಕ್ಕೆ ಬೆಳ್ಳುಳ್ಳಿ ಬಳ್ಳಿ ಎಂತಲೂ ಕರೆಯುತ್ತಾರೆ. ಇದು ಬೆಳ್ಳುಳ್ಳಿ ವಾಸನೆಯನ್ನು ಹೊಂದಿದೆ ಅಲ್ಲದೆ ಘಾಟ್ ಇರುತ್ತದೆ. ಈ ಗಿಡ ಇದ್ದರೆ ಹಾವು ಬರುವುದು ಕಡಿಮೆಯಾಗುತ್ತದೆ. ಚೆಂಡು ಹೂವಿನ ಗಿಡ ಬೆಳೆಸಿದರೆ ಅದರ ವಾಸನೆಗೆ ಹಾವು ಬರುವುದಿಲ್ಲ.

ಲೆಮನ್ ಗ್ರಾಸ್ ನಿಂಬೆ ಹುಲ್ಲು ಎಂದು ಹೇಳುತ್ತಾರೆ. ಈ ಹುಲ್ಲನ್ನು ಬೆಳೆಸುವುದರಿಂದ ಹಾವು ಓಡಾಡುವುದು ಕಡಿಮೆಯಾಗುತ್ತದೆ. ಸ್ನೇಕ್ ಪ್ಲಾಂಟ್ ಈ ಗಿಡವನ್ನು ಬೆಳೆಸುವುದರಿಂದ ಹಾವು ಬರುವುದಿಲ್ಲ. ಈ ಎಲ್ಲ ಗಿಡಗಳನ್ನು ಹಾವು ಹೆಚ್ಚು ಓಡಾಡುವ ಜಾಗದಲ್ಲಿ ಬೆಳೆಸುವುದರಿಂದ ಹಾವು ಜಮೀನಿಗೆ ಬರುವುದನ್ನು ತಡೆಯಬಹುದು. ಈ ರೀತಿ ಮಾಡುವುದರಿಂದ ಹಾವುಗಳನ್ನು ಕೊಲ್ಲದೆ ಜಮೀನಿನಿಂದ ದೂರ ಇಡಬಹುದು. ಮನೆಯಲ್ಲಿ ಮಕ್ಕಳು ಇದ್ದರೆ ಎಲ್ಲ ಕಡೆ ಆಟ ಆಡುವುದರಿಂದ ಆಕಸ್ಮಿಕವಾಗಿ ಕಚ್ಚಬಹುದು ಹೀಗಾಗಿ ಹಾವುಗಳು ಜಮೀನಿಗೆ, ಮನೆಗೆ ಬಾರದೆ ಇರಲು ಈ ಗಿಡಗಳನ್ನು ಬೆಳೆಸುವುದು ಉತ್ತಮ ಪರಿಹಾರವಾಗಿದೆ. ಈ ಮಾಹಿತಿಯನ್ನು ಎಲ್ಲರಿಗೂ ತಪ್ಪದೆ ತಿಳಿಸಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!