ಮನೆ ಕಟ್ಟುವುದು ಎಲ್ಲರಿಗೂ ಇರುವ ಒಂದು ಪ್ರಮುಖ ಕನಸಾಗಿರುತ್ತದೆ. ನಮ್ಮದೆ ಆದ ಒಂದು ಮನೆ ಇರಬೇಕು ಎಂದು ಎಲ್ಲರಿಗೂ ಇರುತ್ತದೆ. ಕಡಿಮೆ ಖರ್ಚಿನಲ್ಲಿ ಮನೆ ನಿರ್ಮಾಣ ಮಾಡಬಹುದು ಹಾಗಾದರೆ ಮನೆಯನ್ನು ಹೇಗೆ ನಿರ್ಮಾಣ ಮಾಡಬೇಕು, ಯಾವೆಲ್ಲಾ ಸಾಮಗ್ರಿಗಳನ್ನು ಬಳಸಬೇಕು ಎಂದು ಈ ಲೇಖನದಲ್ಲಿ ನೋಡೋಣ

10 ಲಕ್ಷ ರೂಪಾಯಿಯಲ್ಲಿ 2 ಬಿಎಚ್ ಕೆ ಮನೆಯನ್ನು ನಿರ್ಮಿಸಲಾಗಿದೆ. ಸಂಪು ಹಾಗೂ ಕಾಲಂ ಸ್ಟ್ರಕ್ಚರ್ ಹೆಚ್ಚಿಸಲು ಹೆಚ್ಚಿನ ಅಮೌಂಟ್ ಆಗುತ್ತದೆ. 700 ಸ್ಕ್ವೇರ್ ಫೀಟ್ ನಲ್ಲಿ ಮನೆ ಕಟ್ಟಲಾಗಿದೆ. ಪ್ಲಾನ್ ಮಾಡಬೇಕಾದರೆ ನಾಲ್ಕು ಭಾಗಗಳಾಗಿ ಮಾಡಿ ಒಂದು ಭಾಗದಲ್ಲಿ ಕಿಚನ್, ಇನ್ನೊಂದು ಭಾಗದಲ್ಲಿ ಹಾಲ್ ಇನ್ನೊಂದು ಭಾಗದಲ್ಲಿ ರೂಮ್ ಇನ್ನೊಂದು ಭಾಗದಲ್ಲಿ ಇನ್ನೊಂದು ರೂಮ್ ಮಾಡಬೇಕಾಗುತ್ತದೆ. ಒಂದು ರೂಮ್ ನ್ನು ದೊಡ್ಡದಾಗಿ ಮಾಡಿ ಅಟ್ಯಾಚ್ ಬಾತ್ರೂಮ್ ಮಾಡಬೇಕಾಗುತ್ತದೆ. ಇನ್ನೊಂದು ರೂಮ್ ನ ಚಿಕ್ಕದಾಗಿ ಮಾಡಬೇಕಾಗುತ್ತದೆ.

ಹಾಲ್ ನಲ್ಲಿ ದೇವರ ಕೋಣೆಯನ್ನು ಮಾಡಬೇಕು, ಸಪ್ರೆಟ್ ಆಗಿ ದೇವರ ಕೋಣೆ ಮಾಡುವುದಿಲ್ಲ 5000 ದಿಂದ 6000 ರೂಪಾಯಿಯಲ್ಲಿ ಒಂದು ದೇವರ ಕೋಣೆ ಮಾಡಬಹುದು, ದೇವರ ಪೀಠ ಸಿಗುತ್ತದೆ, ಗೋಡೆಗೆ ಫಿಕ್ಸ್ ಮಾಡಬಹುದು. ಲೇಬರ್ ಚಾರ್ಜ್ ಎರಡುವರೆ ಲಕ್ಷ ರೂಪಾಯಿ ಆಗುತ್ತದೆ. ಫೌಂಡೇಷನ್ ಗೆ ಒಂದು ವರೆ ಲಕ್ಷ ರೂಪಾಯಿ ಖರ್ಚಾಗುತ್ತದೆ, 4 ಅಡಿ ಅಗಲ ಫೌಂಡೇಷನ್ ಇರಬೇಕು, ಲಿವಿಂಗ್ ಎರಡು ಲಕ್ಷ ರೂಪಾಯಿ ಖರ್ಚಾಗುತ್ತದೆ. ಸ್ಲಾಬ್ ವರ್ಕ್ ಮಾಡಲು ಒಂದು ವರೆ ಲಕ್ಷ ಖರ್ಚಾಗುತ್ತದೆ. ಪ್ಲಾಸ್ಟ್ರಿಂಗ್, ವಿಂಡೋ, ಡೋರ್, ಗ್ರಿಲ್, ಪೇಂಟಿಂಗ್, ಕಿಚನ್ ಸ್ಲಾಬ್, ಸ್ಟೇರ್ ಕೇಸ್, ಪ್ಲಂಬಿಂಗ್ , ಇಲೆಕ್ಟ್ರಿಕಲ್ ಗೆ ಎರಡು ವರೆ ಲಕ್ಷ ರೂಪಾಯಿ ಖರ್ಚಾಗುತ್ತದೆ.

35 ಟು 40 ರೂಪಾಯಿಗೆ ಸಿಗುವ ಟುಬೈಟು ಸ್ಕ್ವೇರ್ ಫೀಟ್ ಟೈಲ್ಸ್ ಬಳಸಬೇಕು. ಬ್ರಿಕ್ಸ್ ಗಳನ್ನು ಬಳಸಬಹುದು, ಬಾತ್ರೂಮ್ ಗೆ ಪಿವಿಸಿ ಬಾಗಿಲು ಹಾಕಬೇಕು, ಬಾತ್ರೂಮ್ ಫಿಟಿಂಗ್ಸ್ ಗೆ ಪ್ಯಾರಗನ್ ಹಾಗೂ ಮಾರ್ವೆಲ್ ಫಿಟಿಂಗ್ಸ್ ಬಳಸಬೇಕು. ರೂಮ್ ಹಾಗೂ ಕಿಚನ್ ನಲ್ಲಿ ಸಜ್ಜಾ ಹಾಕಲಾಗುತ್ತದೆ. 500 ಲೀಟರ್ ಸಾಮರ್ಥ್ಯ ಇರುವ ಟ್ಯಾಂಕ್ ಇಡಲಾಗುತ್ತದೆ ಎರಡು ಸಾವಿರ ರೂಪಾಯಿಯಲ್ಲಿ ಟ್ಯಾಂಕ್ ಕೆಲಸ ಮುಗಿಯುತ್ತದೆ.

ಇಲೆಕ್ಟ್ರಿಕಲ್ ಫಿಟಿಂಗ್ ಹೈಫೈ ಫಿಟಿಂಗ್ ಮಾಡಿಸಬೇಕು ಎಷ್ಟು ಬೇಕೊ ಅಷ್ಟು ಮಾತ್ರ ಲೈಟ್ಸ್ ಹಾಕಬೇಕು. ಸಂಪು ಹಾಕಲು 50,000 ರೂಪಾಯಿ ಬೇಕಾಗುತ್ತದೆ, ಹೆವಿ ಫೌಂಡೇಷನ್ ಹಾಕಲು ಒಂದು ಲಕ್ಷ ರೂಪಾಯಿ ಖರ್ಚಾಗುತ್ತದೆ. ಹೀಗೆ ಮನೆ ನಿರ್ಮಾಣ ಮಾಡುವುದರಿಂದ ಕಡಿಮೆ ದುಡ್ಡಿನಲ್ಲಿ ಮನೆ ನಿರ್ಮಾಣವಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

By

Leave a Reply

Your email address will not be published. Required fields are marked *