ಮನೆ ನಿರ್ಮಾಣ ಮಾಡಲು ಯಾವ ರೀತಿಯ ಇಟ್ಟಿಗೆಗಳನ್ನು ಬಳಕೆ ಮಾಡಿದರೆ ಉತ್ತಮ ಎಂದು ತಿಳಿಯೋಣ ಬನ್ನಿ ;
ಮನೆ ಕಟ್ಟಲು ಅಡಿಪಾಯ ಎಷ್ಟು ಮುಖ್ಯವೋ ಅದೇ ,ರೀತಿ ಮನೆಯ ಗೋಡೆಗಳಿಗೆ ಅವು ಗಟ್ಟಿಯಾಗಿ ನಿಲ್ಲಲು ಇಟ್ಟಿಗೆಗಳು ಅಷ್ಟೇ ಮುಖ್ಯ. ಸಿಮೆಂಟ್ ಸಾಲಿಡ್ ಬ್ರಿಕ್ಸ್ ( Cement Solid bricks ) :- ಇವಾಗ ಹೆಚ್ಚಾಗಿ ಬಳಕೆ ಮಾಡುವ ಬ್ರಿಕ್ಸ್ ಎಂದರೆ ಅದು, ಸಿಮೆಂಟ್ ಸಾಲಿಡ್ ಬ್ರಿಕ್ಸ್. 16 ಇಂಚಸ್ ಉದ್ದ ಇರುತ್ತದೆ 8 ಇಂಚಸ್ ಎತ್ತರವಾಗಿ ಇರುತ್ತದೆ. ಆದರೆ, ಅಗಲದಲ್ಲಿ ವ್ಯತ್ಯಾಸ ಇರುತ್ತದೆ 4 ಇಂಚಸ್, 6 ಇಂಚಸ್, 8 ಇಂಚಸ್ ಲಭ್ಯವಿರುತ್ತದೆ.
ಒಳಗಿನ ಕಟ್ಟಡ ನಿರ್ಮಾಣ ಮಾಡಲು 4 ಇಂಚಸ್ ಅಗಲ ಇರುವ ಇಟ್ಟಿಗೆ ಬಳಕೆ ಮಾಡಬಹುದು ಆದರೆ, ಹೊರಗಿನ ಕಟ್ಟಡಕ್ಕೆ 6 ಇಂಚಸ್ ಮತ್ತು 8 ಇಂಚಸ್ ಬಳಕೆ ಮಾಡಲಾಗುತ್ತದೆ.
4 ಇಂಚಸ್ ₹ 23/-
6 ಇಂಚಸ್ ₹ 31/-
8 ಇಂಚಸ್ ₹ 45/-
2 ಬಿ.ಎಚ್.ಕೆ ( 2BHK ) ಮನೆ ನಿರ್ಮಾಣ ಮಾಡಲು ಅಂದಾಜು 3,000 ಇಟ್ಟಿಗೆಗಳ ಅವಶ್ಯಕತೆ ಇರುತ್ತದೆ. ಸಂಪೂರ್ಣವಾಗಿ ಇದಕ್ಕೆ ಬೇಕಾಗುವ ಬೆಲೆ ₹ 93,000 ₹1,00,000.
ಎಎಸಿ ಬ್ರಿಕ್ಸ್ ( AAC BRICKS ) :- ಈ ಇಟ್ಟಿಗೆಗಳು ತುಂಬಾ ಲೈಟ್ ವೆಯಿಟ್ ಆಗಿ ಇರುತ್ತವೆ. ಮನೆ ನಿರ್ಮಾಣವನ್ನು ಬೇಗ ಮಾಡಬಹುದು ಮತ್ತು ಫಿನಿಶಿಂಗ್ ಕೂಡ ಚೆನ್ನಾಗಿ ಬರುತ್ತದೆ. 8 ಇಂಚು ಎತ್ತರ ಹಾಗೂ 24 ಇಂಚು ಉದ್ದ ಸಿಗುತ್ತದೆ. ಅಗಲದಲ್ಲಿ ವ್ಯತ್ಯಾಸ ಇರುತ್ತದೆ 4 ಇಂಚಸ್ 6 ಇಂಚಸ್ 8 ಇಂಚಸ್.
4 ಇಂಚಸ್ :- ₹ 40/-
6 ಇಂಚಸ್ :- ₹ 60/-
8 ಇಂಚಸ್ :- ₹ 80/-
30/40 ಸೈಟ್’ನಲ್ಲಿ ಮನೆ ನಿರ್ಮಾಣ ಮಾಡಬೇಕು ಎಂದರೆ ಈ ಇಟ್ಟಿಗೆಗಳನ್ನು ಕಾಂಪೌಂಡ್, ಔಟರ್ ವಾಲ್’ಗೆ ಬಳಕೆ ಮಾಡಬಹುದು ಆದರೆ ಯಾವುದೇ ಕಾರಣಕ್ಕೂ ಬೇಸ್ಮೆಂಟ್’ಗೆ ಇದನ್ನು, ಬಳಕೆ ಮಾಡಬಾರದು. ಓವರ್ ಲೋಡ್ ತಡೆದುಕೊಳ್ಳುವ ಶಕ್ತಿ ಈ ಬ್ರಿಕ್ಗಳಲ್ಲಿ ಇರುವುದಿಲ್ಲ.
ಈ ಬ್ರಿಕ್’ಗಳು ಟ್ರಾನ್ಸ್ಫರೆನ್ಸಿ ಹೊಂದಿರುವುದರಿಂದ ಸೌಂಡ್ ಪ್ರೂಫ್ ಆಗಿ ಇರುವುದಿಲ್ಲ. ಈ ಬ್ರಿಕ್’ಗಳಿಗೆ ಪ್ಲಾಸ್ಟಿಂಗ್ ಮಾಡುವ ಅವಶ್ಯಕತೆ ಇರುವುದಿಲ್ಲ ಇವು ವಾಟರ್ ರೆಸಿಸ್ಟೆಂಟ್ ಇಟ್ಟಿಗೆಗಳಾಗಿ ಇರುತ್ತವೆ. ಪ್ಲಾಸ್ಟಿಕ್ ನೀಟಾಗಿ ಇಲ್ಲದೆ ಹೋದರೆ ಕಟ್ಟಡಗಳಲ್ಲಿ ಏರ್ ಕ್ರ್ಯಾಕ್ ಬರುವ ಸಾಧ್ಯತೆ ಇರುತ್ತದೆ. ಇವಗಳಿಗೆ ಪಟ್ಟಿ ಮಾಡಿ ಹಾಗೆ ಬಿಡಬಹುದು.
1000 ಸ್ಕ್ವಾರ್ ಫೀಟ್’ನಲ್ಲಿ ( square feet ) ಮನೆ ನಿರ್ಮಾಣ ಮಾಡಲು ಬೇಕಾಗುವ ಇಟ್ಟಿಗೆಗಳ ಸಂಖ್ಯೆ 1,900
6 ಇಂಚಸ್ = ₹ 1,14,000/-
8 ಇಂಚಸ್ = ₹ 1,52,000/-
ರೆಡ್ ಕ್ಲೇ ಬ್ರಿಕ್ಸ್ ( Red clay bricks ) :- ಈ ಕ್ಲೇ ಬ್ರಿಕ್ಸ್
ಬಳಕೆಯನ್ನು ಕಡಿಮೆ ಮಾಡಬೇಕು ಕಾರಣ ಇದರಿಂದ ಪರಿಸರಕ್ಕೆ ಹಾನಿಯಾಗುತ್ತದೆ. ಮಣ್ಣಿನ ಸಹಾಯದಿಂದ ಇವುಗಳನ್ನು ತಯಾರು ಮಾಡುವುದ ಕಾರಣ ಅದಕ್ಕಾಗಿ ಮಣ್ಣನ್ನು ಕೆಲವು ಕಡೆ ಅಗೆದು ಭೂಮಿ ನಾಶ ಮಾಡಲಾಗುತ್ತಿದೆ. 9 ಇಂಚ್ ಉದ್ದ, 4 ಇಂಚ್ ಅಗಲ ಮತ್ತು 3 ಇಂಚ್ ಎತ್ತರ ಲಭ್ಯವಿರುತ್ತದೆ.
ಲೋ ಕ್ವಾಲಿಟಿ ₹ 5/-
ಮೀಡಿಯಂ ಕ್ವಾಲಿಟಿ ₹ 6/-
ಹೈ ಕ್ವಾಲಿಟಿ ₹ 7 – 8/-
ಈ ಕ್ಲೇ ಬ್ರಿಕ್ಸ್ ಕಮ್ಮಿ ಬೆಲೆಯಲ್ಲಿ ಸಿಗಬಹುದು ಆದರೆ ಇದಕ್ಕೆ, ಬೇಕಾಗುವ ಸಿಮೆಂಟ್ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ.
ಫ್ಲೈ ಆಶ್ ಬ್ರಿಕ್ಸ್ ( Fly Ash bricks ) :-
ಈ ರೆಡ್ ಕ್ಲೇ ಬ್ರಿಕ್ಸ್ ಬದಲಿಗೆ ಫ್ಲೈ ಆಶ್ ಬಳಕೆ ಮಾಡಬಹುದು. ಇದು ಕೂಡ 9 ಇಂಚ್ ಉದ್ದ, 4 ಇಂಚ್ ಅಗಲ ಮತ್ತು 3 ಇಂಚ್ ಎತ್ತರ ಇರುತ್ತದೆ.
ಲೋ ಕ್ವಾಲಿಟಿ ₹ 3/-
ಮೀಡಿಯಂ ಕ್ವಾಲಿಟಿ ₹ 4/-
ಹೈ ಕ್ವಾಲಿಟಿ ₹ 5 – 6/-
ಫ್ಲೈ ಆಶ್ ಬ್ರಿಕ್ಸ್ ನಲ್ಲಿ ಹೋಲ್ಗಳು ( hole ) ಇರಬೇಕು ಮತ್ತು ಕಂಪನಿ ಲೋಗೋಗಳು ಇರಬೇಕು. ಆಟೋಮೆಟಿಕ್ ಮಷೀನ್’ನಿಂದ ತಯಾರಾದ ಈ ಇಟ್ಟಿಗೆಗಳು ಒಂದು ಮೆಕ್ಯಾನಿಸಂ ಬಳಕೆ ಮಾಡಿ ತಯಾರಾಗಿರುತ್ತದೆ. ಅದರಿಂದ, ಅವುಗಳಲ್ಲಿ ಲೋಗೋ ಇರುವುದು ಉತ್ತಮ ಗುಣಮಟ್ಟದ್ದು ಆಗಿರುತ್ತದೆ. ಚೀಪ್ ಕ್ವಾಲಿಟಿ ಇದ್ದರೂ ಬೆಸ್ಟ್ ಕನ್ಸ್ಟ್ರಕ್ಷನ್ ವರ್ಕ್ ಆಗುತ್ತದೆ ಈ ಇಟ್ಟಿಗೆಗಳ ಸಹಾಯದಿಂದ. ಲಾಂಗ್ ರನ್’ನಲ್ಲೂ ಕೂಡ ಪ್ಲೈ ಯಶ್ ಬ್ರಿಕ್ಸ್’ಗಳಿಂದ ಕಟ್ಟಡಗಳ ಒಳ್ಳೆಯ ಬಾಳಿಕೆ ಬರುತ್ತದೆ.
6 ಇಂಚಸ್ ಅಗಲ 14 ಇಂಚಸ್ ಉದ್ದ ಇರುವ ಬ್ರಿಕ್ಸ್ ಸಹ ಸಿಗುತ್ತದೆ. ₹ 35/-
30/40 ಸೈಟ್’ಗೆ 12,000 ದಿಂದ 15,000 ತನಕ ಇಟ್ಟಿಗೆ ಬೇಕಾಗುತ್ತದೆ ₹ 1,00,000/- ಆಗುತ್ತದೆ. ಈ ಬ್ರಿಕ್ ಬಳಕೆ ಮಾಡುವುದರಿಂದ ಕಟ್ಟಡದಲ್ಲಿ ದೃಢತೆ ಇರುತ್ತದೆ.
ವಿಳಾಸ :- ವಿಜಯ್ ಕುಮಾರ್ ಕೈಟ್ ಡಿಸೈನ್ ಅಂಡ್ ಕನ್ಸ್ಟ್ರಕ್ಷನ್ (Kite design and construction) ದೂರವಾಣಿ ಸಂಖ್ಯೆ :-09342989899