ಮಕ್ಕಳು ಉತ್ತಮ ವ್ಯಕ್ತಿಗಳಾಗಿ ಬೆಳೆಯಲು ತನ್ನ ಸುತ್ತಲಿನ ವಾತಾವರಣ ಮುಖ್ಯ ಕಾರಣವಾಗುತ್ತದೆ. ಮನೆಯಲ್ಲಿಯೇ ಮಕ್ಕಳನ್ನು ಹೇಗೆ ಇರಬೇಕು ಅನ್ನೋದನ್ನ ಕಲಿಸಬೇಕು, ಹಾಗೂ ಮನೆಯೇ ಮೊದಲ ಪಾಠಶಾಲೆ ಮನೆಯಲ್ಲಿ ತಂದೆ ತಾಯಿಗಳು ಪೋಷಕರು ಕೂಡ ಅ ಮಕ್ಕಳಿಗೆ ಶಿಕ್ಷಕರ ರೀತಿಯಲ್ಲಿ ಪಾಠವನ್ನು ಮಾಡಿ ಬುದ್ದಿ ಕಲಿಸಬೇಕಾಗುತ್ತದೆ. ಇನ್ನು ಮಕ್ಕಳಿಗೆ ಈ ರೀತಿಯ ಶ್ಲೋಕವನ್ನು ಕಲಿಸುವುದರಿಂದ ಮಕ್ಕಳಲ್ಲಿ ಉತ್ತಮ ಗುಣಗಳು ಹಾಗೂ ಮಕ್ಕಳ ಬುದ್ದಿ ಮಟ್ಟ ಹೆಚ್ಚಾಗಲು ಸಹಕಾರಿಯಾಗುತ್ತದೆ. ಅಷ್ಟಕ್ಕೂ ಶ್ಲೋಕ ಯಾವುದು ಅದನ್ನು ಹೇಗೆ ಪಠಿಸಬೇಕು ಅನ್ನೋದನ್ನ ತಿಳಿಯೋಣ.
ಮಕ್ಕಳ ಬುದ್ದಿ ಮಟ್ಟವನ್ನು ಹೆಚ್ಚಿಸುವ ಶ್ಲೋಕ ಯಾವುದು ಅನ್ನೋದನ್ನ ಹೇಳುವುದಾದರೆ, ಓಂ ಸಹನಾ ಭವತುಃ ಸಹನೋ ಭುನಕ್ತುಃ ಸಹವೀರ್ಯಂ ಕರವಾವಹೈ ತೇಜಸ್ವಿನಾವಧೀತಮಸ್ತು ಮಾವಿದ್ವಿಶಾವಹೈ ಓಂ ಶಾಂತಿ ಶಾಂತಿ ಶಾಂತಿಃ. ಎಂಬುದಾಗಿ ಈ ಶ್ಲೋಕವನ್ನು ಶಾಲೆಗಳಲ್ಲಿ ಕೂಡ ಹೇಳಿಕೊಡುತ್ತಾರೆ ಮನೆಯಲ್ಲಿ ಕೂಡ ಹೇಳುವ ಅಭ್ಯಾಸ ಇದ್ರೆ ಇನ್ನು ಉತ್ತಮ ಅನ್ನೋದು ಪಂಡಿತರ ಮಾತು.
ಶ್ಲೋಕದ ಅರ್ಥ ಈ ರೀತಿಯಾಗಿದೆ ನಮ್ಮೆಲ್ಲರನ್ನೂ ದೈವಿಕ ಶಕ್ತಿ ರಕ್ಷಿಸಲಿ, ಎಲ್ಲರೂ ಜೊತೆಯಾಗಿ ಆಹಾರ ಸೇವಿಸೋಣ, ಅಗಾಧವಾದ ಶಕ್ತಿಯಿಂದ ಎಲ್ಲರೂ ಒಗ್ಗೂಡಿ ಕೆಲಸ ಮಾಡೋಣ ನಮ್ಮೆಲ್ಲರ ಬೌದ್ಧಿಕ ಬೆಳವಣಿಗೆ ಮತ್ತಷ್ಟು ವೃದ್ಧಿಯಾಗಲಿ. ಅಷ್ಟೇ ಅಲ್ದೆ ನಮ್ಮೆಲ್ಲರ ನಡುವೆ ವೈರತ್ವ ಬಾರದೇ ಇರಲಿ ಎಂಬುದು ಈ ಶ್ಲೋಕದ ಅರ್ಥ ಇದು ಒಬ್ಬ ವ್ಯಕ್ತಿಯನ್ನು ಉತ್ತಮ ಮಟ್ಟದಲ್ಲಿ ಬೆಳೆಯಲು ಸಹಕಾರಿಯಾಗುತ್ತದೆ. ಮೊದಲಿನಿಂದಲೂ ಮಕ್ಕಳನ್ನು ಹೇಗೆ ಪೋಷಣೆ ಮಾಡುತ್ತೇವೋ ಅದರ ಆದರದ ಮೇಲೆ ಮಕ್ಕಳು ಉತ್ತಮ ವ್ಯಕ್ತಿಗಳಾಗಿ ಬೆಳೆಯುತ್ತಾರೆ.
ಇನ್ನು ಎರಡನೆಯ ಶ್ಲೋಕ ಯಾವುದು ಅನ್ನೋದನ್ನ ತಿಳಿಯುವುದಾದರೆ ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ| ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮ: ಎಂಬುದಾಗಿ ಈ ಶ್ಲೋಕವನ್ನು ಮಕ್ಕಳಿಗೆ ಕಲಿಸುವುದರಿಂದ ಮಕ್ಕಳಲ್ಲಿ ಬಾಲ್ಯದಿಂದಲೇ ಬೋಧನೆ ಮಾಡುವ ಗುರುಗಳ ಬಗ್ಗೆ ಗೌರವಾದರಗಳು ಬೆಳೆಯುತ್ತವೆ. ಗುರುವನ್ನು ಬ್ರಹ್ಮ ವಿಷ್ಣು ಮಹೇಶ್ವರಿಗೆ ಹೋಲಿಕೆ ಮಾಡಲಾಗಿದ್ದು, ಗುರುವೇ ಸಾಕ್ಷಾತ್ ಪರಬ್ರಹ್ಮ ಎಂಬ ಅರ್ಥವನ್ನು ಈ ಶ್ಲೋಕ ನೀಡುತ್ತದೆ. ಹಾಗಾಗಿ ಈ ಶ್ಲೋಕ ಕೂಡ ಹೆಚ್ಚಿನ ಮಹತ್ವವನ್ನು ವಹಿಸುತ್ತದೆ ಗುರುಗಳಿಗೆ ಗೌರವ ನೀಡುವ ಮಕ್ಕಳು ತಂದೆ ತಾಯಿಗಳಿಗೆ ವಿದೇಯರಾಗಿರುತ್ತಾರೆ.