ಈ 6 ಹೂವುಗಳೆಂದರೆ ದೇವಾನುದೇವತೆಗಳಿಗೆ ಬಲು ಪ್ರೀತಿ, ಒಂದೊಂದು ಹೂವುಗಳಿಗೆ ಇದೆ ದೈವೀ ಶಕ್ತಿ

0 41

ಭೂಮಿಯ ಮೇಲೆ ಸೃಷ್ಟಿಯಾಗಿರುವ ಪ್ರತಿಯೊಂದು ಜೀವಿಗೂ ಒಂದೊಂದು ಶಕ್ತಿ ಇದೆ ಪ್ರಾಣಿ ಪಕ್ಷಿಯಿಂದ ಹಿಡಿದು ಹೂಗಳಲ್ಲಿಯೂ ಭಗವಂತನ ದಿವ್ಯ ಶಕ್ತಿ ಇದೆ ಹೂಗಳೆಂದರೆ ದೇವರ ಸೃಷ್ಟಿಯ ಪ್ರತಿಬಿಂಬ ದೇವರ ಪಾದ ಸೇರುವ ಅದೆಷ್ಟೋ ಹೂಗಳಲ್ಲಿ ಭಗವಂತನಷ್ಟೇ ಶಕ್ತಿ ಅಡಗಿರುತ್ತದೆ

ಭಗವಂತನನ್ನು ಅದೆಷ್ಟೇ ಧ್ಯಾನಿಸಿ ಸಕಲೈಷ್ವರ್ಯಗಳನ್ನು ತಂದು ಮುಂದಿಟ್ಟರು ಕೂಡ ಒಂದು ಗರಿ ಹೂ ಇರದಿದ್ದರೆ ಅದು ತೃಣಕ್ಕೆ ಸಮಾನ ನೀವು ಮಾಡಿದ ಪೂಜೆ ನೀರಿನಲ್ಲಿ ಹೋಮ ಹಾಕಿದಂತೆ ಅದಕ್ಕೆ ಹಿರಿಯರು ಹೇಳುವುದು ಹೂವು ಇಲ್ಲದ ಪೂಜೆ ಪೂಜೆಯೇ ಅಲ್ಲ ಹೂವುಗಳಲ್ಲಿ ಎಲ್ಲ ಹೂವು ಶ್ರೇಷ್ಠವೇ ಆದರೆ ಅದರಲ್ಲಿ ಅತ್ಯದ್ಭುತವಾದ ಶಕ್ತಿ ಹೊಂದಿರುವ ಎಂಟು ಹೂವುಗಳಿವೆ ಅವುಗಳ ಬಗ್ಗೆ ತಿಳಿದುಕೊಳ್ಳೋಣ.

ಹೂವುಗಳಿಗೆ ಮನಸ್ಸನ್ನು ಹಗುರಗೊಳಿಸಿ ಸಂತೋಷದ ಕಡಲಲ್ಲಿ ತೆಲಿಸುವ ಶಕ್ತಿ ಇದೆ ಸಮೃದ್ಧಿ ಹಾಗೂ ಸೌಂದರ್ಯದ ಪ್ರತೀಕವಾದ ಹೂವುಗಳೆ ಸೃಷ್ಟಿಯಲ್ಲೊಂದು ಅದ್ಭುತ‌. ಸುಂದರ ಕೋಮಲತೆಯನ್ನು ಸಂಕೇತಿಸುವ ಹೂವುಗಳು ದೇವರ ಪೂಜೆಗೆ ಹಾಗೂ ಶುಭ ಸಮಾರಂಭಗಳಿಗೆ ಇರಲೇಬೇಕು.ದೇವರ ಮುಡಿಗೆರಡು ಪಾದಕ್ಕೆರಡು ಇಡದಿದ್ದರೆ ಪೂಜೆ ಸಂಪನ್ನ ಗೊಳ್ಳುವುದಿಲ್ಲ ಯಾರು ನಿರ್ಮಲ ಮನಸ್ಸಿನಿಂದ ದೇವರಿಗೆ ಹೂವನ್ನು ಅರ್ಪಿಸುತ್ತಾರೆ ಅದಕ್ಕಿಂತ ಪುಣ್ಯದ ಕೆಲಸವಿಲ್ಲ.

ಹಿಂದೂ ಧರ್ಮದ ಪ್ರಕಾರ ದೇವರಿಗೆ ಹೂವುಗಳೇಂದರೆ ಅತ್ಯಂತ ಪ್ರಿಯ ಒಂದೊಂದು ದೇವರಿಗೂ ಒಂದೊಂದು ಪ್ರಿಯವಾದ ಹೂವುಗಳಿಗೆ.ಮಹಭಾರತದಲ್ಲಿ ಹೇಳಿರುವಂತೆ ಯಾರು ಶುದ್ಧವಾದ ಮನಸ್ಸಿನಿಂದ ಧಾರ್ಮಿಕ ವಿಧಿ ವಿಧಾನಗಳಿಂದ ದೇವರಿಗೆ ಹೂವನ್ನು ಅರ್ಪಿಸುತ್ತಾರೆ ಅವರೇ ಭಗವಂತನ ಪ್ರಿಯ ಭಕ್ತರು ಅಂತಹ ಭಕ್ತರ ಪ್ರಾರ್ಥನೆಗೆ ದೇವರು ಸಂತೃಪ್ತನಾಗುತ್ತಾನೆ. ಹೀಗಾಗಿ ಹೂವನ್ನು ಸಮೃದ್ಧಿಯ ಸಂಕೇತ ಅನ್ನುವುದು ಯಾರು ದೇವರ ಚರಣಕಮಲಗಳಿಗೆ ಹೂವನ್ನು ಅರ್ಪಿಸುತ್ತಾರೋ ಅವರ ಬಾಳಲ್ಲಿಸಮೃದ್ಧಿ ಅನ್ನುವುದು ತುಂಬಿ ತುಳುಕುತ್ತದೆ.

ಹಿಂದೂ ಧರ್ಮದ ಪ್ರಕಾರ ಪುರಾಣಗಳಲ್ಲಿ ಉಲ್ಲೇಖ ಮಾಡಿರುವಂತೆ ದತ್ತುರ ಅಥವಾ ಉಮ್ಮತ್ತಿ ಹೂವು ರಾಕ್ಷಸರು ಹಾಗೂ ದೇವತೆಗಳು ಸಮುದ್ರ ಮಂತನ ಮಾಡುವ ಸಮಯದಲ್ಲಿ ಹಾಲಾಹಲ ಹೊರ ಹೊಂಬುತ್ತದೆ. ಆಗ ಸೃಷ್ಟಿಯ ರಕ್ಷಣೆಗೆ ಬರುವ ಶಿವ ಅದನ್ನು ಕುಡಿದು ವಿಷಕಂಠನಾಗುತ್ತಾನೆ. ಆಗ ಶಿವನ ರಕ್ಷಣೆಗಾಗಿ ಪರಮಾತ್ಮನ ಹೃದಯದಲ್ಲಿ ಹುಟ್ಟಿದ್ದೇ ದತ್ತುರ ಹೂ ಎಂಬ ನಂಬಿಕೆ ಇದೆ ಹಾಗಾಗಿ ಈ ಗಿಡವನ್ನು ಅತ್ಯಂತ ವಿಷಕಾರಿ ಗಿಡ ಎಂದು ಕರೆಯುವುದು ಶಿವನಿಗೆ ಈ ಹೂ ಎಂದರೆ ಬಲು ಪ್ರೀತಿ ಯಾರು ಭಗವಂತನಿಗೆ ಈ ಹೂವನ್ನು ಅರ್ಪಿಸುತ್ತಾರೆ ಅವರ ಬಾಳಲ್ಲಿ ಹಾಲಾಹಲವು ಅಮೃತವಾಗುತ್ತದೆ.

ಎರಡನೇ ಶ್ರೇಷ್ಟ ಹೂ ಕೆಂಪು ದಾಸವಾಳ ದೇವರ ಪೂಜೆಯಲ್ಲಿ ಕೆಂಪು ದಾಸವಾಳ ಹೂವಿಗೆ ವಿಶೇಷ ಸ್ಥಾನ ಮಾನ ಇದೆ ಈ ಹೂವು ಕಾಳಿದೇವಿಗೆ ತುಂಬಾ ಶ್ರೇಷ್ಟ ಹಾಗೂ ಪ್ರಿಯವಾದದ್ದಂತೆ ಈ ಹೂವಿನ ಬಣ್ಣ ಹಾಗೂ ಎಸಲಳಿನ ಆಕಾರ ಕಾಳಿದೇವಿಯ ನಾಲಿಗೆಯನ್ನು ಹೋಲುತ್ತದೆ. ಹಾಗಾಗಿ ಕಾಳಿದೇವಿಯ ಪೂಜೆಯ ವೇಳೆಗೆ ನೂರೆಂಟು ದಾಸವಾಳದ ಹೂವನ್ನೊಳಗೊಂಡ ಮಾಲೆಯನ್ನು ಮಾಡುವುದು ಇದರಿಂದ ದೇವಿಯ ಕೃಪೆಗೆ ಪಾತ್ರರಾಗುವುದು ಎಂಬ ನಂಬಿಕೆ ಇದೆ.

ಮೂರನೆಯ ಶ್ರೇಷ್ಟವಾದ ಹೂ ಪಾರಿಜಾತ ಹೂ ಅತ್ಯಂತ ಸುಗಂಧದಿಂದ ಕೂಡಿದ ಪಾರಿಜಾತ ದೇವರ ಆರಾಧನೆಗೆ ಶ್ರೇಷ್ಟವಾದದ್ದು. ರಾತ್ರಿಹೊತ್ತು ಮಾತ್ರ ಅರಳುವ ಈ ಹೂವಿನ ಬೇರುಗಳು ಸ್ವರ್ಗದಿಂದ ಬಂದಿವೆ ಹಾಗಾಗಿ ಈ ಹೂವಿನ ವಾಸನೆ ಸುಘಂದ ಬರಿತವಾಗಿರುತ್ತದೆ. ಪಾರಿಜಾತ ಹೂವೆಂದರೆ ವಿಷ್ಣು ಮತ್ತು ಲಕ್ಷ್ಮಿಗೆ ಅತ್ಯಂತ ಪ್ರಿಯ. ವಿಷ್ಣು ಪುರಾಣದ ಪ್ರಕಾರ ರಾಕ್ಷಸರು ಮತ್ತು ದೇವತೆಗಳ ನಡುವೆ ಸಮುದ್ರ ಮಂತನ ನಡೆಯುವ ಸಮಯದಲ್ಲಿ ಪಾರಿಜಾತದ ಮರ ಉದ್ಭವವಾಯಿತು. ಆಗ ಇದನ್ನು ನೋಡಿದ ಇಂದ್ರ ಇದನ್ನು ಸ್ವರ್ಗಕ್ಕೆ ತೆಗೆದುಕೊಂಡು ಹೋದರು ಆ ಕಾರಣಕ್ಕೆ ಪಾರಿಜಾತ ಎಂದರೆ ದೇವಾನು ದೇವತೆಗಳಿಗು ತುಂಬಾ ಇಷ್ಟ.

ನಾಲ್ಕನೆಯ ಶ್ರೇಷ್ಠ ಹೂವು ಕಮಲದ ಹೂ ಇದು ಸಂಪತ್ತು ಹಾಗೂ ಸಮೃದ್ಧಿಯನ್ನು ಕರುಣಿಸುವ ಲಕ್ಷ್ಮಿದೇವಿಗೆ ಬಲು ಪ್ರಿಯವಾದ ಹೂ. ದೀಪಾವಳಿ ಲಕ್ಷ್ಮಿ ಪೂಜೆ ಅಥವಾ ಲಕ್ಷ್ಮಿ ದೇವಿಯ ಹತ್ತಿರ ಹೋದಾಗ ಕಮಲದ ಹೂವನ್ನು ಅರ್ಪಿಸುವುದು ತುಂಬಾ ಒಳ್ಳೆಯದು ಯಾರು ಭಕ್ತಿ ಹಾಗೂ ಪರಿಶುದ್ಧ ಭಾವನೆಯಿಂದ ಕಮಲದ ಹೂವನ್ನು ಅರ್ಪಿಸುತ್ತಾರೋ ಅವರ ಬಾಳಲ್ಲಿ ಮಹಾಲಕ್ಷ್ಮಿ ಸದಾ ನೆಲೆಸುತ್ತಾರೆ ಎಂಬ ನಂಬಿಕೆ ಇದೆ. ಇದರ ಫಲವಾಗಿ ಸಮೃದ್ಧಿ ಹಾಗೂ ಸಂಪತ್ತು ಅರಸಿ ಬರಲಿದೆ.

ಐದನೆಯ ಶ್ರೇಷ್ಟ ಹೂ ಗೊಂಡೆ ಹೂ ಅಥವಾ ಚೆಂಡು ಹೂವು.ಕೇಸರಿ ಬಣ್ಣದ ಚೆಂಡು ಹೂವು ಎಂದರೆ ಗಣೇಶನಿಗೆ ಪ್ರಿಯವಾದದ್ದು ಈ ಹೂವಿನ ವಿಶೇಷವೇನೆಂದರೆ ಎಲ್ಲ ಹೂಗಳಂತೆ ಕೆಲವೇ ದಳಗಳಲ್ಲ ಬಿದಿಸಿದಷ್ಟು ದಳಗಳು ಸೃಷ್ಟಿಯಾಗುತ್ತವೆ. ಈ ಹೂವಿನಿಂದ ಗಣೇಶನನ್ನು ಪೂಜಿಸಿದರೆ ಬಹುಬೇಗ ತೃಪ್ತನಾಗುತ್ತಾನಂತೆ. ಜೊತೆಗೆ ತನ್ನ ಭಕ್ತರ ಜೀವನದ ವಿಘ್ನಗಳನ್ನು ನಿವಾರಣೆ ಮಾಡುತ್ತಾನೆ.

ಆರನೆಯ ಹೂವು ಫಲಾಶ ಹೂ ಬಿಳಿ ಬಟ್ಟೆಯನ್ನುಟ್ಟು ಬಿಳಿಬಣ್ಣದ ಕಮಲದ ಮೇಲೆ ಕುಳಿತವಳೆ ಸರಸ್ವತಿ ದೇವಿ. ಬಿಳಿ ಬಣ್ಣದ ಎಲ್ಲ ಹೂವುಗಳು ಸರಸ್ವತಿಗೆ ಪ್ರಿಯವಾದದ್ದು ಅವುಗಳಲ್ಲಿ ಫಲಾಶ ಹೂವು ಎಂದರೆ ಇಷ್ಟ ಜಾಸ್ತಿ ಈ ಹೂವಿಲ್ಲದೆ ಶಾರದಾಂಬೆಯನ್ನು ಪೂಜಿಸಿದರೆ ಆ ಪೂಜೆ ಅಪೂರ್ಣವಾಗುತ್ತದೆ ಎಂಬ ನಂಬಿಕೆ ಇದೆ.

ಏಳನೆಯ ಶ್ರೇಷ್ಟ ಹೂ ತುಳಸಿ ಎಲೆ ಅಥವಾ ತುಳಸಿ ಹೂವು ಭಗವಂತನಿಗೆ ಅತ್ಯಂತ ಶ್ರೇಷ್ಠವಾದ ಹೂವುಗಳಲ್ಲಿ ತುಳಸಿಯು ಒಂದು. ತುಳಸಿ ದಳ ಅಥವಾ ತುಳಸಿ ಎಲೆ ಕೃಷ್ಣನಿಗೆ ಮತ್ತು ವಿಷ್ಣುವಿಗೆ ತುಂಬಾ ಪ್ರಿಯವಾದದ್ದು. ಇದರಲ್ಲಿ ಕೃಷ್ಣ ತುಳಸಿ ಮತ್ತು ರಾಮತುಳಸಿ ಎಂಬ ಎರಡು ವಿಧಗಳಿವೆ ಎರಡು ತುಳಸಿ ಎಲೆಗಳನ್ನು ದೇವರಿಗೆ ಅರ್ಪಿಸಬಹುದು‌. ಅತ್ಯಂತ ಪವಿತ್ರ ಹಾಗೂ ಶುದ್ಧತೆಯ ಪ್ರತೀಕವಾಗಿರುವ ತುಳಸಿಯನ್ನು ಅರ್ಪಿಸುವುದರಿಂದ ಅದ್ಭುತ ದಿನಗಳು ಮುಂದೆಬರಲಿವೆ.

ಸೌಂದರ್ಯ ಹಾಗೂ ಸುಗಂಧಕ್ಕೆ ಹೆಚ್ಚು ಪ್ರಸಿದ್ಧಿ ಪಡೆದಿರುವ ಹೂವುಮಲ್ಲಿಗೆ ಹೂ. ಇದು ಸಹ ದೇವರಿಗೆ ಅತ್ಯಂತ ಪ್ರಿಯವಾದದ್ದು ಇದು ಸರ್ವಾಂತರಯಾಮಿ ಇದ್ದಂತೆ. ಎಲ್ಲ ದೇವರ ಪೂಜೆಗೆ ಈ ಹೂವನ್ನು ಬಳಸಬಹುದು ಈ ಹೂವನ್ನು ಒಲ್ಲೆ ಎನ್ನುವ ದೇವರಿಲ್ಲ. ಹನುಮಂತನಿಗೆ ಮಲ್ಲಿಗೆ ಹೂ ಎಂದರೆ ಬಲು ಪ್ರೀತಿ ಇದೆ ಕಾರಣಕ್ಕೆ ಮಲ್ಲಿಗೆ ಹೂವಿನಿಂದ ತಯಾರಿಸಿದ ಎಣ್ಣೆಯಿಂದ ಸಿಂಧೂರವನ್ನು ಮಿಶ್ರಣ ಗೊಳಿಸುತ್ತಾರೆ ಇದು ಆಂಜನೇಯನಿಗೆ ಅತ್ಯಂತ ಪವಿತ್ರವಾದ ಸಿಂದೂರ ಎಂದು ಹೇಳಲಾಗುತ್ತದೆ. ಯಾರು ಮಲ್ಲಿಗೆ ಹೂವನ್ನು ಆಂಜನೇಯನಿಗೆ ಅರ್ಪಿಸುತ್ತಾರೊ ಅಂತವರ ಬಾಳು ಅಚ್ಚ ಹಸಿರಾಗಿರುತ್ತದೆ ಎಂಬ ನಂಬಿಕೆ ಇದೆ.

ಕೆಲವರು ತಮ್ಮ ತಮ್ಮ ಅನುಕೂಲಕ್ಕೆ ಅನುಗುಣವಾಗಿ ಹೂಗಳನ್ನು ದೇವರಿಗೆ ಅರ್ಪಿಸುತ್ತಾರೆ ನೀವು ಭಕ್ತಿಯಿಂದ ಹೂವನ್ನು ದೇವರಿಗೆ ಅರ್ಪಿಸಿದರೆ ಅದರಿಂದ ಸಂತುಷ್ಠನಾಗಿ ದೇವರು ನಿಮಗೆ ಒಳ್ಳೆಯದನ್ನು ಮಾಡುತ್ತಾನೆ.

Leave A Reply

Your email address will not be published.