ಮೊದಲಿನಿಂದಲೂ ಮಹಿಳೆಯರು ಪ್ರತಿದಿನ ಸೂರ್ಯ ಹುಟ್ಟುವುದಕ್ಕಿಂತಲೂ ಮುನ್ನವೇ ಎದ್ದು ತಮ್ಮ ನಿತ್ಯ ಕರ್ಮಗಳನ್ನ ಮುಗಿಸಿ ಮನೆಯನ್ನ ಹಾಗೂ ಮನೆಯ ಅಂಗಳವನ್ನ ಗುಡಿಸಿ, ಒರೆಸಿ ಸ್ವಚ್ಛಮಾಡಿ ದೇವರ ಪೂಜೆಯನ್ನ ಮಾಡುತಿದ್ದರು, ಆದರೆ ಈಗ ಕಾಲ ಬದಲಾಗಿದೆ ಕಾಲಕ್ಕೆ ತಕ್ಕಂತೆ ಮಹಿಳೆಯರು ತಮ್ಮ ಕೆಲಸದ ವಿಷಯವನ್ನು ಬದಲಾಯಿಸಿಕೊಂಡಿದ್ದಾರೆ.
ಇಂದಿನ ದಿನಮಾನಗಳಲ್ಲಿ ಪುರುಷರ ಸಮಾನವಾಗಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಚಾಪನ್ನ ಮೂಡಿಸುತ್ತಿರುವುದರಿಂದ, ಅವರ ಕೆಲಸದ ಸಮಯವನ್ನ ತಮ್ಮ ಗಮನದಲ್ಲಿಟ್ಟುಕೊಂಡು ಕೆಲಸವನ್ನ ಮಾಡುತ್ತಿದ್ದಾರೆ. ಯಾವ ಮನೆಯಲ್ಲಿ ಸುಸಂಸೃತ ಹಾಗೂ ಸಂಸ್ಕಾರವಂತ ಮಹಿಳೆ ಇರುತ್ತಾಳೋ ಅಂತಹ ಮನೆಯಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ ಎಂಬುದನ್ನ ಶಾಸ್ತ್ರ ಹೇಳುತ್ತದೆ. ವಾಸ್ತು ಹಾಗೂ ಗ್ರಂಥಗಳ ಪ್ರಕಾರ ಮಹಿಳೆಯರು ಮುಖ್ಯವಾಗಿ ಬೆಳಗ್ಗೆಯೇ ಈ ಒಂದು ಕೆಲಸವನ್ನ ಮಾಡಬೇಕು.
ಮನೆಯನ್ನ ಸದಾ ಸುಂದರವಾಗಿಟ್ಟುಕೊಳ್ಳಬೇಕು, ಹಾಗೂ ಮನೆಯನ್ನ ಸ್ವಚ್ಛಗೊಳಿಸುವ ಕೆಲಸವನ್ನ ಸದಾ ಬೆಳಗ್ಗೆಯೇ ಮಾಡಿ ಮುಗಿಸಬೇಕು. ಮನೆಯ ಮುಖ್ಯ ದ್ವಾರವು ವಾಸ್ತು ದೋಷದಿಂದ ಮುಕ್ತವಾಗಿರುವುದು ಬಹಳ ಮುಖ್ಯವಾಗುತ್ತದೆ, ಹಾಗೂ ಪ್ರತಿ ದಿನ ಬೆಳಗ್ಗೆ ಮುಖ್ಯ ದ್ವಾರವನ್ನ ಸ್ವಚ್ಛಗೊಳಿಸಬೇಕು.
ಇನ್ನು ಮನೆಯ ಮುಖ್ಯ ದ್ವಾರ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶವನ್ನ ಸದಾ ಸ್ವಚ್ಛವಾಗಿಟ್ಟುಕೊಳ್ಳುವುದು ಬಹಳ ಮುಖ್ಯವಾಗುತ್ತದೆ, ಇದು ಮನೆಗೆ ಸಕಾರಾತ್ಮಕ ಶಕ್ತಿಯ ಪ್ರವೇಶಕ್ಕೆ ಸಹಾಯಕವಾಗುತ್ತದೆ. ಮನೆಯ ಮುಖ್ಯ ದ್ವಾರದ ಮುಂದೆ ಸೌಭಾಗ್ಯಕ್ಕಾಗಿ ಪ್ರತಿ ದಿನ ಬೆಳಗ್ಗೆ ರಂಗೋಲಿಯನ್ನ ಹಾಕಬೇಕು, ಹಾಗೂ ಬಾಗಿಲಿಗೆ ತೋರಣಗಳನ್ನ ಹಾಕಿ ಸಿಂಗರಿಸಬೇಕು, ಮನೆಯ ಮುಖ್ಯ ದ್ವಾರ ಸುಂದರವಾಗಿದ್ದರೆ ಲಕ್ಷ್ಮೀದೇವಿ ಮನೆಗೆ ಪ್ರವೇಶಮಾಡಲು ಮನಸ್ಸು ಮಾಡುತ್ತಾಳೆ.
ಮನೆಯ ಮುಂದೆ ಬೇಡವಾದ ಗಿಡಗಳನ್ನ ಬೆಳೆಸಬಾರದು, ಅನವಶ್ಯಕವಾದ ಗಿಡಗಳನ್ನ ಕಿತ್ತೊಗೆಯಬೇಕು, ಮನೆಯ ಮುಂಬಾಗಿಲು ತೆಗೆಯುವಾಗ ಹಾಕುವಾಗ ಶಬ್ದವನ್ನ ಮಾಡಬಾರದು ಇದರಿಂದ ತೊಂದರೆಯಾಗುತ್ತದೆ.ನಿಮ್ಮ ಬಿಡುವಿಲ್ಲದ ಸಮಯದಲ್ಲೂ ಹಾಗೂ ನಿಮ್ಮ ಒತ್ತಡದ ಕೆಲಸದ ನಡುವೆಯೂ ನೀವು ನಿಮ್ಮ ಮನೆಯನ್ನ ಸುಂದರವಾಗಿ ಹಾಗೂ ಶುದ್ಧವಾಗಿ ಇಟ್ಟುಕೊಳ್ಳುವುದರಿಂದ ಮನೆಗೂ ಹಾಗೂ ಮನಸ್ಸಿಗೂ ಸಂತೋಷವನ್ನ ಉಂಟುಮಾಡುತ್ತದೆ. ಇದರಿಂದ ಲಕ್ಷ್ಮೀದೇವಿಯು ಸದಾ ನಿಮ್ಮ ಮನೆಗಳಲ್ಲಿ ನೆಲೆಸಿರುತ್ತಾಳೆ.