ನಮ್ಮ ದೇಶದಲ್ಲಿ ದೇವರನ್ನ ಹೆಚ್ಚಾಗಿ ನಂಬುತ್ತಾರೆ. ಇಲ್ಲಿ ಭಕ್ತಿ ಭಾವಗಳು, ಆಚಾರ ವಿಚಾರಗಳು ಹೆಚ್ಚು ದೇವರ ಮೇಲೆ ಭಕ್ತಿಯು ಸಹ ಹೆಚ್ಚು. ಇಂತಹ ಸಂದರ್ಭದಲ್ಲಿ ನಮ್ಮ ಕನಸಲ್ಲಿ ದೇವರುಗಳು ಬಂದರೆ ಏನಾಗುತ್ತೆ ಎಂಬುದು ಎಲ್ಲರಿಗೂ ಕಾಡುವಂತ ಪ್ರಶ್ನೆ. ನಾವುಗಳು ದೇವರನ್ನ ಕಂಡಿಲ್ಲ. ನಮ್ಮ ಕಲ್ಪನೆಗೆ ತಕ್ಕಂತೆ ನಾವು ದೇವರನ್ನ ನೋಡುತ್ತೇವೆ. ದೇವರನ್ನ ನಾವು ಕನಸಲ್ಲಿ ಕಂಡರೆ ಅದು ನಮಗೆ ಒಂದೊಂದು ಭಾವನೆಗಳು ಧನಾತ್ಮಕ ಭಾವವನ್ನ ಮೂಡಿಸುತ್ತದೆ ಇದರಿಂದ ಒಳ್ಳೆಯದೇ ಆಗುತ್ತದೆ. ಒಂದು ವೇಳೆ ನಿಮ್ಮ ಕನಸಲ್ಲಿ ಎಂದರು ದೇವರು ಬಂದಿದ್ದರೆ ಅದು ಒಳ್ಳೆಯದೇ.

ಹೌದು ನಿಮ್ಮ ಕನಸಲ್ಲಿ ದೇವರು ಬಂದಿದ್ದರೆ ದೇವರಿಗೆ ನೀವು ಬಹಳ ಪ್ರೀಯವಾಗಿದ್ದಿರಿ ಎಂದರ್ಥ. ದೇವರು ನಿಮ್ಮನ್ನ ಭಕ್ತಿ ಭಾವಗಳಿಂದ ತನ್ನತ್ತ ಸೆಳೆಯುತಿದ್ದಾನೆ ಎಂದರ್ಥ ಕೆಲವೊಮ್ಮೆ ನೀವು ದೇವಸ್ಥಾನಗಳಿಗೆ ಭೇಟಿಮಾಡುವುದನ್ನ ಕಡಿಮೆ ಮಾಡಿದ್ದರೆ. ದೇವರ ಮೇಲಿನ ಭಕ್ತಿ ಕಡಿಮೆಯಾಗಿದ್ದರೆ ಈ ರೀತಿಯಾದಂತಹ ಕನಸುಗಳು ಬೀಳುತ್ತವೆ. ಇದನ್ನ ನೀವು ತಪ್ಪಾಗಿ ತಿಳಿಯದೆ ದೇವರ ಕಡೆಗೆ ಭಕ್ತಿಯನ್ನ ತೋರುವುದು ಒಳ್ಳೆಯದು.

ಇದನ್ನ ಹೊರತು ಪಡಿಸಿ ದೇವರು ನಿಮ್ಮ ಕನಸಲ್ಲಿ ಬರುತ್ತಿದ್ದರೆ ಭಯಪಡುವ ಅಗತ್ಯವಿಲ್ಲ. ನೀವು ಯಾವುದಾದರು ಸಮಸ್ಯೆಯಲ್ಲಿ ಸಿಲುಕಿದ್ದರೆ, ತೊಂದರೆಯಲ್ಲಿದ್ದರೆ ದೇವರು ನಿಮ್ಮ ಜೊತೆಗಿದ್ದಾನೆ ಎಂಬುದರ ಸೂಚನೆ ಇದಾಗಿದೆ. ನಿಮ್ಮ ಕಷ್ಟದ ದಿನಗಳು ಬೇಗ ದೂರವಾಗಿ ಒಳ್ಳೆಯ ದಿನಗಳು ಬರುವುದರ ಸೂಚನೆ ಇದಾಗಿದೆ.

ದೇವರು ಕನಸಲ್ಲಿ ಬಂದು ನಿಮಗೆ ಸಲಹೆ ಸೂಚನೆಗಳನ್ನ ನೀಡಿದರೆ ನೀವು ನಿಮ್ಮ ಮನಃಸಾಕ್ಷಿ ಹೇಳಿದಂತೆ ಕೇಳಬೇಕು ಎಂಬುದರ ಅರ್ಥವನ್ನ ಸೂಚಿಸುತ್ತದೆ. ಇನ್ನು ನೀವು ಕನಸು ಕಾಣುವಂತಹ ಜಾಗಗಳ ಮೇಲು ಕೆಲವು ವಿಷಯಗಳು ನಿರ್ಧಾರವಾಗುತ್ತವೆ. ನೀವು ನಿಮ್ಮ ಸ್ವಂತ ಮನೆಯಲ್ಲಿ ಕನಸನ್ನು ಕಂಡರೆ ದೇವರ ಕೃಪೆ ನಿಮ್ಮ ಮನೆಯಮೇಲೆ, ಇದೆ ಎಂಬುದನ್ನ ಸೂಚಿಸುತ್ತದೆ. ಇನ್ನು ನೀವು ಕೆಲಸ ಮಾಡುವಂತಹ ಜಾಗದಲ್ಲಿ ನಿಮಗೆ ದೇವರು ಕಂಡಂತೆ ಭಾಸವಾದರೆ ನೀವು ಇನ್ನು ಹೆಚ್ಚು ಪರಿಶ್ರಮದಿಂದ ದುಡಿಯಬೇಕು ಎಂದು ಅರ್ಥ, ನೀವು ಓದುವವರರಿದ್ದಾರೆ ಶಾಲೆ ಅಥವಾ ಕಾಲೇಜುಗಳಲ್ಲಿ ದೇವರು ಕಂಡಂತೆ ಭಾಸವಾದರೆ ನೀವು ಇನ್ನು ಹೆಚು ಪರಿಶ್ರಮದಿಂದ ಓದಬೇಕು ಎಂಬುದನ್ನ ಸೂಚಿಸುತ್ತದೆ.

ಪ್ರತಿ ಬರಿ ದೇವರು ಕನಸಲ್ಲಿ ಬಂದರೆ ಅದು ಒಳ್ಳೆಯದು ಎಂದೇನಿಲ್ಲ, ದೇವರು ನಿಮ್ಮ ಮೇಲೆ ಕೋಪಿಸಿಕೊಂಡಂತೆ ಕನಸು ಬಿದ್ದರೆ ನಿಮಗೆ ದೇವರ ಮೇಲಿನ ಭಕ್ತಿ ಕಡಿಮೆಯಾಗಿದೆ, ನೀವು ಮಾಡುತ್ತಿರುವ ಕೆಲಸ ದೇವರಿಗೆ ಇಷ್ಟವಿಲ್ಲ ಎಂದರ್ಥ ಇದನ್ನ ಕಡಿಮೆ ಮಾಡಿಕೊಳ್ಳಲು ನೀವು ನಿಮ್ಮ ಅನೀತಿಯನ್ನ ಕಡಿಮೆ ಮಾಡಿಕೊಳ್ಳುವುದು ಉತ್ತಮ. ಇನ್ನು ಇದ್ಯಾವುದು ಅಲ್ಲದಿದ್ದರೂ ದೇವರು ನಿಮ್ಮ ಕನಸಲ್ಲಿ ಕಾಣುತಿದೆ ಎಂದರೆ ನಿಮ್ಮ ಯಾವುದೊ ಒಂದು ಹರಕೆ ಹಾಗೆ ಉಳಿದಿದೆ ಎಂಬ ಅರ್ಥವನ್ನ ಸೂಚಿಸುತ್ತದೆ. ಹಾಗೇನಾದರೂ ಹರಕೆಗಳಿದ್ದರೆ ಅದನ್ನ ತಕ್ಷಣ ತೀರಿಸುವುದು ಒಳ್ಳೆಯದು.

ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ದೋಷಗಳು ಅಥವಾ ಯಾವುದೇ ಕೆಲಸ ಕಾರ್ಯದಲ್ಲಿ ವಿಳಂಬ ಆಗುತ್ತಿದ್ದರೆ ಒಂದೇ ಕರೆಯ ಮೂಲಕ ಖಚಿತ ಪರಿಹಾರವನ್ನು ಕಂಡುಕೊಳ್ಳಿ ಶ್ರೀ ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಚಿಂತಕರು ಪಂಡಿತ್ ಎಂಪಿ ಶರ್ಮ ಗುರೂಜಿ ಕರೆ ಮಾಡಿ 98455 59493 ಸಮಸ್ಯೆ ಎಷ್ಟೇ ಕಠಿಣವಾದರೂ 2 ದಿನದಲ್ಲಿ ಪರಿಹಾರ ನೀಡುತ್ತೇವೆ. ವಜ್ರೇಶ್ವರಿ ಜ್ಯೋತಿಷ್ಯ ಕೇಂದ್ರ ಆರ್.ಟಿ ನಗರ

Leave a Reply

Your email address will not be published. Required fields are marked *