ನಮ್ಮ ಆಚಾರ ವಿಚಾರಗಳು ನಾವು ಹುಟ್ಟಿದ ಮೊದಲಿನಿಂದಲೂ ಕೂಡ ಹೀಗೆ ಇರುತ್ತದೆ. ನಮಗೆ ಕೆಲವೊಂದು ಪದ್ಧತಿ ಆಚಾರ ವಿಚಾರಗಳ ಬಗ್ಗೆ ಅಷ್ಟೊಂದು ಗೊತ್ತಿರೋದಿಲ್ಲ ಆದ್ರೂ ಕೂಡ ಅವುಗಳನ್ನು ನಾವುಗಳು ಅನುಸರಿಸುತ್ತೇವೆ. ಅದೇ ರೀತಿಯಲ್ಲಿ ಇದು ಕೂಡ ಹಾಗೆ ಮೃತ ವ್ಯಕ್ತಿಯ ಮನೆಯಲ್ಲಿ ಅಡುಗೆ ಮಾಡಬಾರದು ಅನ್ನೋದು ಹಿಂದಿನ ಕಾಲದಿಂದಲೂ ಕೂಡ ರೂಢಿಗತವಾಗಿದೆ ಆದ್ರೆ ಇದರ ಹಿಂದಿರುವಂತ ಒಂದಿಷ್ಟು ಕಾರಣಗಳನ್ನು ತಿಳಿಯೋಣ.

ಕೆಲವೊಮ್ಮೆ ಇಂತಹ ಆಚರಣೆಗಳು ಮೂಢನಂಬಿಕೆ ಅನಿಸಬಹುದು ಆದರೆ ಇದರ ಹಿಂದೆ ಒಂದು ಅರ್ಥ ಇರುತ್ತದೆ. ಹಾಗಂತ ಪ್ರತಿ ಮೂಢನಂಬಿಕೆಗಳನ್ನು ನಂಬಲೇ ಬೇಕು ಅಂತೇನಿಲ್ಲ ಎಲ್ಲವು ಕೂಡ ಅವರವ ವಿವೇಚನೆಗೆ ಬಿಟ್ಟಿದ್ದು ಹೌದು ಮುಖ್ಯವಾಗಿ ವಿಷ್ಯಕ್ಕೆ ಬರೋಣ, ಸತ್ತ ವ್ಯಕ್ತಿಯ ಮನೆಯಲ್ಲಿ ಒಲೆ ಅಚ್ಚಬಾರದು ಅಡುಗೆ ಮಾಡಬಾರದು ಎಂಬುದಾಗಿ, ಆದ್ರೆ ಕೆಲವರ ಸಂಪ್ರದಾಯದಲ್ಲಿ 3 ದಿನ 7 ದಿನ 11ದಿನ ಹೀಗೆ ದಿನಗಳ ಶೋಕಾಚರಣೆ ಇರುತ್ತದೆ.

ಮೃತ ವ್ಯಕ್ತಿಯ ಮನೆಯಲ್ಲಿ ಎಲ್ಲರು ಕೂಡ ಉಪವಾಸ ಇರಬೇಕೆಂದು ಏನಿಲ್ಲ ಆದ್ರೆ ಮನೆಯಲ್ಲಿ ಒಲೆಯ ಹಚ್ಚಬಾರದು ಅವರಿಗೆ ಅಕ್ಕ ಪಕ್ಕದ ಮನೆಯವರು ಅಥವಾ ಸಂಬಂದಿಕರು ಊಟವನ್ನು ತಂದು ಕೊಡಬೇಕು. ಹಿಂದಿರುವ ಅರ್ಥ ಮನೆಯವರು ಅಡುಗೆ ಮಾಡಿದರೆ ಮೃತರ ದೇಹದ ಜೊತೆಗೆ ಆತ್ಮ ಕೂಡ ಸುಟ್ಟುಹೋಗುತ್ತದೆ ಎಂದು ಹೇಳುವುದುಂಟು. ಅದು ಮೂಢ ನಂಬಿಕೆಯಷ್ಟೆ. ವಾಸ್ತವವಾಗಿ ಹೀಗೆ ಮನೆಯವರು ಅಡುಗೆ ಮಾಡಬಾರದು ಎಂಬುದಕ್ಕೆ ಕಾರಣ ಅವರಿಗೆ ದುಃಖಿಸಲು ಹಾಗೂ ಮೃತರಿಗೆ ಸಂತಾಪ ವ್ಯಕ್ತಪಡಿಸಲು ಒಂದಷ್ಟು ಸಮಯ ಸಿಗಲಿ ಎಂಬುದು. ಬೇರೆಯವರು ಅಡುಗೆ ಮಾಡಿ ಮನೆಯವರಿಗೆ ಬಡಿಸುವ ಮೂಲಕ ಆ ಮನೆಯಲ್ಲಿ ಒಬ್ಬರು ಹೊರಟು ಹೋಗಿದ್ದರೂ ನಿಮ್ಮ ಜೊತೆ ನಾವಿದ್ದೇವೆ ಎಂದು ಸಾಂಕೇತಿಕವಾಗಿ ಹೇಳುತ್ತಾರೆ. 11 ದಿನದ ಸೂತಕದ ಆಶಯವೂ ಇದೇ ಆಗಿದೆ. ಅದು ಮಡಿ-ಮೈಲಿಗೆಗೆ ಸಂಬಂಧಿಸಿದ್ದಲ್ಲ. ಬದಲಿಗೆ, ಮೃತರ ಸಮೀಪದ ಸಂಬಂಧಿಗಳಿಗೆ ದುಃಖ ನೀಗಿಕೊಳ್ಳಲು ಒಂದಷ್ಟು ಸಮಯಾವಕಾಶ ನೀಡುವುದು.

ಭೂಮಿ ಮೇಲೆ ಇರುವಂತ ಹಲವು ದರ್ಮಗಳ್ಲಲಿ ಒಂದೊಂದು ಆಚರಣೆಯನ್ನು ಕಾಣಬವುದು ಎಲ್ಲವು ಕೂಡ ವಿಭಿನ್ನವಾಗಿರುತ್ತೆ. ಒಬ್ಬ ವ್ಯಕ್ತಿ ಸತ್ತರೆ ಹಿಂದೂ ಧರ್ಮದಲ್ಲಿ 11 ದಿನಗಳ ಶೋಕಾಚರಣೆ ಇರುತ್ತದೆ, ಮುಸ್ಲಿಂ ಧರ್ಮದಲ್ಲಿ 3 ದಿನ ಕ್ರಿಶ್ಚಿಯನ್ನರಲ್ಲಿ 30 ದಿನದ ಶೋಕಾಚರಣೆಯನ್ನು ಕಾಣಬಹುದಾಗಿದೆ. ಹೆಚ್ಚು ದುಃಖ ನೀಡುವ ಸಾವಿಗೆ ಹೆಚ್ಚು ಸೂತಕ, ಕಡಿಮೆ ದುಃಖ ನೀಡುವ ಸಾವಿಗೆ ಕಡಿಮೆ ಸೂತಕ ಅಂದರೆ ಮನೆಯಲ್ಲಿ ಗಂಡ ಹೆಂಡತಿ ಮಕ್ಕಳು ಯಾರೇ ಸತ್ತರು ಹೆಚ್ಚು ದುಃಖ ನೀಡುವ ಸಾವು ಹೊರಗಿನವರು ದೂರದವರು ಸತ್ತರೆ ಕಡಿಮೆ ದುಃಖದ ಸಾವು ಹೀಗೆ ಅವರವರ ಸಮುದಾಯದಲ್ಲಿ ಪದ್ಧತಿ ರೂಡಿಯಲ್ಲಿದೆ. ಈ ಪದ್ಧತಿ ಹಿಂದಿನಿಂದಲೂ ಕೂಡ ರೂಢಿಗತವಾಗಿದ್ದು ಅದನ್ನೇ ಮುಂದುವರೆಸಿಕೊಂಡು ಬರಲಾಗುತ್ತಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!