Business Idea: ನಿರುದ್ಯೋಗ ಸಮಸ್ಯೆ ಇಂದಿಗೂ ಕೂಡ ಸಾಕಷ್ಟು ಕಡೆ ಇದೆ (Unemployment) ನಿರುದ್ಯೋಗ ನಿವಾರಣೆಗಾಗಿ (Govt) ಸರ್ಕಾರ ಶ್ರಮಿಸುತ್ತಲೆ ಇದೆ ಈ ಸ್ವಯಂ ಉದ್ಯೋಗ ನಿರುದ್ಯೋಗ ಸಮಸ್ಯೆಗೆ ಒಂದು ಸೂಕ್ತ ಕಡಿವಾಣ ಅಂತ ಹೇಳಬಹುದು ಈ ದಿಶೆಯಲ್ಲಿ ನೀವು ಸಹ ಲಾಭ ಇರುವಂತಹ ಯಾವುದೇ ಒಂದು ಉದ್ದಿಮೆ ಪ್ರಾರಂಭಿಸಿ ಅನೇಕ ನಿರುದ್ಯೋಗಿಗಳ ಬಾಳಿಗೆ ದಾರಿದೀಪವಾಗಬಹುದು ಇಂತಹ ಒಂದು ಸಾಹಸಕ್ಕೆ ಕೈ ಹಾಕಿ ಈ ದಾರಿಯಲ್ಲಿ ಸಾಗುತ್ತಿರುವುದು ಬೆಂಗಳೂರಿನ (Mother’s Technology) ಮದರ್ಸ್ ಟೆಕ್ನಾಲಜಿ.
ಕಳೆದ 12 ವರ್ಷಗಳಿಂದ ಕೆಲಸವನ್ನು ಮಾಡುವ ಯುವಕರಿಗೆ ಕೆಲಸವನ್ನ ಕೊಡುವ ಯಶಸ್ವಿ ಪ್ರಯತ್ನವನ್ನು ಮಾಡುತ್ತಿದೆ ಬೆಂಗಳೂರಿನ ಪೀಣ್ಯ 2ನೇ ಹಂತದ ಬಳಿ ಇರುವ ಮದರ್ಸ್ ಟೆಕ್ನಾಲಜಿ ಎನ್ನುವ ಕಾರ್ಖಾನೆ ಅತ್ಯಾಧುನಿಕ ಗಾಣದ ಎಣ್ಣೆ ತೆಗೆಯುವ ಯಂತ್ರ, ಅಡಿಕೆ ಹಾಳೆ ತಟ್ಟೆ ತಯಾರಿಸುವ ಯಂತ್ರ ಮತ್ತು ಪವರ್ ಪ್ಲೇಟ್ ಯಂತ್ರಗಳನ್ನು ತಯಾರಿಸಿ ರಾಜ್ಯದ ರೈತರಿಗೆ ಹಾಗೂ ಇತರೆ ಉದ್ದಿಮೆದಾರರಿಗೆ ಸಹಾಯಕ ಸಂಸ್ಥೆಯಾಗಿ ದುಡಿತಾ ಇದೆ.
ಇದರ ಮಾಲೀಕರಾದ ಲೋಕೇಶ್ ಮತ್ತು ನಿಂಗೇಗೌಡರ ಪ್ರಕಾರ ಇಂದಿಗೂ ಕೂಡ ನಿರುದ್ಯೋಗ ಎಂಬುದು ದೇಶದಲ್ಲಿ ಬಹುದೊಡ್ಡ ಸಮಸ್ಯೆ ಯುವಕರಲ್ಲಿ ಕೆಲಸ ಮಾಡುವಂತಹ ಶಕ್ತಿ ಹಾಗೂ ಆಸಕ್ತಿ ಇದ್ದರೂ ಸಹ ಸೂಕ್ತ ಕೆಲಸ ಅವರ ಬಳಿ ಇಲ್ಲ ಇಂತಹ ಯುವಕರ ತಂಡಕ್ಕೆ ಕೆಲಸವನ್ನ ನೀಡಿ ಅದರ ಮೂಲಕ ತಾವು ಕೂಡ ದುಡಿದು ಜನಸೇವೆ ಮಾಡುವುದು
ಅವರ ಉದ್ದೇಶ ಹಾಗಾಗಿ ಅವರು ಆಯ್ಕೆ ಮಾಡಿಕೊಂಡದ್ದು ಈ ಮಿಷನರಿ ತಯಾರಿಕೆ ಉದ್ದಿಮೆಯನ್ನು ಇವರ ಮದರ್ಸ್ ಟೆಕ್ನಾಲಜಿ ಪ್ರಾರಂಭವಾಗಿದ್ದು 2011ರಲ್ಲಿ ಅದಕ್ಕೂ ಮುನ್ನ ಇಂತಹ ಮಿಷನ್ ಗಳು ರಾಜ್ಯದಲ್ಲಿ ಎಲ್ಲೂ ಸಿಗುತ್ತಿರಲಿಲ್ಲ ದೂರದ ಊರುಗಳ ಕಾರ್ಖಾನೆಗಳಿಗೆ ಹೋಗಬೇಕಿತ್ತು ಅಲ್ಲಿ ಸಿಗುವಂತಹ ಕಾರ್ಖಾನೆ ದುಬಾರಿ ವೆಚ್ಚ, ಸಾರಿಗೆ ವೆಚ್ಚ ಹಾಗೂ ಯಂತ್ರಗಳ ಸರ್ವೀಸ್ ರಿಪೇರಿಗೆ ತೆಗೆದುಕೊಳ್ಳುತ್ತಿದ್ದ ವೆಚ್ಚ ಹಾಗೂ ಸಮಯ ಹಾಳು ಇದರಿಂದ ಮುಕ್ತಿ ಹೊಂದಲು ರಾಜ್ಯದಲ್ಲಿ ಆರಂಭಿಸಿ ಈ ಯಂತ್ರಗಳ ಅಗತ್ಯ ಇರುವವರಿಗೆ ಕೈಗೆಟಕುವ ಬೆಲೆಯಲ್ಲಿ ಯಾಕೆ ಮಾರಬಾರದು ಅಂತ ಲೋಕೇಶ್ ಮತ್ತು ನಿಂಗೇಗೌಡ ಯೋಜಿಸಿದ್ದರು
ಇದನ್ನೂ ಓದಿ..ಏರ್ಪೋರ್ಟ್ ನಲ್ಲಿದೆ ಕೈತುಂಬಾ ಸಂಬಳ ಸಿಗುವ ಕೆಲಸ, ನೀವು ಕೂಡ ಅರ್ಜಿ ಸಲ್ಲಿಸಬಹುದು.
ಇವರ ಯೋಜನೆಯ ಫಲವೇ ಇವತ್ತು ಬೆಂಗಳೂರಿನಲ್ಲಿ ತಲೆ ಎತ್ತಿರುವಂತ ಮದರ್ಸ್ ಟೆಕ್ನಾಲಜಿ ಇಲ್ಲಿ ದೊರೆಯುವ ಯಂತ್ರಗಳೆಂದರೆ ಅತ್ಯಾಧುನಿಕ ಗಾಣದ ಎಣ್ಣೆ ತೆಗೆಯುವ ಯಂತ್ರ, ಅಡಿಕೆ ಹಾಳೆ ತಟ್ಟೆ ತಯಾರಿಸುವ ಯಂತ್ರಗಳು ಇದರ ಮಾಲೀಕರಾದ ಲೋಕೇಶ್ ಮತ್ತು ನಿಂಗೇಗೌಡ ಅವರು ಗ್ರಾಹಕರಿಗೆ ಅಗತ್ಯವಾದ ಯಂತ್ರಗಳ ಆರ್ಡರ್ ಪಡೆದು ಅವರಿಗೆ ಬೇಕಾದ ರೀತಿಯಲ್ಲಿ ಕಸ್ಟಮೈಜ್ಡ್ ಯಂತ್ರಗಳನ್ನು ತಯಾರಿಸಿ ಕೊಡುತ್ತಾರೆ
ಇತರೆ ಕಂಪೆನಿಯಂತ್ರಗಳಿಗೂ ಮದರ್ಸ್ ಟೆಕ್ನಾಲಜಿ ಯಂತ್ರಗಳಿಗೂ ಸಾಕಷ್ಟು ವ್ಯತ್ಯಾಸಗಳಿವೆ ಇಲ್ಲಿ ತಯಾರಾದ ಯಂತ್ರಗಳ ಸೇವೆ ಫೀಚರ್ ಹಾಗೂ ಕ್ವಾಲಿಟಿ ಅಲ್ಲಿ ಹೆಚ್ಚು ಉತ್ಕೃಷ್ಟವಾಗಿದೆ. ಇಲ್ಲಿ ಗಾಣದ ಎಣ್ಣೆ ತೆಗೆಯುವ ಯಂತ್ರ ಮಾತ್ರವಲ್ಲದೆ ಅಡಿಕೆ ಹಾಳೆ ತಟ್ಟೆ ತಯಾರಿಸುವ ಯಂತ್ರ, ಪೇಪರ್ ಪ್ಲೇಟ್ ಮೇಕಿಂಗ್ ಯಂತ್ರಗಳು, ಡಿಸ್ಪೊಸಬಲೆ ಪ್ಲೇಟ್ ಮೇಕಿಂಗ್ ಯಂತ್ರಗಳು ಹಾಗೂ ಎಲ್ಲಾ ವಿಧದ ಹೈಡ್ರೋಲಿಕ್ ಪ್ಲೇಟಿಂಗ್ ಯಂತ್ರಗಳು ಲಭ್ಯ
ಇದನ್ನೂ ಓದಿ..ಮನೆ ಇಲ್ಲದವರಿಗೆ ಮುಖ್ಯಮಂತ್ರಿಗಳ ವಸತಿ ಯೋಜನೆಯಿಂದ ಉಚಿತ ಮನೆ, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
ಸುರಕ್ಷತೆ ಹಾಗೂ ಉತ್ತಮ ಕಾರ್ಯಕ್ಷಮತೆಯಿಂದ ಈ ಯಂತ್ರಗಳು ರಾಜ್ಯದ ಜನರ ಮೊದಲ ಆಯ್ಕೆಯಾಗಿದೆ ಈ ಯಂತ್ರಗಳು ರಾಜ್ಯದಲ್ಲಿ ಮಾತ್ರವಲ್ಲದೆ ಹೊರ ರಾಜ್ಯಗಳಾದ ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ಕೇರಳ ಹಾಗೂ ತೆಲಂಗಾಣ ಮುಂತಾದ ರಾಜ್ಯಗಳಲ್ಲಿ ಕೂಡ ಸೇವೆ ಸಲ್ಲಿಸುತ್ತಿದೆ.