ಏರ್ಪೋರ್ಟ್ ನಲ್ಲಿದೆ ಕೈತುಂಬಾ ಸಂಬಳ ಸಿಗುವ ಕೆಲಸ, ನೀವು ಕೂಡ ಅರ್ಜಿ ಸಲ್ಲಿಸಬಹುದು.

0 16

Driver jobs: ಈಗ ನಾವು ಹೇಳಲು ಹೊರಟಿರುವಂತಹ ಕೆಲಸವನ್ನು ನೀವು ಅರ್ಜಿ ಸಲ್ಲಿಸುವ ಮೂಲಕ ಆಯ್ಕೆಯಾಗಿ ತಿಂಗಳಿಗೆ 27ರಿಂದ 46,000 ಸಂಬಳವನ್ನು ಪಡೆದುಕೊಳ್ಳಬಹುದಾಗಿದೆ. ಡ್ರೈವಿಂಗ್ ಲೈಸೆನ್ಸ್ (Driving license) ಇರುವವರು ಹಾಗೂ ಡ್ರೈವಿಂಗ್ ಬರುವವರು ಈ ಕೆಲಸಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈಗಾಗಲೇ ಈ ಕೆಲಸಕ್ಕೆ ಅರ್ಜಿ ಆಹ್ವಾನ ಪ್ರಕ್ರಿಯೆ ಪ್ರಾರಂಭವಾಗಿದ್ದು ನೀವು ಕೂಡ ಅರ್ಜಿ ಸಲ್ಲಿಸಬಹುದಾಗಿದೆ. ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವ ಅವಕಾಶ ಇದಾಗಿದೆ. ಹಾಗಿದ್ದರೆ ಬನ್ನಿ ಇದರ ಕುರಿತಂತೆ ಇನ್ನಷ್ಟು ಹೆಚ್ಚಿನ ವಿವರವನ್ನು ತಿಳಿದುಕೊಳ್ಳೋಣ.

Kempegowda International Airport ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿ ಈ ಕೆಲಸ ಇದ್ದು ವಾಹನ ಚಾಲಕ ಹುದ್ದೆಯಾಗಿದೆ. ಡ್ರೈವಿಂಗ್ ನಲ್ಲಿ ಮೂರು ವರ್ಷಗಳ ಅನುಭವವನ್ನು ಕನಿಷ್ಠ ಪಕ್ಷ ಹೊಂದಿರಬೇಕು ಹಾಗೂ ತಿಂಗಳಿಗೆ 46 ಸಾವಿರ ವರೆಗೂ ಸಂಬಳವನ್ನು ದುಡಿಯಬಹುದಾಗಿದೆ. ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಕನಿಷ್ಠಪಕ್ಷ ಹನ್ನೆರಡನೇ ತರಗತಿಯಾದರೂ ನೀವು, ಓದಿದ್ದರೆ ಮಾತ್ರ ಈ ಕೆಲಸಕ್ಕೆ ಅರ್ಜಿಯನ್ನು ಸಲ್ಲಿಸುವಂತಹ ಅರ್ಹತೆಯನ್ನು ಹೊಂದಿರುತ್ತೀರಿ.

ಈ ಕೆಲಸದಲ್ಲಿ ಆಯ್ಕೆ ಆಗುವಂತಹ ಅಭ್ಯರ್ಥಿಗಳಿಗೆ ವಸತಿ ಊಟಪಚಾರ ಪಿಕಪ್ ಹಾಗೂ ಡ್ರಾಪ್ ಮತ್ತು ವೈದ್ಯಕೀಯ ಸೌಲಭ್ಯಗಳು ಸೇರಿದಂತೆ ಇನ್ನಿತರ ಅಗತ್ಯ ಸೌಲಭ್ಯಗಳು ಕೂಡ ಉಚಿತವಾಗಿ ದೊರೆಯುತ್ತವೆ. ಹೀಗಾಗಿ ಕೇವಲ ಕೆಲಸದ ವಿಚಾರದಲ್ಲಿ ಮಾತ್ರವಲ್ಲದೆ ಸಂಬಳ ಹಾಗೂ ಅದಕ್ಕೆ ಸಿಗುವಂತಹ ಇನ್ನಿತರ ಸೌಲಭ್ಯಗಳು ಕೂಡ ಈ ಕೆಲಸದ ಮೂಲಕ ನಿಮಗೆ ಉಚಿತವಾಗಿ ಸಿಗುವುದರಿಂದ ಈ ಕೆಲಸ ಖಂಡಿತವಾಗಿ ನಿಮಗೆ ಭವಿಷ್ಯದ ವಿಚಾರದಲ್ಲಿ ಸಾಕಷ್ಟು ಲಾಭವನ್ನು ತಂದುಕೊಡಲಿದೆ.

ಇದನ್ನೂ ಓದಿ..ಪಶುಪಾಲನೆ ಇಲಾಖೆಯಿಂದ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿಕರೆಯಲಾಗಿದೆ ಆಸಕ್ತರು ಅರ್ಜಿಹಾಕಿ

ಇನ್ನು ಈ ಕೆಲಸಕ್ಕೆ ಅಪ್ಲೈ ಮಾಡಲು ನೀವು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. ಮುಖಪುಟ ತೆರೆದ ನಂತರ ಅಲ್ಲಿ ಕೇಳಲಾಗುವಂತಹ ಅಗತ್ಯ ದಾಖಲೆಗಳನ್ನು ನೀವು ಭರ್ತಿ ಮಾಡಬೇಕು. ಸರಿಯಾದ ಇಮೇಲ್ ಐಡಿಯನ್ನು ನೀಡಿ ಹಾಗೂ ನಿಮ್ಮನ್ನು ಸಂಪರ್ಕಿಸುವುದಕ್ಕೆ ಸಮರ್ಪಕವಾದ ದೂರವಾಣಿ ಸಂಖ್ಯೆಯನ್ನು ಕೂಡ ಭರ್ತಿ ಮಾಡಬೇಕು. ನಿಮ್ಮ ಅರ್ಜಿಯನ್ನು ಪರಿಶೀಲಿಸಿದ ನಂತರ ನಿಮ್ಮನ್ನು ಆಯ್ಕೆ ಮಾಡಿದ್ದೇವೆ ಎಂಬುದು ಖಾತ್ರಿಯಾದರೆ ನೀವು ನೀಡಿರುವಂತಹ ದೂರವಾಣಿ ಸಂಖ್ಯೆಗೆ ನಿಮ್ಮನ್ನು ಸಂಪರ್ಕಿಸುತ್ತಾರೆ.

Leave A Reply

Your email address will not be published.