ಹಿಂದೂ ಧರ್ಮದಲ್ಲಿ ದಾನಕ್ಕೆ ಮಹತ್ವವಾದ ಸ್ಥಾನವಿದೆ. ದಾನ ಮಾಡಲು ಸಮರ್ಥನಿರುವ ವ್ಯಕ್ತಿ ಅವಶ್ಯಕತೆ ಇರುವವರಿಗೆ ಅವಶ್ಯವಾಗಿ ದಾನಮಾಡಬೇಕಾಗುತ್ತದೆ. ಅದರಲ್ಲೂ ಮನೆಗೆ ಬರುವ ಈ ನಾಲ್ಕು ಜನರನ್ನು ಇಂದಿಗೂ ಬರಿಗೈಯಲ್ಲಿ ಕಳುಹಿಸಲೇ ಬಾರದು. ಹಾಗಾದ್ರೆ ಅವರು ಆ ನಾಲ್ಕು ಜನ ಯಾರು ಅನ್ನೋದನ್ನ ನೋಡೋಣ.
ಮನೆಗೆ ಬರುವ ಭಿಕ್ಷುಕನನ್ನು ಎಂದಿಗೂ ಕಾಲಿ ಕೈನಲ್ಲಿ ಕಳುಹಿಸಬಾರದು. ಮನೆ ಬಾಗಿಲಿಗೆ ಬಂದ ಭಿಕ್ಷುಕರು ಕಾಲಿ ಕೈನಲ್ಲಿ ಹಿಂದಿರುಗಿ ಹೋದರೆ ದರಿದ್ರ ನಾರಾಯಣ ಮನೆಗೆ ಪ್ರವೇಶ ಮಾಡಿದ ಎಂದು ಅರ್ಥ. ಹಾಗೆ ಮಂಗಳ ಮುಖಿಯರನ್ನು ಬುಧಗ್ರಹವೆಂದು ಪರಿಗಣಿಸಲಾಗಿದೆ. ಮಂಗಳ ಮುಖಿಯರು ಮಾಡಿದ ಆಶೀರ್ವಾದ ಬೇಗ ಫಕ ನೀಡುವುದು ಎಂದೂ ಸಹ ನಂಬಲಾಗುತ್ತದೆ. ಹಾಗಾಗಿ ಮನೆಗೆ ಮಂಗಳಮುಖಿಯರು ಬಂದರೆ ಅವರನ್ನು ಕೂಡಾ ಕಾಲಿ ಕೈಯಲ್ಲಿ ಕಳುಹಿಸಬಾರದು . ನಮ್ಮಿಂದ ಆಗುವ ದಾನವನ್ನು ನೀಡಿ ಕಳುಹಿಸಬೇಕು.
ಮನೆಗೆ ಬರುವ ರೋಗಿಗಳನ್ನು ಕಾಲಿ ಕೈ ನಲ್ಲಿ ಕಳುಹಿಸಬಾರದು. ರೋಗಿಗಳನ್ನು ಶನಿ ಹಾಗೂ ರಾಹುವಿಗೆ ಹೋಲಿಕೆ ಮಾಡಲಾಗುತ್ತದೆ. ರೋಗಿಗಳಿಗೆ ದಾನ ಮಾಡಿದರೆ ಶುಭ ಫಲ ಪ್ರಾಪ್ತಿ ಆಗುತ್ತದೆ. ವೃದ್ಧ ಭಿಕ್ಷುಕರು ಏನಾದರೂ ಮನೆಯ ಬಾಗಿಲಿಗೆ ಬಂದರೆ ಅವರಿಗೆ ಇಂದಿಗೂ ದಾನ ನೀಡದೆ ಬರೀ ಕೈಯಲ್ಲಿ ಕಳುಹಿಸಬಾರದು. ವೃದ್ಧರ ಆಶೀರ್ವಾದದಿಂದ ಗುರುವಿನ ಅಶುಭ ಪ್ರಭಾವ ದೂರ ಆಗುತ್ತದೆ.