ಬಹಳಷ್ಟು ಜನರಿಗೆ ಒಮ್ಮೆಯಾದರೂ ಹೆಲಿಕ್ಯಾಪ್ಟರ್ ನಲ್ಲಿ ಓಡಾಡಬೇಕು ಎಂಬ ಆಸೆ ಇರುತ್ತದೆ. ದೊಡ್ಡ ದೊಡ್ಡ ಉದ್ಯೋಗದಲ್ಲಿರುವವರಿಗೆ ಅದೇನು ಕಷ್ಟವಲ್ಲ ಆದರೆ ರೈತರಿಗೆ ಹೆಲಿಕ್ಯಾಪ್ಟರ್ ನಲ್ಲಿ ಹೋಗುವುದು ಕನಸಿನ ಮಾತಾಗಿರುತ್ತದೆ. ಚಿತ್ರದುರ್ಗದ ಎರಡುನೂರಕ್ಕೂ ಹೆಚ್ಚು ರೈತರು ಹೆಲಿಕ್ಯಾಪ್ಟರ್ ನ ಅನುಭವ ಪಡೆದಿದ್ದಾರೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
ರೈತರು ಹೆಲಿಕಾಪ್ಟರ್ ನಲ್ಲಿ ಓಡಾಡುವುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಚಿತ್ರದುರ್ಗದ ರೈತರು ಹೆಲಿಕಾಪ್ಟರ್ ಹತ್ತುವ ಮೂಲಕ ಸಂಭ್ರಮ ಪಟ್ಟಿದ್ದಾರೆ, ಜೊತೆಗೆ ಹೆಲಿಕಾಪ್ಟರ್ ನಲ್ಲಿಯ ಅನುಭವವನ್ನು ಹಂಚಿಕೊಂಡಿದ್ದಾರೆ. ಚಿತ್ರದುರ್ಗದಲ್ಲಿ ಎಲ್ಲಾ ರೈತರು ಹೆಲಿಕಾಪ್ಟರ್ ಅನುಭವವನ್ನು ಪಡೆಯಬಹುದು. ಹೆಲಿಕಾಪ್ಟರ್ ನಲ್ಲಿ ಓಡಾಡುವುದು ಬೆಂಗಳೂರಂತಹ ದೊಡ್ಡ ದೊಡ್ಡ ಸಿಟಿಗಳಲ್ಲಿ ಮಾತ್ರ ನೋಡುತ್ತೇವೆ ಆದರೆ ನಮ್ಮ ಚಿತ್ರದುರ್ಗ ಜಿಲ್ಲೆಯ ರೈತರು ಹೆಲಿಕಾಪ್ಟರ್ ಅನುಭವವನ್ನ ಪಡೆದಿರುವುದು ವಿಶೇಷ.
ಚಿತ್ರದುರ್ಗದಲ್ಲಿ ಸುಮಾರು 200ಕ್ಕೂ ಹೆಚ್ಚು ರೈತರು, ಕುರಿಗಾಹಿಗಳು ವಿವಿಸಾಗರ ಹಿನ್ನೀರು ಪ್ರದೇಶದ ಸೊಬಗನ್ನು ಹೆಲಿಕಾಪ್ಟರ್ನಲ್ಲಿ ವೀಕ್ಷಿಸಿ ಸಂಭ್ರಮಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ವಿವಿಸಾಗರ ಹಿನ್ನೀರು ಪ್ರದೇಶದಲ್ಲಿ ಹೆಲಿಟೂರಿಸಂ ಅಭಿವೃದ್ಧಿ ಹಿನ್ನಲೆಯಲ್ಲಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ಗ್ರಾಮಾಂತರ ಪ್ರದೇಶದ ಜನರನ್ನು ಹೆಲಿಕಾಪ್ಟರ್ನಲ್ಲಿ ಸುತ್ತಿಸಿದ್ದಾರೆ. ಹೆಲಿಕಾಪ್ಟರ್ನಲ್ಲಿ ಸುತ್ತಿದ 200ಕ್ಕೂ ಅಧಿಕ ಜನರು ಮಲೆನಾಡನ್ನೆ ನಾಚಿಸುವಂತಹ ಸೊಬಗನ್ನು ಕಂಡು ಬೆರಗಾಗಿದ್ದಾರೆ. ಈ ಹಿಂದೆ ಹಂಪಿಯಲ್ಲಿ ಹೆಲಿಟೂರಿಸಂ ಆರಂಭಿಸಲಾಗಿತ್ತು. ಆಗ ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಇದೀಗ ಚಿತ್ರದುರ್ಗದಲ್ಲಿಯೂ ಐಲ್ಯಾಂಡ್ ನಿರ್ಮಾಣ, ಹೆಲಿಟೂರಿಸಂ ಹಾಗೂ ಬೋಟಿಂಗ್ಗೆ ಸಿದ್ಧತೆ ನಡೆದಿತ್ತು. ಇತ್ತೀಚಿನ ದಿನಗಳಲ್ಲಿ ಪ್ರವಾಸಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡಲಾಗುತ್ತದೆ. ಕೊರೋನ ವೈರಸ್ ಹರಡುತ್ತಿರುವ ಸಮಯದಲ್ಲಿ ಪ್ರವಾಸಿ ಉದ್ಯಮವು ನಷ್ಟವನ್ನು ಅನುಭವಿಸಿತ್ತು, ಇದೀಗ ಕೊರೋನ ವೈರಸ್ ನಿಂದ ಬಹುತೇಕ ಮುಕ್ತವಾಗಿ ಪ್ರವಾಸಿ ಸ್ಥಳಗಳಲ್ಲಿ ಜನರನ್ನು ನೋಡುತ್ತಿದ್ದೇವೆ. ಚಿತ್ರದುರ್ಗ ಜಿಲ್ಲೆಯಲ್ಲಿ ಹೆಲಿಟೂರಿಸಂ, ಐಲ್ಯಾಂಡ್ ನಿರ್ಮಾಣದಿಂದ ಪ್ರವಾಸ ಉದ್ಯಮಕ್ಕೆ ಪ್ರಯೋಜನವಾಗಲಿದೆ. ಚಿತ್ರದುರ್ಗ ಜಿಲ್ಲೆಯ ಪ್ರತಿಯೊಬ್ಬರು ಈ ವಿಷಯವನ್ನು ತಿಳಿದುಕೊಳ್ಳಬೇಕು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.