ಹಲವು ರೋಗಗಳಿಗೆ ಕಾರಣ ರಕ್ತ ಅಶುದ್ಧವಾಗಿರುವುದು. ರಕ್ತ ಅಶುದ್ಧಗೊಂಡರೆ ಏನೇನು ಆಗುತ್ತದೆ. ಚರ್ಮದ ಸಮಸ್ಯೆಗಳು ಬಂದಾಗ ಡಾಕ್ಟರ್ ಹೇಳುತ್ತಾರೆ ರಕ್ತ ಅಶುದ್ಧಗೊಂಡಿದೆ ಎಂದು. ಹಾಗಾದರೆ ಅಶುದ್ಧ ರಕ್ತ ಅಂದರೆ ಏನು? ಹೇಗೆ ರಕ್ತ ಕೆಡುತ್ತದೆ? ಎಂಬುದನ್ನು ನಾವು ತಿಳಿಯೋಣ.
ರಕ್ತದಲ್ಲಿನ ಪಿಎಚ್ ವ್ಯಾಲ್ಯೂ ಮಧ್ಯಮದಲ್ಲಿ ಇರಬೇಕು. ಅಸಿಡಿಕ್ ಕಡೆಯು ಇರಬಾರದು ಹಾಗೆಯೆ ಆಲ್ಕಲೆನ್ ಕಡೆಯು ಇರಬಾರದು. ಈಗಿನ ಆಹಾರ, ಜಂಕ್ ಪುಡ್, ಆಲ್ಕೊಹಾಲ್, ಟೊಬಾಕೊ ಎಲ್ಲವೂ ರಕ್ತದ ಪಿಎಚ್ ವ್ಯಾಲ್ಯೂ ಅಸಿಡಿಕ್ ಕಡೆಗೆ ಹೋಗುತ್ತದೆ. ಹೀಗೆ ರಕ್ತದ ಪಿಎಚ್ ವ್ಯಾಲ್ಯೂ ಅಸಿಡಿಕ್ ಕಡೆ ಹೋದಾಗ ಪಿತ್ತದ ಸಮಸ್ಯೆ ಪ್ರಾರಂಭವಾಗುತ್ತದೆ. ಪಿತ್ತ ಶುರುವಾದಾಗ ದೇಹದಲ್ಲಿ ಉಷ್ಣಾಂಶ ವೃದ್ಧಿಯಾಗುತ್ತದೆ. ಹೀಗೆ ಪಿತ್ತವಾದಾಗ ಚರ್ಮದ ಮೇಲೆ ಪರಿಣಾಮವನ್ನು ಬೀರುತ್ತದೆ. ಅಸಿಡಿಕ್ ಕಡೆಯಲ್ಲಿ ಹೋದಾಗ ಅದಕ್ಕೆ ವ್ಯತಿರಿಕ್ತವಾದ ಆಹಾರವನ್ನು ತೆಗೆದುಕೊಳ್ಳಬೇಕು. ಉದಾಹರಣೆಗೆ ಕಾಫಿ, ಟೀ, ಜಂಕ್ ಫುಡ್ ಗಳನ್ನು ತಿನ್ನಬಾರದು. ಹಾಲು, ಎಳನೀರು, ಸೌತೆಕಾಯಿ, ಕರ್ಬೂಜ, ಕಲ್ಲಂಗಡಿ, ಡ್ರೈ ಪ್ರೂಟ್ಸ್ ಮುಂತಾದ ಆಹಾರಗಳನ್ನು ಹೆಚ್ಚಾಗಿ ತೆಗೆದುಕೊಳ್ಳಬೇಕು. ಪಿತ್ತದ ಅಂಶ ಕಡಿಮೆಯಾದಾಗ ದೇಹದ ಉಷ್ಣಾಂಶ ಕಡಿಮೆ ಆಗಿ ರಕ್ತ ಶುದ್ಧಿಯಾಗುತ್ತದೆ. ರಕ್ತ ಶುದ್ಧಿಯಾದರೆ ಚರ್ಮ ರೋಗಗಳು ಕಡಿಮೆಯಾಗುತ್ತದೆ. ಜೊತೆಗೆ ಯಥೇಚ್ಛವಾಗಿ ನೀರು ಕುಡಿಯುವುದು ಪಿತ್ತವು ಕಡಿಮೆ ಆಗುತ್ತದೆ.
ಆದಷ್ಟು ಕೆಮಿಕಲ್ ಸೇರಿರುವ ಆಹಾರಗಳನ್ನು ಸೇವಿಸದೆ, ಆರೋಗ್ಯಯುತ ಆಹಾರವನ್ನು ಸೇವಿಸುವುದು ಉತ್ತಮ. ಇದರಿಂದ ರಕ್ತ ಶುದ್ಧವಾಗಿರುವುದರ ಜೊತೆಗೆ ಮುಂದೆ ಬರುವ ಎಷ್ಟೋ ಸಮಸ್ಯೆಗಳನ್ನು ತಡೆಯುತ್ತದೆ.