Health tips Kannada: ದಾಗಡಿ ಬಳ್ಳಿ ಎಂಬ ಗಿಡಮೂಲಿಕೆಯಿಂದ ಯಾವ ಯಾವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ. ಈ ದಾಗಡಿ ಬಳ್ಳಿಯು ಔಷಧಿಯಾಗಿ ಉಪಯೋಗಿಸುತ್ತಾರೆ ಮತ್ತು ತುಂಬಾ ಉಪಯೋಗಕಾರಿಯಾಗಿದೆ.
ದಾಗಡಿ ಬಳ್ಳಿ ಒಂದು ಶೀತ ವೀರ್ಯ ಗುಣ ಧರ್ಮವನ್ನು ಹೊಂದಿರುವಂತಹ ಸಸ್ಯ ಅಥವಾ ಬಳ್ಳಿಯಾಗಿದೆ ಇದರ ಎಲೆಯನ್ನು ಬೆಳಿಗ್ಗೆ ಎದ್ದ ತಕ್ಷಣ ಸೇವನೆ ಮಾಡುವುದರಿಂದ ನರ ದೌರ್ಬಲ್ಯತೆ ಕಡಿಮೆಯಾಗುತ್ತದೆ ಮತ್ತು ಕೈ ಕಾಲು ಜೋಮು ಹಿಡಿಯುವುದು ಕಡಿಮೆಯಾಗುತ್ತದೆ. ಅಂತೆಯೇ ಈ ಬಳ್ಳಿಯನ್ನ ಸೇವಿಸುವುದರಿಂದ ಲೈಂಗಿಕ ಸಮಸ್ಯೆ ದೂರವಾಗುತ್ತದೆ ಕೌಂಟ್ಸ್ ಮತ್ತು ಮೋಟಿಲೆಟ್ ತರಹದ ಸಮಸ್ಯೆಗಳಿದ್ದರೆ ಈ ಬಳ್ಳಿಯ ಎಲೆಯನ್ನು ತುಪ್ಪದ ಜೊತೆಗಿನ ನಿರಂತರ ಸೇವನೆಯಿಂದ ಅವುಗಳು ಪರಿಹಾರವಾಗುತ್ತವೆ.
ಇದು ಶೀತವೀರ್ಯ ಗುಣ ಧರ್ಮ ಹೊಂದಿರುವುದರಿಂದ ಅಸಿಡಿಟಿಯಿಂದ ಮುಕ್ತಗೊಳಿಸುತ್ತದೆ ಹಾಗೆಯೇ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡುಬರುವಂತಹ ಚರ್ಮರೋಗವನ್ನು ಸಹ ಗುಣಪಡಿಸಲು ಸಹಾಯಕವಾಗಿದೆ ಇದರ ಏಳೆಂಟು ಎಲೆಗಳನ್ನು ಸೇವನೆ ಮಾಡಿ ಅದರ ನಂತರ ಅಲೋವೆರಾ ರಸವನ್ನ ಸೇವಿಸಿದರೆ ಚರ್ಮರೋಗ ನಿವಾರಣೆಯಾಗುತ್ತದೆ.
ಕೂದಲಿನ ದಷ್ಟಪುಷ್ಟ ಬೆಳವಣಿಗೆಗೂ ಸಹ ಇದು ಉಪಯುಕ್ತವಾದ ಗಿಡಮೂಲಿಕೆಯಾಗಿದೆ ಸಮಸ್ಯೆಗಳು ದೂರವಾಗಿರಲು ಸಹಾಯಕವಾಗುತ್ತದೆ ಹಾಗೆಯೇ ಇದರ ಪೇಸ್ಟನ್ನು ಹಚ್ಚಿ ಸ್ನಾನ ಮಾಡುವುದರಿಂದ ಬೆವರಿನ ಕೆಟ್ಟ ವಾಸನೆ ದೂರವಾಗುತ್ತದೆ. ಇದು ಹೃದಯಕ್ಕೆ ಒಳ್ಳೆಯದು, ರಕ್ತನಾಳಗಳು ಹಾಗೆಯೇ ಈ ಬಳ್ಳಿ ಹೃದಯದಲ್ಲಿನ ಕೆಟ್ಟ ಕೊಲೆಸ್ಟ್ರಾಲನ್ನು ಕರಗಿಸಿ ಹೃದಯದ ನಾಳಗಳು ಬ್ಲಾಕ್ ಆಗದ ರೀತಿಯಲ್ಲಿ ನೋಡಿಕೊಳ್ಳುತ್ತದೆ
ಅಂತೆಯೇ ಪಿತ್ತ ಜನಾಂಗವನ್ನು ಸ್ವಚ್ಛಗೊಳಿಸುವ ಗುಣವನ್ನು ಈ ದಿವ್ಯ ಔಷಧಿ ಹೊಂದಿರುತ್ತದೆ ಹಾಗೆ ಈ ಗಿಡಮೂಲಿಕೆಯನ್ನ ಅತಿಯಾಗಿ ಸೇವನೆ ಮಾಡುವುದು ಹಾನಿಕಾರಕ ಎರಡರಿಂದ ಎಂಟು ಎಲೆಗಳನ್ನು ಬೆಳಗಿನ ಜಾವ ಸೇವನೆ ಮಾಡುವುದು ಅತ್ಯಂತ ಒಳ್ಳೆಯದು.