ನಮ್ಮ ಆರೋಗ್ಯ ಸಮಸ್ಯೆಗಳಿಗೆ ನಿಸರ್ಗದಲ್ಲಿ ಗಿಡಮೂಲಿಕೆಗಳ ಮೂಲಕ ಔಷಧಿಗಳು ಸಿದ್ಧವಿರುತ್ತವೆ. ಆಯುರ್ವೇದ ಗಿಡಮೂಲಿಕೆಗಳ ಔಷಧಿಗಳನ್ನು ಉಪಯೋಗಿಸಿದಾಗ ಯಾವುದೇ ಅಡ್ಡ ಪರಿಣಾಮವಿಲ್ಲದೆ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಮಸಲ್ ಕ್ಯಾಚ್ ಅಂದರೆ ಕೈ-ಕಾಲು ಹಿಡಿದು ಕೊಳ್ಳುವುದನ್ನು ನಾವೆಲ್ಲರೂ ಅನುಭವಿಸುತ್ತೇವೆ. ಈ ಸಮಸ್ಯೆಗೆ ನಿಸರ್ಗದತ್ತವಾದ ಮನೆಮದ್ದು ಹೇಗೆ ಮಾಡಿಕೊಳ್ಳುವುದು ಮತ್ತು ಅದನ್ನು ಬಳಸುವ ವಿಧಾನ ಹೇಗೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.
ಸಾಮಾನ್ಯವಾಗಿ ಬಹಳಷ್ಟು ಜನರಿಗೆ ಕೈಕಾಲು ಹಿಡಿದುಕೊಳ್ಳುತ್ತದೆ ಇದನ್ನು ಮಸಲ್ ಕ್ಯಾಚ್ ಎಂದು ಹೇಳುತ್ತಾರೆ. ಕೆಲವರಿಗೆ ಪದೇ ಪದೇ ಮಸಲ್ ಕ್ಯಾಚ್ ಆಗುತ್ತಿರುತ್ತದೆ. ಮಸಲ್ ಕ್ಯಾಚ್ ಆಗಲು ಕೆಲವು ಕಾರಣಗಳಿವೆ. ನೀರನ್ನು ಸರಿಯಾಗಿ ಕುಡಿಯದೆ ಇರುವುದರಿಂದಲೂ ಮಸಲ್ ಕ್ಯಾಚ್ ಬರುತ್ತದೆ. ಸರಿಯಾದ ರೀತಿಯಲ್ಲಿ ವ್ಯಾಯಾಮ ಮಾಡದೇ, ನಮಗೆ ಬೇಕಾದ ದಿನ ಮಾತ್ರ ಅತಿಯಾಗಿ ವ್ಯಾಯಾಮ ಮಾಡುವುದರಿಂದಲೂ ಮತ್ತು ಒಳ್ಳೆಯ ಫ್ಯಾಟ್ ನಂಶ ಇರುವ ಆಹಾರವನ್ನು ತೆಗೆದುಕೊಳ್ಳದೆ ಇರುವುದರಿಂದಲೂ ಮಸಲ್ ಕ್ಯಾಚ್ ಬರುತ್ತದೆ. ಒಳ್ಳೆಯ ಫ್ಯಾಟಿನಂಶ ಇರುವ ತುಪ್ಪ, ಬೆಣ್ಣೆ ಈ ರೀತಿಯ ಆಹಾರವನ್ನು ಸೇವಿಸಬೇಕು. ಶುದ್ಧವಾದ ಕೊಬ್ಬರಿ ಎಣ್ಣೆ ಅಥವಾ ಹರಳೆಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಮಸಲ್ ಕ್ಯಾಚ್ ಆದ ಜಾಗಕ್ಕೆ ಹಚ್ಚಿ ಬಿಸಿ ನೀರಿನ ಶಾಖ ಕೊಡುವುದರಿಂದ ಮಸಲ್ ಕ್ಯಾಚ್ ಕಡಿಮೆಯಾಗುತ್ತದೆ.
ಪ್ರಗ್ನೆನ್ಸಿ ಮಹಿಳೆಯರಲ್ಲಿ ಮಸಲ್ ಕ್ಯಾಚ್ ಹೆಚ್ಚು ಕಾಣಿಸಿಕೊಳ್ಳುತ್ತದೆ. ನಿಸರ್ಗದಲ್ಲಿ ನಮ್ಮ ಆರೋಗ್ಯ ಸಮಸ್ಯೆಗಳಿಗೆ ಔಷಧಿಗಳಿವೆ. ಆಯುರ್ವೇದ ಮೆಡಿಕಲ್ ಶಾಪ್ ಗಳಲ್ಲಿ ಬಲಮೂಲ ವಾತ ಚೂರ್ಣ ಎಂದು ಸಿಗುತ್ತದೆ. ಮಲೆನಾಡುಗಳಲ್ಲಿ ಈ ಸಸ್ಯಗಳು ಕಂಡುಬರುತ್ತದೆ. 1 ಸ್ಪೂನ್ ಬಲಮೂಲ ಚೂರ್ಣದ ಪೌಡರ್ ಗೆ ಒಂದು ಲೋಟ ಹಾಲು, 3 ಲೋಟ ನೀರನ್ನು ಹಾಕಿ ಸಣ್ಣ ಉರಿಯಲ್ಲಿ ಒಂದು ಲೋಟ ಆಗುವಷ್ಟು ಕುದಿಸಬೇಕು. ನಂತರ ಸೋಸಿ ಮಧ್ಯಾಹ್ನ 12 ಗಂಟೆಯ ಸಮಯ ಖಾಲಿ ಹೊಟ್ಟೆಯಲ್ಲಿ ಅಥವಾ ಬೆಳಗ್ಗೆ ಎದ್ದ ತಕ್ಷಣ ಕುಡಿಯಬಹುದು. ಈ ಕಷಾಯ ಕುಡಿಯುವುದರಿಂದ ಮೆದುಳಿಗೆ, ಮಾಂಸಖಂಡಕ್ಕೆ ಉಪಯುಕ್ತವಾಗುತ್ತದೆ. ಈ ಕಷಾಯವನ್ನು ಒಂದುವರೆ ತಿಂಗಳು ಕುಡಿಯಬೇಕು. ಗರ್ಭಿಣಿ ಮಹಿಳೆಯರು ತೆಗೆದುಕೊಳ್ಳಬಹುದು ಆದರೆ ಪ್ರಮಾಣ ಕಡಿಮೆ ಇರಬೇಕು. ಆಯುರ್ವೇದ ತಜ್ಞರ ಸಲಹೆ ಪಡೆದುಕೊಂಡು ಕುಡಿಯುವುದು ಒಳ್ಳೆಯದು. ವಯಸ್ಸಾದವರು ಈ ಕಷಾಯವನ್ನು ಕುಡಿಯುವುದರಿಂದ ದೇಹಕ್ಕೆ ಶಕ್ತಿ ಸಿಗುತ್ತದೆ. ನಿಸರ್ಗದತ್ತವಾದ ಇಂತಹ ಔಷಧಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ಆರೋಗ್ಯ ಸಮಸ್ಯೆಗಳನ್ನು ಗಿಡಮೂಲಿಕೆಗಳಿಂದ ಶಾಶ್ವತವಾಗಿ ದೂರ ಮಾಡಿಕೊಳ್ಳಿ.