ಮನುಷ್ಯನ ಉತ್ತಮ ಆರೋಗ್ಯಕ್ಕೆ ಸೊಪ್ಪು ತರಕಾರಿಗಳು ಹಾಗೂ ಹಣ್ಣುಗಳು ತುಂಬಾನೇ ಪ್ರಾಮುಖ್ಯತೆ ವಹಿಸುತ್ತವೆ, ಅದೇ ನಿಟ್ಟಿನಲ್ಲಿ ಈ ಸೊಪ್ಪು ಕೂಡ ದೇಹಕ್ಕೆ ಉತ್ತಮ ಆರೋಗ್ಯವನ್ನು ಕೊಡುವುದರ ಜೊತೆಗೆ ಸಾಮಾನ್ಯವಾಗಿ ಕಾಡುವಂತ ಈ ಕೆಳಗಿನ ಸಮಸ್ಯೆಗಳನು ನಿವಾರಿಸುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ. ಅಷ್ಟಕ್ಕೂ ಈ ಸೊಪ್ಪು ಯಾವುದು ಹಾಗೂ ಇದರಿಂದ ಯಾವೆಲ್ಲ ದೈಹಿಕ ಸಮಸ್ಯೆಗಳಿಗೆ ಕಡಿವಾಣ ಹಾಕಬಹುದು ಅನ್ನೋದನ್ನ ಒಮ್ಮೆ ತಿಳಿಯೋಣ.
ಈ ಸೊಪ್ಪನ್ನು ಗೋಣಿ ಸೊಪ್ಪು ಎಂಬುದಾಗಿ ಕರೆಯಲಾಗುತ್ತದೆ ಇದು ಗ್ರಾಮೀಣ ಭಾಗದ ಜನರಿಗೆ ಹೆಚ್ಚು ಪರಿಚಯವಿರುತ್ತದೆ. ಇದನ್ನು ಬಳಸಿ ಈ ವಾತ, ಪಿತ್ತ, ಕಫಗಳನ್ನು ಸಮತೋಲನದಲ್ಲಿ ಇಡಬಹುದಾಗಿದೆ, ಅಷ್ಟೇ ಅಲ್ಲದೆ ದೇಹದ ರಕ್ತವನ್ನು ಶುದ್ಧಿ ಮಾಡುವುದು. ಮೂತ್ರದಲ್ಲಿ ಕಲ್ಲು, ಅಶ್ಮರಿ ಮತ್ತು ಇತರೆ ಮೂತ್ರ ದೋಷಗಳನ್ನು ನಿವಾರಿಸುವುದರ ಜೊತೆಗೆ ಮೂಲವ್ಯಾದಿ ಸಮಸ್ಯೆಯನ್ನು ನಿಯಂತ್ರಿಸುವ ಗುಣಗಳನ್ನು ಹೊಂದಿದೆ.
ಇನ್ನು ಗೋಣಿ ಸೊಪ್ಪನ್ನು ಹೇಗೆ ಬಳಸಬಹುದು ಅನ್ನೋದನ್ನ ನೋಡುವುದಾದರೆ ಗೋಣಿ ಸೊಪ್ಪಿನೊಂದಿಗೆ ತೊಗರಿಬೇಳೆ ಇಲ್ಲವೇ ಹೆಸರುಕಾಳುಗಳನ್ನು ಬೇಯಿಸಿ ತಯಾರಿಸಿದ ಪಲ್ಯ ಅಥವಾ ಸಾರು, ಕೂಟುಗಳನ್ನು ಆಹಾರದೊಂದಿಗೆ ಸೇವಿಸುತ್ತಿದ್ದರೆ, ರಕ್ತ ಶುದ್ಧಿಯಾಗುವುದು ದೇಹದಲ್ಲಿನ ಉಷ್ಣತೆ ನಿವಾರಣೆಯಾಗುವುದು.
ಮೂತ್ರ ಸಂಬಂಧಿ ರೋಗಗಳನ್ನು ನಿಯಂತ್ರಿಸಲು ೫-೬ ಹಿಡಿ ಸೊಪ್ಪನ್ನು ಜಜ್ಜಿ ೪ ಕಪ್ಪು ನೀರಿನಲ್ಲಿ ಕಷಾಯ ಕಾಯಿಸಿ ಒಂದು ಕಪ್ಪಿಗೆ ಹಾಕಿಕೊಂಡು ಒಂದಿಷ್ಟು ಜೇನು ಅಥವಾ ಸಕ್ಕರೆ ಬೇರೆಯಿಸಿ ಬೆಳೆಗ್ಗೆನೇ ಕುಡಿಯುವುದರಿಂದ ದೇಹದಲ್ಲಿನ ಉಷ್ಣತೆ ಕಮ್ಮಿಯಾಗಿ ಮೂತ್ರವು ಸರಾಗವಾಗಿ ವಿಸರ್ಜನೆಯಾಗಿ ಮೂತ್ರ ದೋಷಗಳೆಲ್ಲ ನಿವಾರಣೆಯಾಗುವುದು. ಅಷ್ಟೇ ಅಲ್ಲದೆ ಚರ್ಮ ರೋಗಗಳನ್ನು ನಿಯಂತ್ರಿಸುವ ಗೋಣಿ ಸೊಪ್ಪು ಕಜ್ಜಿ, ತೂರಿ ಮತ್ತು ಇತರೆ ಚರ್ಮ ರೋಗಗಳ ನಿವಾರಣೆ ಮಾಡಿಕೊಳ್ಳಲು ಗೋಣಿಸೊಪ್ಪುನ್ನು ಜಜ್ಜಿ ರಸ ತೆಗೆದು ಕೊಳ್ಳಬೇಕು. ಈ ರಸಕ್ಕೆ ಒಂದು ಚಮಚ ನಿಂಬೆ ರಸವನ್ನು ಮಿಶ್ರಮಾಡಿ ಕಜ್ಜಿ, ತುರಿ ಮತ್ತು ಯಾವುದೇ ಚರ್ಮ ರೋಗವಿದ್ದರೂ ಅದಕ್ಕೆ ದಪ್ಪನೆಯವಾಗಿ ಲೇಪಿಸಬೇಕು ಎರಡು ಗಂಟೆಯ ನಂತರ ಬಿಸಿ ನೀರಿನಿಂದ ತೊಳೆಯಬೇಕು.