ಕ್ಯಾರೆಟ್ ಸೇವಿಸುವುದರಿಂದ ಹಾಗೂ ಅದರ ಜ್ಯೂಸ್ ಕುಡಿಯುವುದರಿಂದ ದೇಹಕ್ಕೆ ಆಗುವ ಹಲವಾರು ಪ್ರಯೋಜನಗಳನ್ನು ಈ ಲೇಖನದ ಮೂಲಕ ತಿಳಿಯೋಣ.

ಭೂಮಿಯ ಮೇಲೆ ಬೆಳೆಯುವ ಹಣ್ಣು, ತರಕಾರಿಗಳು ಹಲವಾರು ಆರೋಗ್ಯ ಉಪಯೋಗಗಳನ್ನು ಹೊಂದಿದೆ ಅದರಲ್ಲೂ ಭೂಮಿಯ ಅಡಿಯಲ್ಲಿ ಬೆಳೆಯುವ ಆಲೂಗಡ್ಡೆ ಈರುಳ್ಳಿ ಮತ್ತಿತರ ತರಕಾರಿಗಳಲ್ಲಿ ಪೋಷಕಾಂಶ ಹೇರಳವಾಗಿ ದೊರೆಯುತ್ತದೆ. ಇವುಗಳನ್ನು ಉಪಯೋಗಿಸುವುದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅದೇ ರೀತಿ ನೆಲದ ಅಡಿಯಲ್ಲಿ ಬೆಳೆಯುವ ಕ್ಯಾರೆಟ್ ನ್ನು ಸಲಾಡ್ ಮತ್ತು ಇತರ ಪದಾರ್ಥಗಳಲ್ಲಿ ಉಪಯೋಗಿಸುತ್ತಾರೆ. ಕ್ಯಾರೆಟ್ ಜ್ಯೂಸ್ ಮಾಡಿ ಕುಡಿಯುವುದರಿಂದ ಅಪಾರ ಪ್ರಮಾಣದ ಲಾಭವಿದೆ. ಕ್ಯಾರೆಟ್ ನಲ್ಲಿ ವಿಟಮಿನ್ ಎ ಸಮೃದ್ಧವಾಗಿ ಇರುವುದರಿಂದ ಪ್ರತಿಯೊಬ್ಬರಿಗೂ ಉತ್ತಮವಾದ ಪೋಷಕಾಂಶ ನೀಡುತ್ತದೆ.

ಕ್ಯಾರೆಟ್ ನಲ್ಲಿ ಇರುವ ಬೆಟಾ ಕ್ಯಾರೋಟಿನ್ ಎನ್ನುವ ಅಂಶ ದೇಹದಲ್ಲಿ ವಿಟಮಿನ್ ಎ ಯನ್ನು‌ ಉತ್ಪತ್ತಿ ಮಾಡುತ್ತದೆ, ಇದು ಕಣ್ಣಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ಸತತ ಮೂರು ವಾರ ಕ್ಯಾರೆಟ್ ಜ್ಯೂಸ್ ಕುಡಿಯುವುದರಿಂದ ಪ್ಲಾಸ್ಮಾ ಕ್ಯಾರೋಟೈನ್ ಹೆಚ್ಚಾಗಿ ಆಕ್ಸಿಡೇಟಿವ್ ಟೆನ್ಷನ್ ಕಡಿಮೆಯಾಗುತ್ತದೆ. ಕ್ಯಾರೆಟ್ ಜ್ಯೂಸ್ ಕುಡಿಯುವುದರಿಂದ ಪ್ರತಿ ಹೃದಯ ಬಡಿತದಿಂದ ಉಂಟಾಗುವ ಒತ್ತಡ ಕಡಿಮೆಯಾಗುತ್ತದೆ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ. ಅಲ್ಲದೇ ಕ್ಯಾರೆಟ್ ನಲ್ಲಿ ಆಂಟಿ ಆಕ್ಸಿಡೆಂಟ್ ಹಾಗೂ ಪೊಟ್ಯಾಷಿಯಂ ಇರುವುದರಿಂದ ಕೋಶಗಳ ಪುನರುತ್ಪತ್ತಿ ಮಾಡಿ ಚರ್ಮ ಮತ್ತು ಕೂದಲು ನೈಸರ್ಗಿಕ ಕಾಂತಿ ಪಡೆಯಲು ಸಹಾಯವಾಗುತ್ತದೆ. ಕ್ಯಾರೆಟ್ ಜ್ಯೂಸ್ ನಲ್ಲಿ ಕಡಿಮೆ ಕ್ಯಾಲೋರಿ ಇದ್ದು, ಅದರಲ್ಲಿರುವ ಸಕ್ಕರೆಯಲ್ಲಿ ಪ್ರಮುಖ ಪೋಷಕಾಂಶ, ಖನಿಜಾಂಶಗಳು ಇರುವುದರಿಂದ ಸಕ್ಕರೆ ಅಂಶ ನಿಯಂತ್ರಿಸಿ ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ. ಕ್ಯಾರೆಟ್ ಸೇವಿಸಿ ಆರೋಗ್ಯವಾಗಿರಿ. ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ.

Leave a Reply

Your email address will not be published. Required fields are marked *