ಸಾಮಾನ್ಯವಾಗಿ ಎಲ್ಲರನ್ನು ಕಾಡುವ ತಲೆನೋವು ಬರಲು ಕಾರಣವೇನು ಅದಕ್ಕೆ ಪರಿಹಾರವೇನು ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ.
ತಲೆನೋವು ಸಾಮಾನ್ಯವಾಗಿ ಕಾಣಿಸುವ ಮೆಡಿಕಲ್ ಕಂಡಿಷನ್. ಇದು ನಾವು ಮಾಡುವ ಕೆಲವು ತಪ್ಪುಗಳಿಂದಲೂ ಬರುತ್ತದೆ ಕೆಲವು ಖಾಯಿಲೆಯಿಂದಲೂ ಬರುತ್ತದೆ. ಡಾಕ್ಟರ್ಸ್ ತಲೆನೋವನ್ನು ಎರಡು ರೀತಿಯಲ್ಲಿ ನೋಡುತ್ತಾರೆ ಪ್ರೈಮರಿ ಹೆಡ್ಡೇಕ್, ಸೆಕೆಂಡರಿ ಹೆಡ್ಡೇಕ್ ಎಂದು. ಪ್ರೈಮರಿ ಹೆಡ್ಡೇಕ್ ಎಂದರೆ ನಾವು ಮಾಡುವ ತಪ್ಪುಗಳಿಂದ ಬರುವುದು ಇದನ್ನು ಮೈಗ್ರೇನ್ ತಲೆನೋವು ಎಂದು ಕರೆಯುತ್ತಾರೆ. ಸೆಕೆಂಡರಿ ಹೆಡ್ಡೇಕ್ ಎಂದರೆ ನಮಗೆ ಇರುವ ಖಾಯಿಲೆಗಳಿಂದ ಬರುವ ತಲೆನೋವು. ಉದಾಹರಣೆಗೆ ಬಿಪಿ ಜಾಸ್ತಿ ಇದ್ದರೆ ತಲೆನೋವು ಬರುತ್ತದೆ. ಕಿವಿನೋವಿನಿಂದ, ಹಲ್ಲು ನೋವಿನಿಂದ, ಜ್ವರದಿಂದ ತಲೆನೋವು ಬರುತ್ತದೆ. ಪ್ರೈಮರಿ ತಲೆನೋವು ಇದು ಬಹಳ ಜನಕ್ಕೆ ತಲೆಯ ಒಂದು ಭಾಗಕ್ಕೆ ಬರುತ್ತದೆ, ಕೆಲವರಿಗೆ ಎರಡು ಕಡೆ ನೋವು ಬರುತ್ತದೆ. ಈ ರೀತಿಯ ಮೈಗ್ರೇನ್ ಇದ್ದವರು ಬೆಳಕನ್ನು ನೋಡಿದರೆ, ಹೆಚ್ಚು ಶಬ್ಧ ಕೇಳಿದರೆ ಕಿರಿ ಕಿರಿಯಾಗುತ್ತದೆ. ಕೆಲವರಿಗೆ ವಮಿಟ್ಟ ಆಗುತ್ತದೆ. ದಿನನಿತ್ಯದ ಊಟದ ಸಮಯ ಮೀರಿ ಊಟ ಮಾಡಿದರೆ, ರಾತ್ರಿ ಸರಿಯಾಗಿ ನಿದ್ರೆ ಬರದೆ ಇದ್ದರೆ ತಲೆ ನೋವು ಬರುತ್ತದೆ. ರಾತ್ರಿ ಮೊಬೈಲ್ ಹೆಚ್ಚು ಬಳಸುವುದರಿಂದ ನಿದ್ರೆ ಬರುವುದಿಲ್ಲ. ಇದಕ್ಕೆ ಪರಿಹಾರವೆಂದರೆ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಬೇಕು.
ಕೆಲವರಿಗೆ ವಾಸನೆಯಿಂದ, ಕಲರಫುಲ್ ಆಹಾರವನ್ನು ತಿನ್ನುವುದರಿಂದ, ಕೋಪ ಜಾಸ್ತಿಯಾದರೆ, ಟೆನ್ಷನ್ ಜಾಸ್ತಿಯಾದರೆ, ಕೆಲಸದ ಒತ್ತಡದಿಂದಾಗಿ ತಲೆ ನೋವು ಬರುತ್ತದೆ. ತಲೆನೋವು ಬೇರೆ ಬೇರೆ ರೀತಿಯಲ್ಲಿ, ಬೇರೆ ಬೇರೆ ಕಾರಣಗಳಿಂದ ಬರುತ್ತದೆ. ತಲೆನೋವು ಬರಲು ಕಾರಣವನ್ನು ತಿಳಿದು ಅದಕ್ಕೆ ತಕ್ಕಂತೆ ಪರಿಹಾರ ಮಾಡಿಕೊಳ್ಳಬೇಕು. ಕೆಲವೊಂದು ಸಲ ಕಾರಣ ಇಲ್ಲದೆಯೂ ಬರುತ್ತದೆ. ಮೈಗ್ರೇನ್ ತಲೆನೋವು ಕೆಲವರಿಗೆ ವಾರಕ್ಕೆ 2-3 ಬಾರಿ, ತಿಂಗಳಿಗೆ 2-3 ಬಾರಿ ಬರುತ್ತದೆ. ಕೆಲವರಿಗೆ ಮಾತ್ರೆಯನ್ನು ನುಂಗಿದರೆ ಆರಾಮಾಗುತ್ತದೆ. ಕೆಲವರಿಗೆ 5-6 ಗಂಟೆ ನಂತರ ವಾಸಿಯಾಗುತ್ತದೆ. ತಲೆನೋವಿನ ತೀವ್ರತೆ ಹೆಚ್ಚಾಗಿ ಇದ್ದರೆ ಡಾಕ್ಟರ್ ಹತ್ತಿರ ಹೋಗಬೇಕು. ಮದ್ಯಪಾನ ಮಾಡುವುದರಿಂದ ತಲೆನೋವಿಗಿಂತ ಹೆಚ್ಚಿನ ನೋವು ಕಾಣುತ್ತದೆ. ದೇಹದಲ್ಲಿ ನೀರು ಕಡಿಮೆಯಾದಾಗ ಈ ರೀತಿ ಆಗುತ್ತದೆ. ದೇಹದಲ್ಲಿರುವ ವಿಷ ಪದಾರ್ಥಗಳನ್ನು ಕ್ಲೀನ್ ಮಾಡುವ ಕೆಲಸವನ್ನು ಲಿವರ್ ಮಾಡುತ್ತದೆ ಇದಕ್ಕೆ ನೀರು ಬೇಕು ಆಗ ಲಿವರ್ ಮೆದುಳಿನಿಂದ ನೀರನ್ನು ಸೆಳೆಯುತ್ತದೆ ನೀರಿಲ್ಲದ ಮೆದುಳು ಒತ್ತಡಕ್ಕೆ ಒಳಗಾಗುತ್ತದೆ. ಆಗ ತೀವ್ರವಾದ ತಲೆನೋವು ಬರುತ್ತದೆ. ಇದನ್ನು ಹ್ಯಾಂಗೋವರ್ ಎಂದು ಕರೆಯುತ್ತಾರೆ. ಇದಕ್ಕೆ ಪರಿಹಾರವೆಂದರೆ ಮದ್ಯಪಾನ ಬಿಡಬೇಕು.