ಮೈಗ್ರೇನ್ ಅಂದರೆ ಅರೆತಲೆನೋವು.ಇದು ಬಂದರೆ ಸಾಕು ಇಂತಹ ನೋವು ಬೇಡಪ್ಪ ತಂದೆ ಎಂದು ಕೈಮುಗಿಯುವವರು ಹೆಚ್ಚು. ಇದು ಹೆಚ್ಚಾಗಿ ಮಹಿಳೆಯರಲ್ಲಿ ಕಂಡು ಬರುತ್ತದೆ.ಮೈಗ್ರೇನ್ ಬಂದರೆ ಹೆಚ್ಚಾಗಿ ಜನರು ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಮತ್ತೆ ಬಂದಾಗ ಮತ್ತೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ನಾವು ಇಲ್ಲಿ ಮೈಗ್ರೇನ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಮೈಗ್ರೇನ್ ಕೆಲವರಿಗೆ ಎಡಪಕ್ಕದಲ್ಲಿ ತಲೆನೋವು ಬರುತ್ತದೆ. ಕೆಲವರಿಗೆ ಬಲಪಕ್ಕದಲ್ಲಿ ತಲೆನೋವು ಬರುತ್ತದೆ.ಕೆಲವರಿಗೆ ಇಡೀ ತಲೆನೋವು ಬರುತ್ತದೆ.ಇದು ವಾತ ಮತ್ತು ಪಿತ್ತದೋಷದಿಂದ ಆಗುತ್ತದೆ. ಮಹಿಳೆಯರಿಗೆ ಒಟ್ಟು ಜಾಸ್ತಿ. ಹಾಗಾಗಿ ಮಹಿಳೆಯರಲ್ಲಿ ಹೆಚ್ಚಾಗಿ ಇದು ಕಂಡುಬರುತ್ತದೆ. ಮಲಬದ್ಧತೆಯಿಂದ ಕೂಡ ಇದು ಉಂಟಾಗುತ್ತದೆ. ಗ್ಯಾಸ್ಟ್ರಿಕ್, ಎಸ್ ಎಸ್ ಡಿ ಟಿ,ನಿದ್ರಾಹೀನತೆ ಇವೆಲ್ಲವುಗಳಿಂದ ಕೂಡ ಮೈಗ್ರೇನ್ ಬರುತ್ತದೆ.ಬಿಸಿಲಿಗೆ ಹೆಚ್ಚಾಗಿ ಹೋಗುವುದು, ನೀರು ಕಡಿಮೆ ಕುಡಿಯುವುದು,ಅತಿಯಾದ ಟಿವಿ ಮತ್ತು ಮೊಬೈಲ್ ಬಳಕೆಯಿಂದ ಕೂಡ ಉಂಟಾಗುತ್ತದೆ.
ಇನ್ನು ಇದರ ಲಕ್ಷಣಗಳು ಎಂದರೆ ಇದು 10 ದಿನಕ್ಕೊಮ್ಮೆ,ವಾರಕ್ಕೆ 4 ಬಾರಿ ಮತ್ತು ವರ್ಷಕ್ಕೆ 2 ಬಾರಿ ಬೇಕಾದರೂ ಬರಬಹುದು.ಇದು ಬರುವ ಮೊದಲು ಕತ್ತಿನಲ್ಲಿ ಶರಿಕೆ, ಅಜೀರ್ಣದ ಸಮಸ್ಯೆ, ಮಲಬದ್ಧತೆ ಸಮಸ್ಯೆ ಮತ್ತು ಅತಿಯಾದ ಕೋಪಕ್ಕೆ ಒಳಗಾಗುವುದು ಇವೆಲ್ಲ ಲಕ್ಷಣಗಳನ್ನು ತೋರಿಸುತ್ತದೆ.ಹಾಗೆಯೇ ಇದರ ಜೊತೆ ವಾಂತಿ ಕೂಡ ಉಂಟಾಗುತ್ತದೆ.
ಇದರ ಪರಿಹಾರದ ಬಗ್ಗೆ ಹೇಳುವುದಾದರೆ ಮೈಗ್ರೇನ್ ನಿಂದ ಬಳಲುತ್ತಿರುವವರು ದಿನನಿತ್ಯ ವ್ಯಾಯಾಮ ಮತ್ತು ಯೋಗಾಸನಗಳನ್ನು ಮಾಡಬೇಕು.ಮನಸನ್ನು ಬಹಳ ಶಾಂತಿಯಿಂದ ಇಟ್ಟುಕೊಳ್ಳಬೇಕು.ದಿನಕ್ಕೆ ಮೂರರಿಂದ ನಾಲ್ಕು ಲೀಟರ್ ನಷ್ಟು ನೀರು ಕುಡಿಯಬೇಕು.ಕಾಲಕ್ರಮೇಣವಾಗಿ ಆಹಾರ ಸೇವನೆ ಮಾಡಬೇಕು.ಹೆಚ್ಚಾಗಿ ಮಹಿಳೆಯರು ಉಪವಾಸ ಮಾಡಲೇಬಾರದು. ಜೀರ್ಣಕ್ರಿಯೆ ಚೆನ್ನಾಗಿ ಇರುವಂತೆ ನೋಡಿಕೊಳ್ಳಬೇಕು.
ಟೀ ಮತ್ತು ಕಾಫಿ ಸೇವನೆ ಕಡಿಮೆ ಮಾಡಿದರೆ ಒಳ್ಳೆಯದು.ಹೆಚ್ಚಾಗಿ ಹಣ್ಣು ಸೆವಿಸಬೇಕು ಅದರಲ್ಲಿ ಸೇಬು, ದಾಳಿಂಬೆ ಸೇವಿಸಬೇಕು. ರಾತ್ರಿ ಲೇಟಾಗಿ ಮಲಗುವುದನ್ನು ಮಾಡಬಾರದು.ಹಾಗೆಯೇ ಬೆಳಗ್ಗೆ ಲೇಟಾಗಿ ಕೂಡ ಏಳಬಾರದು. ಹುಳಿ ಪದಾರ್ಥಗಳ ಸೇವನೆ ಕಡಿಮೆ ಮಾಡಬೇಕು. ಮನೆಯಲ್ಲಿ ಇರುವ ಪದಾರ್ಥಗಳನ್ನು ಬಳಸಿ ಈ ಕಷಾಯವನ್ನು ಮಾಡಿ ಕುಡಿಯುವುದರಿಂದ ಮೈಗ್ರೇನ್ ಕಡಿಮೆ ಆಗುತ್ತದೆ.
ಮೊದಲು ಒಂದು ಲೋಟ ನೀರು ಹಾಕಿ ನಂತರ ಚಿಕ್ಕ ಚೂರು ಮಾಡಿದ ಶುಂಠಿ,ಅದಕ್ಕೆ ಪುದಿನಾ,ತುಳಸೀ,ಜೀರಿಗೆ ಮತ್ತು ಕೊನೆಯದಾಗಿ ಕೊತ್ತಂಬರಿ ಬೀಜದ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಬೇಕು. ನಂತರ ಅದು ಅರ್ಧ ಲೋಟ ಆದ ಮೇಲೆ ಸ್ವಲ್ಪ ಬೆಚ್ಚಗೆ ಇರುವಾಗ ಅರ್ಧ ಚಮಚ ಜೇನುತುಪ್ಪ ಹಾಕಿ ಕುಡಿಯಬೇಕು.