ಕೆಮ್ಮು ಕಫ ನಿವಾರಣೆಗೆ ಈ ಸುಲಭ ಕಷಾಯ ಮಾಡಿ ಒಳ್ಳೇದು

0 2

ಮನುಷ್ಯ ವರ್ಷದ 365 ದಿನಗಳ ಕಾಲವೂ ಕೂಡ ಆರೋಗ್ಯವಾಗಿರುವುದು ಬಹಳ ಕಡಿಮೆ.ಏನಾದರೂ ಸಣ್ಣಪುಟ್ಟ ಪರಿಣಾಮಗಳು ಆಗುತ್ತಿರುತ್ತವೆ. ಅದರಲ್ಲಿ ನೆಗಡಿ,ಕೆಮ್ಮು, ಕಫಗಳು ಸಹಜ ಆಗಿವೆ. ಅವು ಎಲ್ಲರಿಗೂ ಆಗುವುದಿಲ್ಲ. ಆದರೆ ಕೆಲವೊಬ್ಬರಿಗೆ ಕಡಿಮೆಯೇ ಆಗುವುದಿಲ್ಲ. ಇವುಗಳಿಂದ ಮುಕ್ತಿ ಹೊಂದುವ ಬಗ್ಗೆ ಮಾಹಿತಿಯನ್ನು ನಾವು ಇಲ್ಲಿ ನೋಡೋಣ.

ಕೆಲವರಿಗೆ ನೆಗಡಿ, ಕಫ,ಗಂಟಲು ಕೆರೆತ, ಕೆಮ್ಮು ಉಂಟಾಗುತ್ತದೆ. ಆದರೆ ಕೆಲವರು ದುಡ್ಡು ಕೊಟ್ಟು ಮಾತ್ರೆಯನ್ನು ತೆಗೆದುಕೊಳ್ಳುತ್ತಾರೆ. ಕೆಲವರು ಮಾತ್ರೆಯನ್ನು ತೆಗೆದುಕೊಳ್ಳುವುದಿಲ್ಲ ಮನೆಮದ್ದುಗಳನ್ನೇ ಮಾಡುತ್ತಿರುತ್ತಾರೆ.ಆದರೂ ಕಡಿಮೆ ಆಗುವುದಿಲ್ಲ. ಇಂತಹವರು ಈ ರೀತಿಯ ಕಷಾಯವನ್ನು ಮಾಡಿ ಕುಡಿಯುವುದರಿಂದ ಅವೆಲ್ಲವುಗಳಿಂದ ಮುಕ್ತಿ ಪಡೆಯಬಹುದು. ಇದನ್ನು 2 ರಿಂದ 3ದಿನ ಮಾಡಿ ಕುಡಿದರೆ ಸಾಕು ಎಲ್ಲವೂ ದೂರವಾಗುತ್ತವೆ.

ಈ ಕಷಾಯವನ್ನು ಮನೆಯಲ್ಲಿ ಅಡುಗೆ ಮನೆಯಲ್ಲಿ ಸಿಗುವ ಪದಾರ್ಥಗಳಿಂದ ತಯಾರಿಸಬಹುದು.ಮೊದಲು ಒಂದು ಚಮಚ ಅರಿಶಿಣವನ್ನು ತೆಗೆದುಕೊಳ್ಳಬೇಕು.ನಂತರ ಶುಂಠಿಯನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿಕೊಳ್ಳಬೇಕು.ನಂತರ ಒಂದು ಮುಷ್ಟಿಯಷ್ಟು ಬೆಲ್ಲವನ್ನು ತೆಗೆದುಕೊಳ್ಳಬೇಕು. ನಂತರ 7 ರಿಂದ 8 ತುಳಸೀ ಎಲೆಗಳನ್ನು ತೆಗೆದುಕೊಳ್ಳಬೇಕು.ಅರ್ಧ ಕಡಿ ಲಿಂಬೆಯನ್ನು ತೆಗೆದುಕೊಳ್ಳಬೇಕು.ನಂತರ ದನಿಯಾ, ಜೀರಿಗೆ,ಕಾಳುಮೆಣಸು, ಲವಂಗ, ಚಕ್ಕೆ, ಯಾಲಕ್ಕಿ ಇವೆಲ್ಲವನ್ನೂ ಸಮ ಪ್ರಮಾಣದಲ್ಲಿ ಸೇರಿಸಿ ಕಷಾಯದ ಪುಡಿಮಾಡಿಕೊಳ್ಳಬೇಕು.

ನಂತರ ಒಂದು ಪಾತ್ರೆಗೆ 2 ಲೋಟ ನೀರನ್ನು ಹಾಕಿ ಅದಕ್ಕೆ ಶುಂಠಿ,ಅರಿಶಿಣ,ಕಷಾಯದ ಪುಡಿ 1 ಚಮಚ,ಬೆಲ್ಲ,ತುಳಸೀ ಎಲ್ಲವನ್ನೂ ಹಾಕಿ ಚೆನ್ನಾಗಿ ಕುದಿಸಬೇಕು. ಎರಡು ಲೋಟ ನೀರು ಒಂದು ಲೋಟ ನೀರು ಆಗುವವರೆಗೂ ಕುದಿಸಬೇಕು.ಚೆನ್ನಾಗಿ ಕುದಿಯುವಾಗ ಲಿಂಬೆಹಣ್ಣನ್ನು ಹಿಂಡಬೇಕು.ಇದನ್ನು ರಾತ್ರಿ ಮಲಗುವಾಗ 2 ರಿಂದ 3 ದಿನ ಕುಡಿದರೆ ಸಾಕು ನೆಗಡಿ,ಕಫ,ಕೆಮ್ಮು ಕಡಿಮೆ ಆಗುತ್ತದೆ.

Leave A Reply

Your email address will not be published.