ಇವತ್ತಿನ ಈ ಲೆಖನದ ಮೂಲಕ ನಾವು ಸಾಮಾನ್ಯವಾಗಿ ನಮ್ಮೆಲ್ಲರನ್ನೂ ಕಾಡುತ್ತಿರುವ ಪೂರ್ಣ ತಲೆನೋವು ಮತ್ತು ಅರ್ಧತಲೆ ನೋವು ಇವುಗಳಿಗೆ ಮನೆಮದ್ದು ಏನು ಅನ್ನೋದರ ಬಗ್ಗೆ ತಿಳಿದುಕೊಳ್ಳೋಣ.
ಈ ಮನೆಮದ್ದನ್ನು ಮಾಡುವುದರಿಂದ ಪೂರ್ತಿಯಾಗಿ ಕಡಿಮೆ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಕೆಲವರಿಗೆ ಪೂರ್ತಿ ತಲೆ ನೋವು ಇರತ್ತೆ ಇನ್ನು ಕೆಲವರಿಗೆ ಅರ್ಧ ತಲೆ ನೋವು ತಲೆಯ ಯಾವುದೋ ಒಂದು ಭಾಗಕ್ಕೆ ಮಾತ್ರ ನೋವು ಇದ್ದಿರತ್ತೆ. ಒಮ್ಮೆ ಈ ರೀತಿ ತಲೆನೋವು ಆರಂಭ ಆದರೆ ಮತ್ತೆ ಮತ್ತೆ ಬರುತ್ತಲೇ ಇರುತ್ತದೇ. ಇದಕ್ಕಾಗಿ ನಾವು ಎಷ್ಟೋ ಮಾತ್ರೆಗಳನ್ನು ತೆಗೆದುಕೊಳ್ಳುತ್ತೇವೆ. ಆದರೆ ಪ್ರತೀ ಭಾರಿ ತಲೆನೋವಿಗೆ ಮಾತ್ರೆ ತೆಗೆದುಕೊಳ್ಳುವುದು ಅಷ್ಟು ಒಳ್ಳೆಯದೇನು ಅಲ್ಲ.
ಹಾಗಾಗಿ ಸುಲಭವಾಗಿ ಔಡಲ ಎಲೆಗಳನ್ನು ಬಳಸಿಕೊಂಡು ಹೇಗೆ ತಲೆನೋವುಗೆ ಉಪಚಾರ ಮಾಡಿಕೊಳ್ಳೋದು ಅನ್ನೋದನ್ನ ನೋಡೋಣ. ಔಡಲ ಸಸ್ಯ ಇದು ಒಂದು ಔಷಧೀಯ ಸಸ್ಯವೇ. ಇದರ ಎಲೆಗಳು ನೋಡೋದಕ್ಕೆ ಸ್ವಲ್ಪ ಪಪ್ಪಾಯ ಎಲೆಗಳಂತೆಯೇ ಕಂಡುಬರುತ್ತದೆ. ಈ ಸಸ್ಯ ಹಳ್ಳಿ ಕಡೆಗಳಲ್ಲಿ ಬಹಳಷ್ಟು ಕಾಣಸಿಗುತ್ತವೆ. ಇದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಔಷಧೀಯ ಗುಣಗಳನ್ನು ಹೊಂದಿದೆ. ತಲೆನೋವು ಹೋಗಲಾಡಿಸೋಕೆ ಇದು ಹೇಗೆ ಸಹಾಯಾಕಾರಿ ಆಗಿದೆ ಅನ್ನೋದನ್ನ ನೋಡೋಣ.
ಔಡಲ ಎಲೆಗಳನ್ನು ಕತ್ತರಿಸಿ ತಂದು ಸ್ವಚ್ಛ ಮಾಡಿ ಇಟ್ಟುಕೊಳ್ಳಬೇಕು. ನಂತರ ಒಂದು ಬೌಲ್ ಗೆ ಒಂದು ಸ್ಪೂನ್ ತೆಂಗಿನ ಎಣ್ಣೆ ಅದೇ ಸಮ ಪ್ರಮಾಣದಲ್ಲಿ ಎಳ್ಳೆಣ್ಣೆ ಎರಡನ್ನೂ ತೆಗೆದುಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ರಾತ್ರಿ ಮಲಗುವ ಮೊದಲು ಇದನ್ನ ತಲೆಗೆ ಸರಿಯಾಗಿ ಹಚ್ಚಿ ಮಸಾಜ್ ಮಾಡಿ ನಂತರ ಔಡಲ ಎಲೆಯನ್ನ ಅದರ ತೊಟ್ಟು ಮೇಲೆ ಬರುವ ರೀತಿಯಲ್ಲಿ ಸುತ್ತಲೂ ತಲೆಯ ಮೇಲೆ ಇಟ್ಟು ನಂತರ ಒಂದು ಕಾಟನ್ ಬಟ್ಟೆಯಿಂದ ಸರಿಯಾಗಿ ಎಲೆಯ ಸಮೇತ ಕಟ್ಟಬೇಕು (ನಮ್ಮ ಪೂರ್ತಿ ತಲೆ ಮುಚ್ಚಲು ಸಾಮಾನ್ಯವಾಗಿ 3 ಎಲೆಗಳು ಸಾಕು)
ಹೀಗೆ ಎಲೆಯನ್ನು ರಾತ್ರಿ ಕಟ್ಟಿದಾಗ ಅದು ಬೆಳಗೆ ಆಗುವಷ್ಟರಲ್ಲಿ ಎಲೆ ಪೂರ್ತಿಯಾಗಿ ಕಪ್ಪು ಬಣ್ಣ ಆಗಿರುತ್ತದೆ. ಈ ರೀತಿಯಾಗಿ ಸತತವಾಗಿ 3 ದಿನಗಳ ಮಾಡಬೇಕಾಗುತ್ತದೆ. ಇದನ್ನ ಹೀಗೆ ಮಾಡುವುದರಿಂದ ಎಷ್ಟೇ ಹಳೆಯ ತಲೇನೋವು, ಅರ್ಧ ತಲೆನೋವು ಇದ್ದರೂ ಸಹ ಪೂರ್ತಿಯಾಗಿ ಗುಣಮುಖ ಹೊಂದಬಹುದು. ಮೂರು ದಿನಗಳ ಕಾಲ ಹೀಗೆ ಮಾಡಿಮೊಂಡು ಬೆಳಗ್ಗೆ ಎದ್ದ ನಂತರ ಸ್ವಚ್ಛವಾಗಿ ತಲೆಯನ್ನು ತೊಳೆದುಕೊಳ್ಳಬೇಕು. ಕೆಲವರಿಗೆ ದೇಹದಲ್ಲಿ ಉಷ್ಣ ಜಾಸ್ತಿ ಆಗಿಯೂ ಸಹ ಯಾವಾಗಲೂ ತಲೆ ನೋವು ಬರುತ್ತಲೇ ಇರುತ್ತದೇ. ಅಂತವರಿಗಳ ಉತ್ತಮ ಪರಿಹಾರ. ನಿಮ್ಮ ಮನೆಯ ಬಳಿ ಎಲ್ಲಿಯಾದರೂ ಔಡಲ ಗಿಡ ಇದ್ದರೆ ತಲೆನೋವಿಗೆ ಇದನ್ನ ಮಾಡಬಹುದು.