ಎರಡನೇ ಮಗುವಿನ ತಂದೆಯಾಗಲಿರುವ ಖುಷಿಯಲ್ಲಿದ್ದಾರೆ ಬಿಗ್ ಬಾಸ್ ಖ್ಯಾತಿಯ ಹರೀಶ್ ರಾಜ್. ಅವರ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಕನ್ನಡ ಬಿಗ್ ಬಾಸ್ ಸೀಸನ್ 7 ನೇ ಸ್ಪರ್ಧಿ, ನಟ ಹರೀಶ್ ರಾಜ್ ಅವರು ಜನರ ಮನಸ್ಸನ್ನು ಗೆದ್ದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿದ್ದಾಗ ಕನ್ನಡಿಗರಿಗೆ ಅವರ ಬಹುಮುಖ ಪ್ರತಿಭೆಯ ಬಗ್ಗೆ ತಿಳಿಯಿತು. ಈಗ ಅವರು ಮಜಾ ಭಾರತದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ ಅಲ್ಲದೇ ಅವರು ಎರಡನೇ ಬಾರಿಗೆ ತಂದೆಯಾಗುತ್ತಿರುವ ಖುಷಿಯಲ್ಲಿದ್ದಾರೆ. ಈ ಬಗ್ಗೆ ಅವರೇ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. ಮ್ಯಾಟ್ರಿಮೋನಿಯಲ್ ಜಾಲತಾಣದ ಮೂಲಕ ಪರಿಚಯವಾದ ಶ್ರುತಿ ಲೋಕೇಶ್ ಅವರನ್ನು 2014 ರಲ್ಲಿ ಬೆಂಗಳೂರಿನಲ್ಲಿ ಮದುವೆಯಾದರು.

1996ರಲ್ಲಿ ‘ಹಳೆ ಬೇರು ಹೊಸ ಚಿಗುರು’ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟ ಹರೀಶ್ ರಾಜ್ ಅವರು ‘ಹೊಂಗನಸು’, ಬನದ ನೆರಳು, ತನನಂ ತನನಂ, ಮೌನಿ, ಕುರಿಗಳು ಸರ್ ಕುರಿಗಳು, ಕಾವ್ಯಾಂಜಲಿ ಧಾರಾವಾಹಿಗಳಲ್ಲಿ ಅವರು ನಟಿಸಿದ್ದಾರೆ. ಎಂಎಸ್ಸಿ ಪದವೀಧರೆ ಆಗಿರುವ ಶ್ರುತಿ ಹಾಗೂ ಹರೀಶ್ ರಾಜ್ ಅವರಿಗೆ ಈಗಾಗಲೇ ಓರ್ವ ಮಗಳಿದ್ದಾಳೆ ಈಗ ಎರಡನೇ ಮಗುವಿನ ಬರುವಿಕೆಗೆ ಕಾಯುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪತ್ನಿ ಹಾಗೂ ಮಗಳ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ, ‘ನನ್ನ ಕುಟುಂಬ ದೊಡ್ಡದಾಗುತ್ತಿದೆ, ನಿಮ್ಮೆಲ್ಲರ ಹಾರೈಕೆ, ಶುಭಾಶಯ ಬೇಕಿದೆ. ನಾವು ಎರಡನೇ ಮಗುವನ್ನು ಸ್ವಾಗತಿಸುತ್ತಿದ್ದೇವೆ’ ಎಂದು ಹರೀಶ್ ರಾಜ್ ಅವರು ಹೇಳಿದ್ದಾರೆ. ಅವರ ಜೀವನ ಸುಖಮಯವಾಗಿರಲಿ ಎಂದು ಹಾರೈಸೋಣ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!