ಹಿಂದೂ ಧರ್ಮಗ್ರಂಥಗಳಲ್ಲೊಂದಾದ ರಾಮಾಯಣದಲ್ಲಿನ ಪ್ರಮುಖ ಪಾತ್ರಗಳಲ್ಲೊಬ್ಬ ಹಾಗೂ ಹಿಂದು ದೇವತೆಗಳಲ್ಲಿ ಒಬ್ಬ ಹನುಮಂತ. ವಾಯುಪುತ್ರ, ಕಪಿವೀರನೆಂದು ಕರೆಯಲ್ಪಡುವ ಹನುಮಂತ ಕೇಸರಿ ಎಂಬ ವಾನರ ಮತ್ತು ಅಂಜನಾದೇವಿಯ ಮಗ ಮತ್ತು ರಾಮನ ಪರಮಭಕ್ತ. ಶಕ್ತಿಯ ದೇವತೆಯೆಂದು ಹನುಮಂತನನ್ನು ಪೂಜಿಸಲಾಗುತ್ತದೆ.

ಹನುಮಂತ ಕಿಷ್ಕಿಂಧೆಯಲ್ಲಿ ಸುಗ್ರೀವನ ಜೊತೆಯಲ್ಲಿರುತ್ತಾನೆ. ಸೀತೆಯನ್ನು ಹುಡುಕಿಕೊಂಡು ರಾಮ ಕಿಷ್ಕಿಂಧೆಗೆ ಬಂದಾಗ ಹನುಮಂತನಿಗೆ ರಾಮನೊಡನೆ ಭೇಟಿಯಾಗುತ್ತದೆ. ತನ್ನ ಸ್ವಾಮಿಯಾದ ರಾಮನಿಗೆ ಸಹಾಯ ಮಾಡಲು ಮುಂದಾಗುತ್ತಾನೆ. ನೂರು ಯೋಜನ ವಿಸ್ತಾರದ ಮಹಾ ಸಮುದ್ರವನ್ನು ಹಾರಿ ಸೀತೆಯು ಲಂಕೆಯಲ್ಲಿರುವ ವಿಷಯವನ್ನು ರಾಮನಿಗೆ ತಿಳಿಸುತ್ತಾನೆ. ಮುಂದೆ ರಾವಣನ ಜೊತೆ ಯುದ್ಧ ಮಾಡಿ, ಸೀತೆಯನ್ನು ಲಂಕೆಯಿಂದ ಕರೆದುಕೊಂಡು ಬರಲು ರಾಮನಿಗೆ ಹನುಮಂತ ಹಲವು ವಿಧದಲ್ಲಿ ನೆರವಾಗುತ್ತಾನೆ.ರಾಮ ಹಾಗೂ ಹನುಮಂತನ ನಡುವಿನ ಸಂಬಂಧದ ಕಾರಣವಾಗಿಯೇ ಇಲ್ಲಿ ಹನುಮನ ಮಾನಸೋಧ್ಯಾನ ಇರುವುದನ್ನು ಕಾಣಬಹುದು. ಅದು ಕೂಡ ಏಕಶಿಲೆಯಿಂದ ಕೆತ್ತಲ್ಪಟ್ಟಿದೆ. ಇಲ್ಲಿ ಆಂಜನೇಯನ ಜನನದಿಂದ ಹಿಡಿದು ಆ ಶಕ್ತಿವಂತರ ಜೀವನದ ಚರಿತ್ರೆಯನ್ನು ಶಿಲ್ಪ ಕಲೆಯ ಮೂಲಕ ಸುಂದರವಾಗಿ ವರ್ಣಿಸಲಾಗಿದೆ.

ರಾಮನು ತನ್ನ ಮೃತ್ಯುವಿನ ಸಮಯದಲ್ಲಿ ಯಮನನ್ನು ಕರೆಯುತ್ತಾನೆ. ಆದರೆ ತನ್ನ ಭಂಟ ಹನುಮಂತನು ಯಾವತ್ತೂ ಕೂಡ ಯಮನಿಗೆ ತನ್ನನ್ನು ಮುಟ್ಟಲು ಬಿಡುವುದಿಲ್ಲ ಎಂಬೂದು ರಾಮನಿಗೆ ತಿಳಿದಿತ್ತು. ಆದ್ದರಿಂದ ರಾಮನು ಉಪಾಯ ಮಾಡಿ ಹನುಮಂತನನ್ನು ಪಾತಳ ಲೋಕದಲ್ಲಿದ್ದ ತನ್ನ ಉಂಗುರವನ್ನು ತರುವಂತೆ ಹೇಳಿ ಕಳುಹಿಸಿಕೊಡುತ್ತಾನೆ. ಪಾತಾಳ ಲೋಕದಲ್ಲಿ ವಾಸುಕಿಯು ಹನುಮಂತನಿಗೆ ಉಂಗುರವನ್ನು ಹುಡುಕಲು ಸಹಕರಿಸುತ್ತದೆ.

ಸೀತೆಮಾತೆಯನ್ನ ಅಪಹರಿಸಿಕೊಂಡು ಹೋದ ಲಂಕಾಧಿಪತಿ ದಶಕಂಠ ರಾವಣ ಹಾಗೂ ಭಗವಾನ್ ಶ್ರೀರಾಮ ಸೇನೆಯ ನಡುವೆ ಭಯಂಕರವಾದ ಯುದ್ಧ ನಡೆಯುತ್ತದೆ. ರಾವಣನ ಸಹೋದರ ಕುಂಭಕರ್ಣ, ರಾವಣನ ಮಗ ಇಂದ್ರಜಿತ್ ಸೇರಿದಂತೆ ಹಲವಾರು ಮಹಾನ್ ರಾಕ್ಷಸ ಯೋಧರ ವಧೆಯಾಗಿ ಹೋಗಿರುತ್ತದೆ. ಇನ್ನು ರಾಮ ರಾವಣರ ನಡುವೆ ಯುದ್ಧ ತೀವ್ರವಾಗುತ್ತಾ ಹೋಗುತ್ತದೆ. ಇನ್ನು ತನಗೆ ನರಮನುಷ್ಯ ರಾಮನಿಂದ ಸೋಲಾಗಬಾರದು ಎಂದು ಹೆದರಿದ ರಾವಣ ಹೇಗಾದರೂ ಮಾಡಿ ರಾಮ ಲಕ್ಷ್ಮಣರ ವಧೆ ಮಾಡಿಸಬೇಕೆಂದು ಪಾತಾಳ ಲೋಕದ ಅಧಿಪತಿಯಾಗಿದ್ದ ಮಹಿರಾವಣನ ಸಹಾಯ ಪಡೆಯುತ್ತಾನೆ.

ಇದರ ಸೂಚನೆ ಸಿಕ್ಕ ಬಳಿಕ ರಾಮ ಲಕ್ಷಣರನ್ನ ಕಾಪಾಡಬೇಕೆಂದು ಹನುಮಂತನು ತನ್ನ ಬಾಲದಿಂದ ಬೃಹತ್ ಆಕಾರದ ಕೋಟೆಯನ್ನ ಕಟ್ಟುತ್ತಾನೆ. ಆದರೆ ಮಾಯಾವಿಯಾಗಿದ್ದ ಮಹಿರಾವಣ ರಾವಣನ ಸಹೋದರ ವಿಭೀಷಣನ ರೂಪದಲ್ಲಿ ಬಂದು ಶ್ರೀರಾಮ ದರ್ಶನ ಪಡೆಯಬೇಕೆಂದು ಹನುಮಂತ ಬಾಲದಿಂದ ಕಟ್ಟಿದ ಕೋಟೆಯೊಳಗಡೆ ಪ್ರವೇಶ ಮಾಡಿ ಅಲ್ಲಿಂದಲೆ ರಾಮ ಲಕ್ಷಣರನ್ನ ಅಪಹರಿಸಿ ಪಾತಾಳ ಲೋಕಕ್ಕೆ ಎತ್ತಿಕೊಂಡು ಹೋಗುತ್ತಾನೆ. ಇನ್ನು ಈ ವಿಷಯ ತನ್ನ ಗಮನಕ್ಕೆ ಬಂದ ಕೂಡಲೇ ಹನುಮಂತನು ಪಾತಾಳಕ್ಕೆ ಜಿಗಿಯುತ್ತಾನೆ. ಆ ರೀತಿ ಜಿಗಿದಾಗ ತಲೆ ಕೆಳ ಮಾಡಿ ಜಿಗಿಯುವುದರಿಂದ ಪಾತಾಳ ಲೋಕದಲ್ಲಿ ಹನುಮಂತನ ವಿಗ್ರಹ ವಿರುದ್ಧ ದಿಕ್ಕಿನಲ್ಲಿ ಅಂದರೆ ತಲೆಕೆಳಗಾದಂತಹ ಮೂರ್ತಿ ಇದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!