ಹಸ್ತದ ಪ್ರತಿ ರೇಖೆಯಲ್ಲಿ X ಗುರುತು ಇದೆಯಾ? ನಿಮ್ಮ ಬುದ್ದಿವಂತಿಕೆಗೆ ಸಾಟಿ ಯಾರು

0 8

ಹಸ್ತ ಸಾಮುದ್ರಿಕಾಶಾಸ್ತ್ರದ ಪ್ರಕಾರ ಕೈಯ ಮೇಲೆ x ಚಿಹ್ನೆ ಇದ್ದರೆ ಅವರ ಭವಿಷ್ಯ ಹೇಗಿರುತ್ತದೆ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಹಸ್ತ ಸಾಮುದ್ರಿಕೆ ಒಂದು ಕುತೂಹಲಕಾರಿ ವಿಷಯ. ಹಸ್ತದ ಪ್ರತಿ ರೇಖೆ ಹಾಗೂ ಚಿಹ್ನೆಗಳು ವ್ಯಕ್ತಿಯ ವ್ಯಕ್ತಿತ್ವವನ್ನು ಹಾಗೂ ಭವಿಷ್ಯವನ್ನು ಸೂಚಿಸುತ್ತದೆ. ಇದರಲ್ಲಿ ಉದ್ಯೋಗ, ಜೀವನ, ಮದುವೆ, ಆರೋಗ್ಯ ಮೊದಲಾದ ವಿಷಯಗಳ ಬಗ್ಗೆ ತಿಳಿಯುತ್ತದೆ. ಇದರಲ್ಲಿ ಮುಖ್ಯವಾದುದೆಂದರೆ ಎರಡು ಗೆರೆಗಳು ಕೂಡುವಲ್ಲಿ ಮೂಡುವ x ಅಕ್ಷರ. X ಅಕ್ಷರ ಕೈಯಲ್ಲಿ ಸ್ಪಷ್ಟವಾಗಿ ಗೋಚರಿಸುವ ವ್ಯಕ್ತಿಗಳು ತುಂಬಾ ಅಪರೂಪ ಆದರೆ ಈ ವ್ಯಕ್ತಿಗಳು ಜಗತ್ತನ್ನು ಬದಲಿಸುವ ವ್ಯಕ್ತಿತ್ವವುಳ್ಳವರಾಗಿದ್ದು ನಾಯಕತ್ವದ ಗುಣವನ್ನು ಹೊಂದಿರುತ್ತಾರೆ. ಇದು ಉದಾತ್ತ ನಾಯಕನ ಚಿಹ್ನೆಯಾಗಿದೆ. ಕೈಯಲ್ಲಿ x ಗುರುತು ಸ್ಪಷ್ಟವಾಗಿದ್ದರೆ ಅವರು ಸಮಾಜದಲ್ಲಿ ಗಣ್ಯ ವ್ಯಕ್ತಿಗಳಾಗುತ್ತಾರೆ. ಎರಡು ಕೈಯಲ್ಲಿ x ಗುರುತು ಸ್ಪಷ್ಟವಾಗಿದ್ದರೆ ಅವರು ಉತ್ತಮ ಸಾಧನೆಯನ್ನು ಮಾಡಿ ಪ್ರಸಿದ್ಧರಾಗುತ್ತಾರೆ.

ಒಂದು ಕೈಯಲ್ಲಿ x ಗುರುತು ಸ್ಪಷ್ಟವಾಗಿದ್ದರೆ ಅವರು ಅಪಾರವಾದ ಜ್ಞಾನ, ದೂರದರ್ಶಿತ್ವ ಹೊಂದಿರುತ್ತಾರೆ. ಇವರು ಮುಂದೆ ಎದುರಾಗಲಿರುವ ಅಪಾಯ, ಸಂಗತಿಯನ್ನು ಮೊದಲೇ ತಿಳಿಯುವ ಜ್ಞಾನ ಹೊಂದಿರುತ್ತಾರೆ ಇವರು ಬಹಳ ಜನಪ್ರಿಯರಾಗಿರುತ್ತಾರೆ. ಇವರು ಬುದ್ದಿವಂತರಾಗಿದ್ದು, ಚುರುಕಾಗಿರುತ್ತಾರೆ, ಸದಾ ಕಲಿಯುವ ಹಂಬಲ ಇವರಿಗಿರುತ್ತದೆ. ಇವರು ತಮ್ಮ ಕ್ಷೇತ್ರದಲ್ಲಿ ಅಪಾರವಾದ ಪಾಂಡಿತ್ಯವನ್ನು ಹೊಂದಿದ್ದು ಸುತ್ತ ಮುತ್ತಲಿನ ವ್ಯಕ್ತಿಗಳೊಂದಿಗೆ ಹಾಗೂ ಸಮಯಕ್ಕೆ ತಕ್ಕಂತೆ ಹೊಂದಿಕೊಳ್ಳುವ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಇವರು ತಮ್ಮ ಸುತ್ತಲಿನ ಪರಿಸರ ಹೇಗಿದ್ದರೂ ಅದಕ್ಕೆ ಹೊಂದಿಕೊಳ್ಳುತ್ತಾರೆ ಹೊರತು ಕುಂದು ಕೊರತೆಯನ್ನು ಹೇಳಿಕೊಳ್ಳುವುದಿಲ್ಲ.

Leave A Reply

Your email address will not be published.