Good Health for hair tips ನಾವಿಂದು ನಿಮಗೆ ಹೇಳುವ ಮನೆ ಮದ್ದನ್ನು ತಿಂಗಳಿಗೆ ಒಂದು ಸಾರಿ ಹಚ್ಚಿದರೆ ಸಾಕು ನಿಮ್ಮ ಕೂದಲು ಬಿಳಿ ಯಾಗುವುದಿಲ್ಲ. ಉದ್ದವಾಗುತ್ತದೆ ದಟ್ಟವಾಗಿರುತ್ತದೆ ಸಿಲ್ಕಿ ಆಗಿರುತ್ತದೆ ಯಾರಿಗೆ ಕೂದಲು ತುಂಬಾ ಉದುರುತ್ತದೆ ಅವರು ನಾವು ಹೇಳುವ ಮನೆಮದ್ದನ್ನು ಬಳಸಿದರೆ ಅದರಿಂದ ಉತ್ತಮ ಪರಿಣಾಮ ಉಂಟಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲಿ ಬಿಳಿ ಕೂದಲು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಮಕ್ಕಳಿಗೂ ಸಹ ಬಿಳಿ ಕೂದಲು ಕಾಣಿಸಿಕೊಳ್ಳುತ್ತದೆ ಅದನ್ನು ತಡೆಯುವುದಕ್ಕೆ ನಾವು ಹೇಳುವ ಮನೆಮದ್ದನ್ನು ನೀವೂ ಬಳಸಬಹುದು. ನಾವು ಹೇಳುವ ಮನೆಮದ್ದನ್ನು ತುಂಬಾ ಸರಳವಾಗಿ ಮಾಡಿಕೊಳ್ಳುಬಹುದು. ಹಾಗಾದರೆ ಈ ಮನೆಮದ್ದನ್ನು ಹೇಗೆ ತಯಾರಿಸುವುದು ಎಂಬುದನ್ನು ತಿಳಿದುಕೊಳ್ಳೋಣ.
ಈ ಮನೆಮದ್ದನ್ನು ತಯಾರಿಸುವುದು ಕರಿಬೇವಿನ ಸೊಪ್ಪಿನಿಂದ ನಾವು ಮನೆಯಲ್ಲಿ ಸಾಮಾನ್ಯವಾಗಿ ಅಡುಗೆಗೆ ಕರಿಬೇವನ್ನು ಬಳಸುತ್ತೇವೆ. ನಮ್ಮ ಕೂದಲಿನ ಆರೋಗ್ಯಕ್ಕೆ ಕರಿಬೇವು ತುಂಬಾ ಉಪಯುಕ್ತವಾಗಿದೆ ತಲೆಯಲ್ಲಿ ಒಂದು ಬಿಳಿ ಕೂದಲು ಕಾಣಿಸಿಕೊಂಡರು ಈ ಮನೆಮದ್ದನ್ನು ಬಳಸಬಹುದು ಅದೇ ರೀತಿಯಾಗಿ ತುಂಬಾ ತಲೆ ಕೂದಲು ಉದುರುತ್ತಿದ್ದರೆ ಪೋಷಕಾಂಶದ ಕೊರತೆ ನಮ್ಮ ಕೂದಲಿಗೆ ಇದೆ ಎಂದು ಅರ್ಥ. ಆಗ ತಕ್ಷಣ ಈ ಮನೆಮದ್ದನ್ನು ಮಾಡಿಕೊಳ್ಳಬೇಕು
ಕರಿಬೇವಿನ ಸೊಪ್ಪಿನಲ್ಲಿ ಕೂದಲಿಗೆ ಬೇಕಾದಂತಹ ಎಲ್ಲಾ ಪೋಷಕಾಂಶಗಳು ಇವೆ ಕರಿಬೇವಿನ ಸೊಪ್ಪಿನಲ್ಲಿ ಆಂಟಿ ಆಕ್ಸಿಡೆಂಟ್ಸ್ ಇದೆ ಇದು ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದಾಗಿದೆ ಅದಲ್ಲದೆ ಕರಿಬೇವಿನಲ್ಲಿ ಬೀಟಾ-ಕ್ಯಾರೋಟಿನ್ ಮತ್ತು ಪ್ರೋಟೀನ್ ಇದೆ. ಕೂದಲಿನ ಬೆಳವಣಿಗೆಗೆ ಬೇಕಾದ ಎಲ್ಲ ಪೋಷಕಾಂಶಗಳನ್ನು ಕರಿಬೇವು ಒದಗಿಸುತ್ತದೆ. ಇದರಿಂದ ಕೂದಲು ಉದುರುವುದು ಕಡಿಮೆಯಾಗಿ ದಟ್ಟವಾಗಿ ಸೊಂಪಾಗಿ ಬೆಳೆಯುತ್ತದೆ.
ಈ ಮನೆಮದ್ದನ್ನು ತಯಾರಿಸುವುದಕ್ಕೆ ನೀವು ಕರಿಬೇವಿನ ಎಲೆಗಳನ್ನು ಒಂದು ಮುಷ್ಟಿ ಆಗುವಷ್ಟು ಬಿಡಿಸಿಕೊಳ್ಳಬೇಕು ನಿಮ್ಮ ಕೂದಲು ಉದುರುತ್ತಿದೆ ಅಥವಾ ಉದುರುವುದಕ್ಕೆ ಪ್ರಾರಂಭವಾಗುತ್ತಿದೆ ಬಿಳಿಕೂದಲ ಆಗುವುದಕ್ಕೆ ಪ್ರಾರಂಭವಾಗುತ್ತಿದೆ ಎಂಬುವವರು ಕೂಡ ಇದನ್ನು ಬಳಸಬಹುದು ಈ ಮನೆಮದ್ದನ್ನು ಬಳಸುವುದರಿಂದ ಕೂದಲು ಚೆನ್ನಾಗಿ ಬೆಳೆಯುತ್ತದೆ ಜೊತೆಗೆ ಬಿಳಿಕೂದಲು ಆಗುವುದನ್ನು ತಪ್ಪಿಸುತ್ತದೆ. ಬಿಡಿಸಿಟ್ಟಂತಹ ಕರಿಬೇವಿನ ಎಲೆಗಳನ್ನು ಚೆನ್ನಾಗಿ ತೊಳೆದುಕೊಂಡು ಅದನ್ನು ಕಡಿಮೆ ಬಿಸಿಲಿನಲ್ಲಿ ಒಣಗಿಸಿಕೊಳ್ಳಬೇಕು.
ಎರಡರಿಂದ ಮೂರು ದಿನಗಳಲ್ಲಿ ನಿಮಗೆ ಗರಿಗರಿಯಾದ ಕರಿಬೇವಿನ ಎಲೆ ಸಿಗುತ್ತದೆ. ಈ ಗರಿಗರಿಯಾದ ಕರಿಬೇವಿನ ಎಲೆಗಳನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ಅದನ್ನು ಪುಡಿ ಮಾಡಿಕೊಳ್ಳಬೇಕು ನೀವು ಒಂದು ಸಾರಿ ಕರಿಬೇವಿನ ಎಲೆಗಳನ್ನು ನುಣ್ಣಗೆ ಪುಡಿಮಾಡಿಟ್ಟುಕೊಂಡರೆ ಮೂರು ನಾಲ್ಕು ತಿಂಗಳು ಆರಾಮಾಗಿ ಇದನ್ನು ಬಳಸಬಹುದು.
ಕರಿಬೇವಿನಲ್ಲಿ ಕಬ್ಬಿಣದ ಅಂಶ ಇರುತ್ತದೆ ನಾವು ಕರಿಬೇವಿನ ಸೊಪ್ಪಿನ ಚಟ್ನಿಯನ್ನು ತಿನ್ನುವುದರಿಂದ ದೇಹಕ್ಕೆ ಕಬ್ಬಿಣಾಂಶ ಸಿಗುತ್ತದೆ ಜೊತೆಗೆ ಪುಡಿ ಮಾಡಿಟ್ಟುಕೊಂಡಿರುವಂತಹ ಕರಿಬೇವಿನ ಪುಡಿಯನ್ನು ಊಟ ಮಾಡುವಾಗ ಅನ್ನಕ್ಕೆ ಒಂದು ಚಮಚ ಹಾಕಿ ಅದಕ್ಕೆ ಸ್ವಲ್ಪ ಉಪ್ಪನ್ನು ಹಾಕಿ ಒಂದು ಚಮಚ ತುಪ್ಪವನ್ನು ಹಾಕಿ ಕಲಸಿ ತಿಂದರೆ ದೇಹಕ್ಕೆ ಕಬ್ಬಿಣದ ಅಂಶ ದೊರೆಯುತ್ತದೆ.
ನಂತರ ನೀವು ಒಂದು ಕಬ್ಬಿಣದ ಬಾಣಲಿ ಅಥವಾ ರೊಟ್ಟಿ ಹಂಚನ್ನು ತೆಗೆದುಕೊಂಡು ಅದಕ್ಕೆ ಮೂರರಿಂದ ನಾಲ್ಕು ಚಮಚ ಕೊಬ್ಬರಿ ಎಣ್ಣೆ ಹಾಕಿ ಕೊಳ್ಳಬೇಕು ಅದಕ್ಕೆ ಒಂದರಿಂದ ಒಂದೂವರೆ ಚಮಚ ಆಗುವಷ್ಟು ಕರಿಬೇವಿನ ಪುಡಿಯನ್ನು ಹಾಕಿಕೊಳ್ಳಬೇಕು. ನಂತರ ಅದನ್ನು ಚೆನ್ನಾಗಿ ಮಿಶ್ರಣ ಮಾಡಬೇಕು.
ನಾವು ಕಬ್ಬಿಣದ ಹಂಚನ್ನು ಯಾಕೆ ಬಳಸಬೇಕೆಂದರೆ ಈ ರೀತಿಯ ತಯಾರಿಸಿ ಕೊಳ್ಳುವುದರಿಂದ ಕೂದಲು ಕಪ್ಪಾಗುತ್ತದೆ ಕಬ್ಬಿಣಾಂಶ ನಮ್ಮ ಕೂದಲಿಗೆ ಸಿಗುವುದರಿಂದ ಕೂದಲಿಗೂ ಒಳ್ಳೆಯ ಬಣ್ಣ ಬರುತ್ತದೆ. ಹೀಗೆ ಎಣ್ಣೆಯಿಂದ ತಯಾರಿಸಿ ಕೊಳ್ಳುವಾಗ ಅದಕ್ಕೆ ಯಾವುದೇ ರೀತಿ ಬಿಸಿಮಾಡುವ ಅಗತ್ಯ ಇರುವುದಿಲ್ಲ ಈ ಪುಡಿಯನ್ನು ಒಂದರಿಂದ ಎರಡು ತಾಸು ಎಣ್ಣೆಯಲ್ಲಿ ಚೆನ್ನಾಗಿ ನೆನೆಯುವುದಕ್ಕೆ ಬಿಡಬೇಕು. ನೀವು ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡಿಕೊಂಡು ಅದನ್ನು ಬಾಟಯಲ್ಲಿ ಹಾಕಿ ತಿಂಗಳುಗಟ್ಟಲೆ ಬಳಸಬಹುದು.
ಈ ರೀತಿ ತಯಾರಿಸಿದ ಎಣ್ಣೆಯನ್ನು ನಿಮ್ಮ ಕೂದಲಿಗೆ ಹಚ್ಚಬೇಕು ಈ ರೀತಿಯಾಗಿ ಮಾಡುವುದರಿಂದ ಎಲ್ಲ ಪೋಷಕಾಂಶಗಳು ನೇರವಾಗಿ ನಿಮ್ಮ ಕೂದಲಿನ ಬುಡಕ್ಕೆ ಸಿಗುತ್ತದೆ. ಇದರಿಂದ ಕೂದಲು ಉದುರುವ ಸಮಸ್ಯೆ ದೂರವಾಗುತ್ತದೆ. ಹೀಗೆ ಎಣ್ಣೆ ಹಚ್ಚಿದ ಕನಿಷ್ಠ ಎರಡು ತಾಸಿನ ನಂತರ ಸೀಗೆಕಾಯಿ ಅಥವಾ ಅಂಟವಾಳಕಾಯಿನ್ನು ಬಳಸಿ ತಲೆ ಸ್ನಾನ ಮಾಡಬೇಕು.
ಇನ್ನು ನಾವು ನಿಮಗೆ ಕರಿಬೇವಿನಿಂದ ತಯಾರಿಸುವಂತಹ ಟೋನರನ್ನು ತಿಳಿಸಿಕೊಡುತ್ತೇವೆ. ಇದು ಕೂಡ ಕೂದಲಿಗೆ ತುಂಬಾ ಆರೋಗ್ಯಕರವಾದದ್ದು ಅದನ್ನು ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳುವುದಾದರೆ, ಒಂದು ಬಾಣಲಿಗೆ ಒಂದು ಲೋಟ ನೀರನ್ನು ಹಾಕಿ ಅದಕ್ಕೆ ಇಪ್ಪತ್ತರಿಂದ ಮೂವತ್ತು ಕರಿಬೇವಿನ ಎಲೆಗಳನ್ನು ಹಾಕಬೇಕು ನಂತರ ಅದಕ್ಕೆ ಐದರಿಂದ ಆರು ನಿಂಬೆಹಣ್ಣಿನ ಎಲೆಗಳನ್ನು ಹಾಕಬೇಕು
ನಂತರ ಅದನ್ನು ಎರಡರಿಂದ ಮೂರು ನಿಮಿಷ ಚೆನ್ನಾಗಿ ಕುದಿಸಬೇಕು ಆಗ ನಿಂಬೆಹಣ್ಣಿನ ಮತ್ತು ಕರಿಬೇವಿನ ಎಲೆಯಲ್ಲಿರುವಂತಹ ಸತ್ವ ನೀರಿನಲ್ಲಿ ಬಿಟ್ಟುಕೊಳ್ಳುತ್ತದೆ ನಂತರ ಬೆಂಕಿಯನ್ನು ಆರಿಸಿ ಅದನ್ನು ತಣ್ಣಗಾಗಲು ಬಿಡಬೇಕು ನಂತರ ಆ ನೀರನ್ನು ಸೋಸಿ ಒಂದು ಸ್ಪ್ರೇ ಬಾಟಲಿಯಲ್ಲಿ ಹಾಕಿಕೊಳ್ಳಬೇಕು. ನಂತರ ಅದನ್ನು ಕೂದಲಿನ ಬುಡಕ್ಕೆ ಮತ್ತು ಕೂದಲು ಎಷ್ಟು ಉದ್ದ ಇದೆ ಅಷ್ಟಕ್ಕೂ ಅದನ್ನು ಸ್ಪ್ರೇ ಮಾಡಬೇಕು. ಸ್ಪ್ರೇ ಮಾಡಿದ ನಂತರ ನಿಧಾನವಾಗಿ ಮಸಾಜ್ ಮಾಡಿಕೊಳ್ಳಬೇಕು ಇದರಿಂದ ರಕ್ತಸಂಚಾರ ಕೂಡ ಚೆನ್ನಾಗಿ ಆಗುತ್ತದೆ ಜೊತೆಗೆ ಕೂದಲು ಮೃದುವಾಗುತ್ತದೆ.
ಯಾರಿಗೆ ತುಂಬಾ ಒರಟಾಗಿರುವ ಕೂದಲು ಇರುತ್ತದೆ ಅವರು ಇದನ್ನು ಬಳಸಬಹುದು ಇದರಿಂದ ಕೂದಲು ಮೃದುವಾಗುತ್ತದೆ ಮತ್ತು ಸಿಲ್ಕಿ ಆಗುತ್ತದೆ ಈ ರೀತಿಯ ಟೋನರನ್ನು ನೀವು ಯಾವಾಗ ಬೇಕಾದರೂ ಮಾಡಿಕೊಳ್ಳಬಹುದು ಆದರೆ ಟೋನರನ್ನು ಉಪಯೋಗಿಸುವಾಗ ತಲೆಕೂದಲು ಶುಚಿಯಾಗಿರಬೇಕು. ಇದನ್ನು ಬಳಸಿದ ನಂತರ ಎರಡರಿಂದ ಮೂರು ತಾಸು ಹಾಗೆ ಇಟ್ಟುಕೊಳ್ಳಬೇಕು ನಂತರ ತಣ್ಣೀರು ಅಥವಾ ಉಗುರು ಬೆಚ್ಚಗಿನ ನೀರಿನಿಂದ ಯಾವುದೇ ಶಾಂಪು ಸೋಪನ್ನು ಬಳಸದೆ ತಲೆಯನ್ನು ತೊಳೆದುಕೊಳ್ಳಬೇಕು.
ಸ್ನೇಹಿತರೆ ನಿಮಗೂ ಕೂಡ ಕೂದಲು ಉದುರುವ ಸಮಸ್ಯೆ ಬಿಳಿ ಕೂದಲಿನ ಸಮಸ್ಯೆ ಅಥವಾ ಕೂದಲು ತುಂಬಾ ಒರಟಾಗಿದ್ದರೆ ನಾವು ಮೇಲೆ ತಿಳಿಸಿರುವ ಮನೆಮದ್ದನ್ನು ಸುಲಭವಾಗಿ ತಯಾರಿಸಿ ಅದನ್ನು ಬಳಸಿ ಉತ್ತಮವಾದ ಪರಿಣಾಮವನ್ನು ಕಂಡುಕೊಳ್ಳಿ. ಇದರಿಂದ ಮೃದುವಾದ ಸಿಲ್ಕಿ ಆದ ಕೂದಲು ನಿಮ್ಮದಾಗುತ್ತದೆ.ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಸ್ನೇಹಿತರಿಗೂ ಪರಿಚಿತರಿಗೂ ತಿಳಿಸಿರಿ.