ಇತ್ತೀಚಿನ ದಿನಗಳಲ್ಲಿ ತಲೆಕೂದಲು ಉದುರುವಂತ ಸಮಸ್ಯೆ ಪುರುಷರಲ್ಲಿ ಹಾಗೂ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ, ಇದಕ್ಕೆ ಹಲವು ಕಾರಣಗಳಿವೆ ಇಂದಿನ ಆಹಾರ ಶೈಲಿ ಹಾಗೂ ಒತ್ತಡದ ಜೀವನ ಕೂಡ ಕಾರಣವಾಗಿದೆ. ಸಾಮಾನ್ಯವಾಗಿ ಪುರುಷರಲ್ಲಿ ಹಾಗೂ ಮಹಿಳೆರಲ್ಲಿ ತಲೆಕೂದಲು ಉದುರುತ್ತವೆ ಆದ್ರೆ ಅತಿಯಾಗಿ ಉದುರುತ್ತ ಹೋದರೆ ಅದು ಸಮಸ್ಯೆಯಾಗಿ ಕಾಡುತ್ತದೆ. ಇದರಿಂದ ತಲೆಕೂದಲು ಉದುರುತ್ತ ಹೋಗಿ ತಲೆ ಬುರುಡೆ ಕಾಣುತ್ತದೆ. ಇಂತಹ ಸಮಸ್ಯೆಗಳಿಗೆ ಒಂದಿಷ್ಟು ಮನೆಮದ್ದುಗಳನ್ನು ಈ ಮೂಲಕ ಪರಿಹಾರ ಮಾರ್ಗಗಳಾಗಿ ತಿಳಿಯೋಣ.
ಮೊದಲನೆಯದಾಗಿ ತಲೆಕೂದಲಿಗೆ ಕೊಬರಿ ಎಣ್ಣೆಯನ್ನು ಹೆಚ್ಚಾಗಿ ಬಳಸಬೇಕು ಯಾಕೆಂದರೆ ತಲೆ ಕೂದಲ ತೇವಾಂಶವನ್ನು ಕಾಪಾಡಲು ಕೊಬ್ಬರಿ ಎಣ್ಣೆ ಉಪಯೋಗಕಾರಿ, ಆದ್ದರಿಂದ ಪ್ರತಿದಿನ ಅಥವಾ ವಾರದಲ್ಲಿ 3 ನಾಲ್ಕು ಬಾರಿಯಾದರೂ ತಲೆಗೆ ಕೊಬ್ಬರಿ ಎಣ್ಣೆ ಹಚ್ಚುವ ಅಭ್ಯಾಸ ಇದ್ರೆ ಉತ್ತಮ. ಇನ್ನು ರಾತ್ರಿ ಮಲಗುವ ಮುಂಚೆ ಕೊಬ್ಬರಿ ಎಣ್ಣೆಯನ್ನು ತಲೆಬುಡಕ್ಕೆ ನಯವಾಗಿ ತಿಕ್ಕಿ ಮಸಾಜ್ ರೀತಿ ಮಾಡಿ ಇದರಿಂದ ತಲೆಕೂದಲು ಉದುರುವುದು ಕಡಿಮೆಯಾಗುವುದು. ಅಷ್ಟೇ ಅಲ್ದೆ ತಲೆಕೂದಲು ಸೊಂಪಾಗಿ ಬೆಳೆಯಲು ದಾಸವಾಳದ ಹೂವಿನ ರಸವನ್ನು ಕೊಬ್ಬರಿ ಎಣ್ಣೆಯಲ್ಲಿ ಬೆರಸಿ ಬಿಸಿ ಮಾಡಿ ಪ್ರತಿದಿನ ಹಚ್ಚುವುದರಿಂದ ತಲೆಕೂದಲು ಉದುರುವುದು ನಿಲ್ಲುತ್ತದೆ ಹಾಗೂ ಕೂದಲು ಸೊಂಪಾಗಿ ಬೆಳೆಯಲು ಪ್ರಾರಂಭಿಸುತ್ತದೆ ಅಲ್ಲದೆ ತಲೆಕೂದಲು ಕಪ್ಪಾಗಿ ಬೆಳೆಯುವುದು.
ಇನ್ನು ತಲೆಕೂದಲು ಬೆಳೆಯಲು ವಾರದಲ್ಲಿ ಮೂರರಿಂದ ನಾಲ್ಕು ಬಾರಿಯಾದರು ದಾಸವಾಳದ ಎಲೆಗಳಿಂದ ರಸವನ್ನು ತಗೆದು ಕೂದಲಿಗೆ ಹಚ್ಚಿಕೊಂಡು ಚನ್ನಾಗಿ ತಿಕ್ಕಿ ಅರ್ಧ ಗಂಟೆಯ ನಂತರ ತಲೆ ಸ್ನಾನ ಮಾಡುವುದರಿಂದ ತಲೆಕೂದಲು ಸೊಂಪಾಗಿ ಬೆಳೆಯುತ್ತದೆ. ಒತ್ತಡವನ್ನು ನಿವಾರಿಸಿಕೊಳ್ಳುವುದರ ಜೊತೆಗೆ ಉತ್ತಮ ಪೋಷಕಾಂಶಗಳನ್ನು ಹೊಂದಿರುವಂತ ಸೊಪ್ಪು ತರಕಾರಿ ಹಣ್ಣುಗಳನ್ನು ಸೇವನೆ ಮಾಡುವುದರಿಂದ ಕೂಡ ತಲೆಕೂದ ಅರೋಗ್ಯ ಉತ್ತಮ ರೀತಿಯಲ್ಲಿರುತ್ತದೆ.