ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು ಸರ್ವೇಸಾಮಾನ್ಯವಾಗಿದೆ. ಇದಕ್ಕೆ ಮೂಲವಾದ ಕಾರಣವೇನೆಂದರೆ ಈಗಿನ ಆಹಾರ ಪದ್ಧತಿ ಮತ್ತು ಜೀವನಶೈಲಿ. ಮೊದಲಿನ ಆಹಾರ ಪದ್ಧತಿ ಬಹಳ ಚೆನ್ನಾಗಿತ್ತು. ಆದ್ದರಿಂದ ಕೂದಲು ಉದುರುವಿಕೆಯ ಪ್ರಮಾಣ ಬಹಳ ಕಡಿಮೆ ಇತ್ತು. ಈಗಿನ ಮಾರುಕಟ್ಟೆಯಲ್ಲಿ ಸಿಗುವ ಅನೇಕ ರೀತಿಯ ಶಾಂಪುಗಳು ಇದಕ್ಕೆ ಕಾರಣವಾಗಿದೆ. ಆದ್ದರಿಂದ ನಾವು ಇಲ್ಲಿ ಕೂದಲು ಉದುರುವಿಕೆ ಸಮಸ್ಯೆ ಪರಿಹಾರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಮೊದಲು ತಲೆಗೆ ಶೀಗೇಕಾಯಿ ಮತ್ತು ದಾಸವಾಳದ ಸೊಪ್ಪುಗಳನ್ನು ಬಳಸುತ್ತಿದ್ದರು. ಇದರಿಂದ ತಲೆಗೆ ಯಾವುದೇ ಹಾನಿಯಿರಲಿಲ್ಲ. ಕೂದಲು ಚೆನ್ನಾಗಿ ಇರುತ್ತಿತ್ತು. ಇದರಿಂದ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುತ್ತಿರಲಿಲ್ಲ. ಆದರೆ ಈಗ ಹಾಗಲ್ಲ. ತಲೆಗೆ ಶಾಂಪೂಗಳನ್ನು ಬಳಸುತ್ತಾರೆ. ಇದಕ್ಕೆ ರಾಸಾಯನಿಕಗಳನ್ನು ಹಾಕಿರುತ್ತಾರೆ. ಆದ್ದರಿಂದ ಕೂದಲಿನ ಆರೋಗ್ಯ ಬಹಳ ಕಡಿಮೆ. ಹಾಗೆಯೇ ತಲೆಗೆ ಎಣ್ಣೆಯನ್ನು ಎಲ್ಲರೂ ಹಾಕುವುದಿಲ್ಲ.
ತಲೆಗೆ ಎಣ್ಣೆಯನ್ನು ಹಾಕಬೇಕು. ಏಕೆಂದರೆ ಇದರಿಂದ ತಲೆಯು ತಂಪಾಗುತ್ತದೆ. ಹಾಗೆಯೇ ಕೂದಲಿನ ಬುಡಕ್ಕೆ ಹೋಗಿ ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ. ಹಾಗೆಯೇ ತಲೆಸ್ನಾನ ಮಾಡುವಾಗ ತಣ್ಣನೀರನ್ನು ಹಾಕಬೇಕು. ಬಿಸಿ ನೀರಿನಲ್ಲಿ ತಲೆಸ್ನಾನವನ್ನು ಮಾಡಬಾರದು. ಹಾಗೆಯೇ ನೇರವಾಗಿ ಅತಿಯಾದ ಬಿಸಿಲಿಗೆ ತಲೆಯನ್ನು ಒಡ್ಡಬಾರದು. ಇದರಿಂದ ತಲೆಗೆ ಹಾನಿಯಾಗುತ್ತದೆ. ಅತಿ ಹೆಚ್ಚು ರಾಸಾಯನಿಕಗಳಿಂದ ಕೂಡಿದ ಜೆಲ್ ಮತ್ತು ಶಾಂಪೂಗಳನ್ನು ಬಳಸಬಾರದು.
ಹಾಗೆಯೇ ಇಂತಹ ಸೋಪ್ ಗಳನ್ನು ಬಳಸಬಾರದು. ಪೌಷ್ಟಿಕಾಂಶಗಳಿಂದ ಕೂಡಿದ ಆಹಾರವನ್ನು ಸೇವನೆ ಮಾಡಬೇಕು. ಆದರೂ ಕೂದಲು ಉದುರಿದರೆ ಆಯುರ್ವೇದ ವೈದ್ಯರನ್ನು ಸಂಪರ್ಕ ಮಾಡುವುದು ಒಳ್ಳೆಯದು. ಏಕೆಂದರೆ ಇದರಿಂದ ಯಾವುದೇ ಹಾನಿಯಿಲ್ಲ. ಹಾಗೆಯೇ ದಿನನಿತ್ಯ ಮೊಳಕೆ ಕಾಳುಗಳನ್ನು ತಿನ್ನಬೇಕು. ಇದು ಸಹ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಿಂದ ದೇಹಕ್ಕೆ ಎಲ್ಲಾ ರೀತಿಯ ವಿಟಮಿನ್ ಗಳು ಸಿಗುತ್ತವೆ.