ಇತ್ತೀಚಿನ ದಿನಗಳಲ್ಲಿ ಧೂಳು ಮಾಲಿನ್ಯ ಇವುಗಳಿಂದ ಕೂದಲು ಉದುರುವ ಸಮಾಸ್ಯೆ ಎಲ್ಲರಿಗೂ ಇದೆ. ಇದರಿಂದಾಗಿ ಎಲ್ಲರೂ ಚಿಂತೆಗೆ ಒಳಗಾಗಿ ಮತ್ತಷ್ಟು ಕೂದಲು ಉದುರುವುದು ಹೆಚ್ಚೇ ಆಗತ್ತೆ. ಇನ್ನು ಕೆಲವರು ಹಕವಾರು ವೈದ್ಯರನ್ನ ಭೇಟಿ ಮಾಡಿ ತೆಗೆದುಕೊಳ್ಳದ ಔಷಧಿಗಳೂ ಇಲ್ಲದಿರಲ್ಲ. ಇದರಿಂದ ಸೈಡ್ ಎಫ್ಫೆಕ್ಟ್ ಜಾಸ್ತಿ ಇರತ್ತೆ. ಹಾಗಾಗಿ ಮನೆಯಲ್ಲೆ ಸಿಗುವ ಈ ಎರಡೂ ವಸ್ತುಗಳನ್ನು ಬಳಸಿ ಹೇಗೆ ಕೂದಲು ಉದುರದಂತೆಯೇ ಹಾಗೂ ದಟ್ಟವಾಗಿ ಬೆಳೆಯುವಂತೆ ನೋಡಿಕೊಳ್ಳಬಹುದು ಅನ್ನೋದನ್ನ ನೋಡೋಣ.
ಈ ಒಂದು ಪ್ಯಾಕ್ ಮಾಡೋಕೆ ಬೇಕಾಗಿರೋದು ಕೇವಲ ಎರಡು ವಸ್ತುಗಳು. 10 ರಿಂದ 15 ದಾಸವಾಳದ ಎಲೆಗಳು ಮತ್ತು ಸಣ್ಣದಾದ ಅಲೋವೆರಾ. ಇದನ್ನ ಹೇಗೆ ಮಾಡೋದು ಮತ್ತು ಹೇಗೆ ಬಳಸೋದು ಅನ್ನೋದನ್ನ ನೋಡೋಣ. ಮೊದಲು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಎಲೋವೆರದ ಮೇಲಿನ ಪದರನ್ನು ತೆಗೆದು ಅದರ ಲೋಳೆಯನ್ನು ಮಿಕ್ಸಿ ಜಾರಿಗೆ ಹಾಕಿಕೊಳ್ಳಬೇಕು. ನಂತರ ತೊಳೆದು ಸ್ವಚ್ಛ ಮಾಡಿಕಿಂದ ದಾಸವಾಳದ ಎಲೆಗಳನ್ನು ಚೂರು ಮಾಡಿ ಹಾಕಿಕೊಂಡು ಸೆಪ ನೀರು ಸೇರಿಸಿ ಪೇಸ್ಟ್ ಮಾಡಿಕೊಳ್ಳಬೇಕು. ನಂತರ ತಲೆಗೆ ಎಣ್ಣೆ ಹಚ್ಚಿಕೊಂಡಿದ್ದರೂ ಅಥವಾ ಹಾಗೆ ಇದ್ದರೂ ಕೂಡ ಈ ಪೇಸ್ಟ್ ಅನ್ನು ಬಳಸಬಹುದು.
ನಂತರ ಇದನ್ನು ತಲೆಯ ಬುಡಕ್ಕೆ ಹಚ್ಚಿ 15 ರಿಂದ 20 ನಿಮಿಷಗಳ ಕಾಲ ಬಿಡಬೇಕು. ನಂತರ ಯಾವುದೇ ಆಯುರ್ವೇದಿಕ್ ಅಥವಾ ಹರ್ಬಲ್ ಶಾಂಪೂ ಬಳಸಿ ಉಗುರು ಬೆಚ್ಚಗಿನ ನೀರಿನಲ್ಲಿ ತಲೆ ಸ್ನಾನ ಮಾಡಬಹುದು. ಯಾರಿಗೆಲ್ಲ ಕೂದಲು ಉದುರುವ ಸಮಸ್ಯೆ ಅಥವಾ ಕೂದಲ ಬೆಳವಣಿಗೆ ಸಮಸ್ಯೆ ಇರತ್ತೆ ಅವರೆಲ್ಲ ಒಮ್ಮೆ ಇದನ್ನ ಟ್ರೈ ಮಾಡಿ ನೋಡಿ ಉತ್ತಮ ಫಲಿತಾಂಶ ಸಿಗತ್ತೆ.