ಈ ಎಣ್ಣೆ ನಿಮ್ಮ ಕೂದಲನ್ನು ಎಷ್ಟು ಕಪ್ಪು ಮಾಡುತ್ತೆ ಅಂದ್ರೆ ನೀವು ಹೇರ್ ಡ್ರೈ ಮರೆತು ಬಿಡುತ್ತೀರ

0 4

ಈಗಿನ ದಿನಗಳಲ್ಲಿ ತಲೆಕೂದಲು ಉದುರುವುದು ಹೆಚ್ಚಾಗಿ ಸರ್ವೇ ಸಾಮಾನ್ಯ ಆಗಿದೆ. ಮೊದಲು ಹೆಣ್ಣು ಮಕ್ಕಳಿಗೆ ಕೂದಲು ಬಹಳ ಚೆನ್ನಾಗಿ ಇರುತ್ತಿತ್ತು. ಏಕೆಂದರೆ ಆಗಿನ ಆಹಾರ ಪದ್ಧತಿ ಮತ್ತು ಯಾವುದೇ ರಾಸಾಯನಿಕಯುಕ್ತಗಳನ್ನು ತಲೆಗೆ ಬಳಸುತ್ತಿರಲಿಲ್ಲ. ಕೇವಲ ಶೀಗೆಪುಡಿ ಅಥವಾ ದಾಸವಾಳದ ಸೊಪ್ಪನ್ನು ಹಾಕುತ್ತಿದ್ದರು. ಈಗಿನ ಆಹಾರ ಪದ್ಧತಿ ಬಹಳ ಬದಲಾವಣೆ ಆಗಿದೆ. ಆದ್ದರಿಂದ ನಾವು ಇಲ್ಲಿ ಕೂದಲು ಉದುರುವುದನ್ನು ನಿಲ್ಲಿಸಲು ಮತ್ತು ಕಪ್ಪಾಗಿಸಿಕೊಳ್ಳಲು ಒಂದು ಪರಿಹಾರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಸಾಮಾನ್ಯವಾಗಿ ಎಲ್ಲರಿಗೂ ವಯಸ್ಸಾಗುತ್ತಾ ಹೋದಂತೆ ಕೂದಲಿಗೂ ವಯಸ್ಸಾಗುತ್ತದೆ. ಅಂದರೆ ಕಪ್ಪಾಗಿರುವ ಕೂದಲು ಬಿಳಿಯಾಗುತ್ತಾ ಹೋಗುತ್ತದೆ. ಕೆಲವರಿಗೆ ಕೂದಲು ಬೇಗ ಕಪ್ಪಾಗುತ್ತದೆ. ಹಾಗೆಯೇ ಇನ್ನು ಕೆಲವರಿಗೆ ಸರಿಯಾದ ಸಮಯಕ್ಕೆ ಕೂದಲು ಬಿಳಿಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕೂದಲು ಬಿಳಿಯಾಗಲು ಯಾವುದೇ ವಯಸ್ಸು ಎನ್ನುವುದು ಇಲ್ಲ. ಚಿಕ್ಕವರಿಂದ ಹಿಡಿದು ದೊಡ್ಡವರಿಗೆ ಕೂದಲು ಬಿಳಿಯಾಗುವುದು ಸರ್ವೇ ಸಾಮಾನ್ಯ ಆಗಿದೆ. ಕೂದಲನ್ನು ಕಪ್ಪು ಮಾಡಿಕೊಳ್ಳಲು ಮಾರುಕಟ್ಟೆಯಲ್ಲಿ ಎಷ್ಟೋ ಬಗೆಯ ಪ್ರೊಡಕ್ಟ್ ಗಳು ಸಿಗುತ್ತವೆ.

ಈಗ ಹೆಚ್ಚಾಗಿ ಎಲ್ಲರೂ ಅವುಗಳನ್ನು ಬಳಸಿ ಕೂದಲನ್ನು ಕಪ್ಪು ಮಾಡಿಕೊಳ್ಳುತ್ತಾರೆ. ನಂತರದಲ್ಲಿ ಒಂದು ತಿಂಗಳುಗಳ ಕಾಲ ಮತ್ತೆ ಕೂದಲು ಬಿಳಿಯಾಗುತ್ತದೆ. ಮತ್ತೆ ಅದೇ ಪ್ರೊಡಕ್ಟ್ ನ್ನು ಬಳಸುತ್ತಾರೆ. ಆದರೆ ಇದರಲ್ಲಿ ರಾಸಾಯನಿಕಗಳನ್ನು ಅತಿಯಾಗಿ ಬಳಕೆ ಮಾಡಿರುತ್ತಾರೆ. ಇದರಿಂದ ಅಡ್ಡ ಪರಿಣಾಮಗಳು ಉಂಟಾಗುತ್ತವೆ. ಆದ್ದರಿಂದ ರಾಸಾಯನಿಕವಲ್ಲದವುಗಳನ್ನು ಬಳಸಬೇಕು. ಇದರಿಂದ ಯಾವುದೇ ಅಡ್ಡ ಪರಿಣಾಮಗಳು ಇರುವುದಿಲ್ಲ.

ಮೊದಲು ಒಂದು ಕಪ್ ನಷ್ಟು ಸಾಸಿವೆ ಎಣ್ಣೆಯನ್ನು ತೆಗೆದುಕೊಳ್ಳಬೇಕು. ನಂತರದಲ್ಲಿ ಅದಕ್ಕೆ ಕಾಲು ಕಪ್ ಮೆಂತೆಯನ್ನು ಹಾಕಬೇಕು. ನಂತರದಲ್ಲಿ 2ಚಮಚ ನೆಲ್ಲಿಕಾಯಿ ಪುಡಿಯನ್ನು ಹಾಕಬೇಕು. ಕೊನೆಯದಾಗಿ ಒಂದು ಚಮಚ ಮೆಹೆಂದಿಪುಡಿಯನ್ನು ಹಾಕಬೇಕು. ಇವುಗಳನ್ನು ಚೆನ್ನಾಗಿ ಕಾಯಿಸಬೇಕು. ಕಾಯಿಸುವಾಗ ಕೈಯಾಡುತ್ತಲೇ ಇರಬೇಕು. ಇಲ್ಲವಾದಲ್ಲಿ ಸೀದುಹೋಗುತ್ತವೆ. ನಂತರದಲ್ಲಿ ಇದನ್ನು ಚೆನ್ನಾಗಿ ಸೋಸಿಕೊಳ್ಳಬೇಕು. ಇದನ್ನು ದಿನನಿತ್ಯ ಬಳಕೆ ಮಾಡುವುದರಿಂದ ಕೂದಲು ಕಪ್ಪಾಗಿ ಚೆನ್ನಾಗಿ ಬೆಳೆಯುತ್ತದೆ.

Leave A Reply

Your email address will not be published.