ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಹಸು ಕುರಿ ಆಡು ಹಂದಿ ಕೋಳಿ ಘಟಕಗಳನ್ನು ಸ್ಥಾಪಿಸಲು ಎರಡು ಲಕ್ಷದ ವರೆಗೆ ಸಾಲವನ್ನು ನೀಡುತ್ತದೆ ಪಶುಸಂಗೋಪನಾ ವಲಯವು ಕೃಷಿ ಆಧಾರಿತ ಗ್ರಾಮೀಣ ಅರ್ಥವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಚಟುವಟಿಕೆಗಳಲ್ಲಿ ಮುಖ್ಯವಾಗಿ ಹೈನುಗಾರಿಕೆ ಕುರಿ ಸಾಕಾಣಿಕೆ ಮೇಕೆ ಸಾಕಾಣಿಕೆ ಹಂದಿ ಸಾಕಾಣಿಕೆ ಮತ್ತು ಕೋಳಿ ಸಾಕಾಣಿಕೆ ಒಳಗೊಂಡಿವೆ
ಈ ಚಟುವಟಿಕೆಗಳು ನಿರ್ದಿಷ್ಠವಾಗಿ ಗ್ರಾಮೀಣ ಭಾರತದಲ್ಲಿ ಸಾಂಪ್ರದಾಯಿಕವಾಗಿದ್ದರೂb ವೈಜ್ಞಾನಿಕ ಪ್ರಗತಿ, ಉದಾರೀಕರಣ ಮತ್ತು ಸುಧಾರಣೆಗಳ ಪ್ರಕ್ರಿಯೆಯು ಈ ವಲಯದಲ್ಲಿ ಖಾಸಗಿಯ ಸಣ್ಣ ಮತ್ತು ಬೃಹತ್ ಉದ್ಯಮದಾರರು ಬಂಡವಾಳ ಹೂಡಲು ದಾರಿಮಾಡಿಕೊಟ್ಟಿದೆ. ನಾವು ಈ ಲೇಖನದ ಮೂಲಕ ಸರ್ಕಾರವು ನೀಡುವ ಬಡ್ಡಿರಹಿತ ಸಾಲ ಸೌಲಭ್ಯದ ಬಗ್ಗೆ ತಿಳಿದುಕೊಳ್ಳೊಣ.
ಕರ್ನಾಟಕ ಸರ್ಕಾರವು ಹೈನುಗಾರಿಕೆ ಮತ್ತು ಮೀನುಗಾರಿಕೆ ಮಾಡಲು ಎರಡು ಲಕ್ಷದಷ್ಟು ಹಣವನ್ನು ಬಡ್ಡಿರಹಿತ ಸಾಲವನ್ನು ನೀಡುತ್ತಿದೆ ಬರುವ ಆರ್ಥಿಕ ವರ್ಷ ದ ಒಳಗಡೆ ಕಾಲಾವಧಿ ಹೊಂದಿದೆ ಎರಡು ಲಕ್ಷ ದಷ್ಟು ಬಡ್ಡಿರಹಿತ ಸಾಲವನ್ನು ಪಡೆದುಕೊಳ್ಳಲು ಮೊದಲು ಅರ್ಜಿ ಸಲ್ಲಿಸಬೇಕು ಬಡ್ಡಿ ರಹಿತ ಸಾಲವನ್ನು ಪಡೆದುಕೊಳ್ಳುವಾಗ ಕೆಲವು ದಾಖಲೆಗಳು ಬೇಕಾಗುತ್ತದೆ ರೈತರ ಜಮೀನಿನ ಪಹಣಿ ಬೇಕಾಗುತ್ತದೆ ಹಾಗೆಯೇ ನೀರು ಬಳಕೆ ಪತ್ರ ಬೇಕಾಗುತ್ತದೆ
ರೈತರ ಆಧಾರ ಕಾರ್ಡ್ ಬೇಕಾಗುತ್ತದೆ ಹಾಗೆಯೇ ಎಸ್ಟು ಸಾಲ ಬೇಕು ಎಂಬುದು ಬಿಳಿ ಹಾಳೆಯ ಮೇಲೆ ವಿವರಣೆ ಬೇಕಾಗುತ್ತದೆ ಅದರಲ್ಲಿ ಎಸ್ಟು ಹಸು ಮೇವು ಎಲ್ಲ ವಿವರಣೆಗಳನ್ನು ಒಳಗೊಂಡ ಅಂದಾಜು ಬೇಕಾಗುತ್ತದೆ ಹಾಗೆಯೇ ಹೇಳಿಕೆ ಪತ್ರ ಬೇಕಾಗುತ್ತದೆ ರೇಷನ್ ಕಾರ್ಡ್ ಬೇಕಾಗುತ್ತದೆ ಡಿ ಸಿ ಸಿ ಬ್ಯಾಂಕ್ ನ ಉಳಿತಾಯ ಖಾತೆಯ ಜೆರಾಕ್ಸ್ ಬೇಕಾಗುತ್ತದೆ ಇವೆಲ್ಲ ದಾಖಲೆಗಳನ್ನು ಅರ್ಜಿ ಜೊತೆಗೆ ಲಗತ್ತಿಸಬೇಕು.
ಅರ್ಜಿ ಸಲ್ಲಿಸಿದ ಒಂದು ತಿಂಗಳ ಒಳಗಾಗಿ ಎರಡು ಲಕ್ಷದ ವರೆಗೆ ಬಡ್ಡಿರಹಿತ ಸಾಲ ಸಿಗುತ್ತದೆ ಕುಟುಂಬದ ಒಬ್ಬ ಸದಸ್ಯನಿಗೆ ಮಾತ್ರ ಈ ಯೋಜನೆ ಅನ್ವಹಿಸುತ್ತದೆ ಹಾಗೆಯೇ ಸ್ಥಳೀಯ ಹಾಲು ಉತ್ಪಾದಕ ಸಂಘದಲ್ಲಿ ಸದಸ್ಯರಾಗಿರುವುದು ಕಡ್ಡಾಯವಾಗಿದೆ ಗರಿಷ್ಟ ಎರಡು ಲಕ್ಷದವರೆಗೆ ಬಡ್ಡಿರಹಿತ ಸಾಲ ಕೊಡುತ್ತಾರೆ ಅದಕ್ಕಿಂತ ಹೆಚ್ಚು ಸಾಲಬೇಕಾದರೆ ಸಾಮಾನ್ಯ ಬಡ್ಡಿದರ ವಿಧಿಸುತ್ತಾರೆ ಬೆಳೆ ಸಾಲ ಪಡೆದ ರೈತರು ಈ ಸಾಲವನ್ನು ಪಡೆಯಬಹುದು
ಆದರೆ ಬೆಳೆ ಸಾಲ ಮತ್ತು ಈ ಸಾಲ ಸೇರಿ ಮೂರು ಲಕ್ಷ ವಾಗಬಾರದು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೆ ಇಪ್ಪತ್ನಾಲ್ಕು ರಷ್ಟು ಸಾಲ ವಿತರಣಾ ಗುರಿ ಹೊಂದಲಾಗಿದೆ ಸಾಲ ಮರುಪಾವತಿ ಕಡ್ಡಾಯವಾಗಿದೆ ಆಡುಗಳಿಗೆ ವಿಮೆ ಮಾಡಿಸುವುದು ಕಡ್ಡಾಯವಾಗಿದೆ ಹೀಗೆ ಹೈನುಗಾರಿಕೆ ಮಾಡುವರಿಗೆ ತುಂಬಾ ಪ್ರೋಯೋಜನ ಆಗುತ್ತದೆ ಹಾಗೂ ಸರ್ಕಾರ ಹೈನುಗಾರಿಕೆಯನ್ನು ಮಾಡುವರಿಗೆ ಈ ಮೂಲಕ ಬೆಂಬಲ ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಹೈನುಗಾರಿಕೆ ಇಲಾಖೆಯಲ್ಲಿ ವಿಚಾರಿಸಿ ಸೌಲಭ್ಯ ಪಡೆದುಕೊಳ್ಳಿ