ಮಹಾಭಾರತದ ಗುರು ದ್ರೋಣರ ಮಗ ಅಶ್ವತ್ಥಾಮ ಎಲ್ಲರಿಗೂ ತಿಳಿದಿರುತ್ತದೆ. ಅವನಿಗಿರುವ ಶಾಪವೇನು, ಅವನು ಈಗಲೂ ಇದ್ದಾನೆಯೆ ಎನ್ನುವುದನ್ನು ಈ ಲೇಖನದ ಮೂಲಕ ತಿಳಿಯೋಣ.
ದೂರ್ಯೊಧನನೊಂದಿಗೆ ಸೇರಿಕೊಂಡು ಮಹಾಭಾರತದ ಯುದ್ಧದಲ್ಲಿ ಕೌರವರ ಪರವಾಗಿ ಯುದ್ಧ ಮಾಡುತ್ತಾನೆ. ತಂದೆ ಗುರು ದ್ರೋಣರನ್ನು ಕೌರವರ ಪರವಾಗಿ ಯುದ್ಧ ಮಾಡುವಂತೆ ಮಾಡುತ್ತಾನೆ. ಅಶ್ವತ್ಥಾಮನ ಹಣೆಯಲ್ಲಿ ಒಂದು ಮಣಿಯಿರುತ್ತದೆ ಅದು ಅವನಿಗೆ ಪೂರ್ವಜರಿಂದ ಸಿಕ್ಕ ಸಂಜೀವಿನಿಯಾಗಿರುತ್ತದೆ ಅದರಿಂದ ಅನಾರೋಗ್ಯ ಕಾಡುವುದಿಲ್ಲ. ಮಹಾಭಾರತದ ಯುದ್ಧವು ಅಂತಿಮ ಹಂತವನ್ನು ತಲುಪಿರುತ್ತದೆ ಭೀಮನು ಧೂರ್ಯೊಧನನ ತೊಡೆಯನ್ನು ಮುರಿಯುತ್ತಾನೆ. ಸಾವಿಗೆ ಹತ್ತಿರದಲ್ಲಿದ್ದ ದುರ್ಯೋಧನನು ಅಶ್ವತ್ಥಾಮನನ್ನು ಕರೆದು ಪಾಂಡವರ ತಲೆಗಳನ್ನು ತಂದುಕೊಡುವಂತೆ ಕೇಳುತ್ತಾನೆ. ಅಶ್ವತ್ಥಾಮನು ರಾತ್ರಿ ಪಾಂಡವರ ಕುಟೀರಕ್ಕೆ ಹೋಗಿ ಪಾಂಡವರ ಮಕ್ಕಳ ತಲೆಯನ್ನು ತಂದು ದುರ್ಯೋಧನನಿಗೆ ತೋರಿಸುತ್ತಾನೆ. ಇದನ್ನು ತಿಳಿದ ಪಾಂಡವರು ಅಶ್ವತ್ಥಾಮನ ಮೇಲೆ ಸೇಡು ತೀರಿಸಿಕೊಳ್ಳಲು ಹೋಗುತ್ತಾರೆ. ದುಷ್ಟ ಬುದ್ಧಿ ಕಲಿತ ಅಶ್ವತ್ಥಾಮ ಉತ್ತರೆಯ ಗರ್ಭಕ್ಕೆ ಬ್ರಹ್ಮಾಸ್ತ್ರ ಪ್ರಯೋಗ ಮಾಡುತ್ತಾನೆ. ಆಗ ಕೃಷ್ಣ ಬ್ರಹ್ಮಾಸ್ತ್ರದಿಂದ ಉತ್ತರೆಯನ್ನು ರಕ್ಷಿಸುತ್ತಾನೆ. ಮತ್ತು ಅಶ್ವತ್ಥಾಮನ ಹಣೆಯಲ್ಲಿದ್ಧ ಮಣಿಯನ್ನು ಕಿತ್ತು ಶಾಪ ಕೊಡುತ್ತಾನೆ ಕಲಿಯುಗದ ಅಂತ್ಯದವರೆಗೂ ನಿನಗೆ ಸಾವು ಸಂಭವಿಸದಿರಲಿ ಕೂದಲು ರೋಮಗಳಿಂದ ರಕ್ತ ಬಸಿಯುತ್ತಿರಲಿ ಯಾರೂ ಸಹಾಯ ಮಾಡದಿರಲಿ ಎಂದು ಶಾಪ ಕೊಡುತ್ತಾನೆ. ಅಶ್ವತ್ಥಾಮ ಈಗಲೂ ಬದುಕಿದ್ದಾನೆ ಹಲವರು ನೋಡಿದ್ದಾರೆ ಮಧ್ಯಪ್ರದೇಶದ ಡಾಕ್ಟರ್ ಮನೆಗೆ ಓರ್ವ ವ್ಯಕ್ತಿ ಬಂದಿದ್ದರಂತೆ ಅವನ ಹಣೆ, ಮೈಯಿಂದ ರಕ್ತ ಹರಿಯುತ್ತಿತ್ತಂತೆ. ಡಾಕ್ಟರ್ ಮನೆಯ ಒಳಗೆ ಕರೆದು ಔಷಧಿ ಮಾಡಿದರೂ ರಕ್ತ ನಿಲ್ಲಲಿಲ್ಲ ಆಗ ಡಾಕ್ಟರ್ ಇದೆಂಥಾ ಗಾಯ ನೀನೆನು ಮಹಾಭಾರತದ ಅಶ್ವತ್ಥಾಮ ಅಲ್ಲ ಅಲ್ಲವಾ ಎಂದು ತಮಾಷೆಯಾಗಿ ಕೇಳಿ ಔಷಧಿ ತರಲು ಒಳಗೆ ಹೋಗಿ ಬರುವುದರೊಳಗೆ ಆ ಮನುಷ್ಯ ಹೋಗಿಬಿಟ್ಟನಂತೆ.
ಉತ್ತರಪ್ರದೇಶದ ಲಖಿಂಪುರದಲ್ಲಿ ಒಂದು ದೇವಸ್ಥಾನದಲ್ಲಿ ಶಿವಲಿಂಗವಿದೆ ಪೂಜಾರಿ ಬಾಗಿಲು ಹಾಕಿಕೊಂಡು ಹೋಗುತ್ತಾನೆ ಆದರೆ ಬೆಳಗ್ಗೆ ಬಂದು ನೋಡಿದಾಗ ಒಬ್ಬ ವ್ಯಕ್ತಿ ಲಿಂಗಕ್ಕೆ ಜಲಾಭಿಷೇಕ ಮಾಡಿರುತ್ತಾರೆ. ಬಾಗಿಲ ಬೀಗ ಹಾಗೆಯೇ ಇರುತ್ತದೆ ಇದನ್ನು ನೋಡಿದ ಪೂಜಾರಿ ಮೀಡಿಯಾದವರಿಗೆ ತಿಳಿಸಿದನು ಅವರ ಮುಂದೆಯೇ ಬಾಗಿಲು ಹಾಕಿ ಬೆಳಿಗ್ಗೆ ಅವರ ಮುಂದೆಯೇ ಬಾಗಿಲು ತೆರೆಯಲಾಯಿತು ಆಗ ಯಾರೋ ಲಿಂಗಕ್ಕೆ ಪೂಜೆ ಮಾಡಿದ್ದರು. ಪೂಜೆ ಮಾಡಿದವರು ಅಶ್ವತ್ಥಾಮ ಎಂಬುದು ಜನರ ನಂಬಿಕೆ. ಮಧ್ಯ ಪ್ರದೇಶದ ಅಸೀರ ಗಢದಲ್ಲೊಂದು ಕೋಟೆ ಇದೆ ಅದರಲ್ಲಿ ಶಿವಲಿಂಗವಿದೆ ಅದಕ್ಕೆ ಯಾರೋ ಪ್ರತಿದಿನ ಪೂಜೆ ಮಾಡುತ್ತಾರೆ. ಹತ್ತಿರದಲ್ಲಿ ಒಂದು ಕೆರೆಯಿದೆ ದ್ವಾಪರಾಯುಗದಲ್ಲಿ ಅಶ್ವತ್ಥಾಮ ಆ ಕೆರೆಯಲ್ಲಿ ಸ್ನಾನ ಮಾಡಿ ಪೂಜೆ ಮಾಡುತ್ತಿದ್ದರು ಈಗಲೂ ಅದನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ ಎನ್ನುವುದು ಜನರ ನಂಬಿಕೆ ಇದನ್ನು ಮೀಡಿಯಾದವರು ಬೇಧಿಸಲು ಪ್ರಯತ್ನಿಸಿ ವಿಫಲರಾದರು. ಕರ್ನಾಟಕದ ನಾರಾಯಣ ಎಂಬ ಸಂತ ಅಶ್ವತ್ಥಾಮನನ್ನು ಗುರುತಿಸಿ ಮನೆಗೆ ಕರೆದು ಮಹಾಭಾರತ ಕಥೆಯನ್ನು ಹೇಳುವಂತೆ ಕೇಳಿದನು. ಆಗ ಅಶ್ವತ್ಥಾಮ ನನ್ನ ಬಟ್ಟೆಯನ್ನು ಒದ್ದೆ ಮಾಡಿ ಒಣಹಾಕಿರುತ್ತೇನೆ ಒಣಗಲು ಬೇಕಾಗುವ ಸಮಯದಲ್ಲಿ ಕಥೆ ಹೇಳುತ್ತೇನೆ ಎನ್ನುತ್ತಾನೆ ಆಗ ಸಂತ ಒಪ್ಪುವನು ಒಮ್ಮೆ ದುರ್ಯೋಧನನ ಬಗ್ಗೆ ಹೇಳುತ್ತಾ ಅತ್ತುಬಿಡುತ್ತಾನೆ ಅಲ್ಲಿಗೆ ಅವನ ಬಟ್ಟೆ ಒಣಗುತ್ತದೆ ಅಶ್ವತ್ಥಾಮ ಹೊರಟು ಹೋಗುತ್ತಾನೆ ಹೆದರಿದ ಸಂತ ಪತ್ನಿಯ ಬಳಿ ಹೇಳುತ್ತಾನೆ. ಇದನ್ನು ತಿಳಿದ ಅಶ್ವತ್ಥಾಮ ಅವರು ಮನೆಗೆ ಹೋಗುವುದನ್ನು ಬಿಡುತ್ತಾನೆ. ಇವೆಲ್ಲ ಅಶ್ವತ್ಥಾಮ ಈಗಲೂ ಇದ್ದಾನೆ ಎನ್ನುವುದಕ್ಕೆ ಪುರಾವೆಗಳು.